ಒದ್ದೆ ಬಟ್ಟೆ ಧರಿಸಿ ಬಂದು ತನ್ನ ಗ್ಲಾಮರ್​ನಿಂದ ಮೆಟ್ ಗಾಲಾಕ್ಕೆ ಗ್ಲಾಮರಸ್ ತುಂಬಿದ ಗಾಯಕಿ ಡೋಜಾ ಕ್ಯಾಟ್

07 May 2024

Author : Manjunatha

ಮೆಟ್ ಗಾಲಾ ನಲ್ಲಿ ಸೆಲೆಬ್ರಿಟಿಗಳು ಒಬ್ಬರಿಗಿಂತಲೂ ಒಬ್ಬರು ಭಿನ್ನವಾದ, ಗ್ಲಾಮರಸ್ ಆದ ಫ್ಯಾಷನ್ ತುಂಬಿದ ಉಡುಗೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮೆಟ್ ಗಾಲಾ ಫ್ಯಾಷನ್

ಅತ್ಯಂತ ದುಬಾರಿ, ಕುಸುರಿ ಕೆಲಸದ ಉಡುಗೆಗಳ ಜೊತೆಗೆ ಸರಳವಾದ ಆದರೆ ಭಿನ್ನವಾದ ಉಡುಗೆಗಳು ಸಹ ಮೆಟ್ ಗಾಲಾನಲ್ಲಿ ಗಮನ ಸೆಳೆಯುತ್ತಿವೆ.

ಗಮನ ಸೆಳೆಯುತ್ತಿವೆ

ಪಾಪ್ ಗಾಯಕಿ ಡೋಜಾ ಕ್ಯಾಟ್ ತೀರ ಭಿನ್ನವಾದ ಉಡುಗೆ ತೊಟ್ಟು ಮೆಟ್ ಗಾಲಾನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದಾರೆ.

ಗಾಯಕಿ ಡೋಜಾ ಕ್ಯಾಟ್

ಡೋಜಾ ಕ್ಯಾಟ್ ಧರಿಸಿದ್ದ ಉಡುಗೆ ಸಖತ್ ಸೆಳೆದಿದೆ. ಡೋಜಾ ಕ್ಯಾಟ್ ಬಿಳಿ ಬಣ್ಣದ ತೆಳುವಾದ ಗೌನ್ ಮಾದರಿಯ ಬಟ್ಟೆ ತೊಟ್ಟು ಅದರ ಮೇಲೆ ನೀರು ಸುರಿದುಕೊಂಡು ಬಂದಿದ್ದರು.

ಒದ್ದೆ ಬಟ್ಟೆ ಫ್ಯಾಷನ್

ಬಿಳಿ ಬಣ್ಣದ ಒದ್ದೆ ಬಟ್ಟೆಯಿಂದಾಗಿ ನಟಿಯ ‘ಅಂತರಂಗ’ವೆಲ್ಲ ಬಹಿರಂಗವಾಗಿಬಿಟ್ಟಿತ್ತು. ತಮ್ಮ ಬಾಯ್​ಫ್ರೆಂಡ್ ಜೊತೆಗೆ ಬಂದಿದ್ದ ಡೋಜಾ ಸಖತ್ ಗ್ಲಾಮರಸ್ ಆಗಿ ಫೋಸು ನೀಡಿದರು.

ಪಾರದರ್ಶಕ ಉಡುಗೆ

ತಮ್ಮ ಚಿತ್ರ-ವಿಚಿತ್ರ ಬಟ್ಟೆಗಳಿಂದ ಡೋಜಾ ಕ್ಯಾಟ್ ಜನಪ್ರಿಯರು. ಚಿತ್ರ-ವಿಚಿತ್ರವಾದ ಆದರೆ ಗ್ಲಾಮರ್ ತುಂಬಿದ ಬಟ್ಟೆಗಳನ್ನು ಡೋಜಾ ಧರಿಸುತ್ತಾರೆ.

ಚಿತ್ರ-ವಿಚಿತ್ರ ಬಟ್ಟೆ

ಒದ್ದೆ ಬಟ್ಟೆಗಳನ್ನು ಧರಿಸಿ ಮೆಟ್ ಗಾಲಾಗೆ ಬಂದಿದ್ದ ತಮ್ಮ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಡೋಜಾ ಕ್ಯಾಟ್, ‘ವೆಟ್ ಗಾಲಾ’ ಎಂದು ಬರೆದುಕೊಂಡಿದ್ದಾರೆ.

           ‘ವೆಟ್ ಗಾಲಾ’

ಡೋಜಾ ಕ್ಯಾಟ್ ಅಮೆರಿಕದ ಜನಪ್ರಿಯ ಪಾಪ್ ಗಾಯಕಿಯರಲ್ಲಿ ಒಬ್ಬರು. ತಮ್ಮ ಹಾಡಿನ ಜೊತೆಗೆ ಫ್ಯಾಷನ್​ನಿಂದಲೂ ಡೋಜಾ ಹೆಸರುವಾಸಿ.

ಜನಪ್ರಿಯ ಪಾಪ್ ಗಾಯಕಿ

ಈ ಬಾರಿಯ ಮೆಟ್ ಗಾಲಾನಲ್ಲಿ ಭಾರತದ ಕೆಲವು ನಟಿಯರು, ಉದ್ಯಮಿಗಳು ಭಾಗಿಯಾಗಿದ್ದಾರೆ. ನಟಿ ಆಲಿಯಾ ಭಟ್, ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಸಹ ಭಾಗಿಯಾಗಿದ್ದಾರೆ.

      ಆಲಿಯಾ-ಇಶಾ

ಮದುವೆ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ನಟಿ ಜಾನ್ಹವಿ ಕಪೂರ್