ಮದುವೆ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಬಾಲಿವುಡ್ ನಟಿ ಜಾನ್ಹವಿ ಕಪೂರ್, ಸದ್ಯಕ್ಕೆ ಲಿವಿನ್ ರಿಲೇಷನ್​ಶಿಪ್ 

07 MAY 2024

Author : Manjunatha

ನಟಿ ಜಾನ್ಹವಿ ಕಪೂರ್ ಬಾಲಿವುಡ್ ಮಾತ್ರವಲ್ಲದೆ ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಖತ್ ಕಮಾಲ್ ಮಾಡುತ್ತಿದ್ದಾರೆ.

ನಟಿ ಜಾನ್ಹವಿ ಕಪೂರ್

ಒಂದರ ಹಿಂದೊಂದು ಸಿನಿಮಾಗಳನ್ನು ಬಾಚಿಕೊಳ್ಳುತ್ತಿರುವ ಜಾನ್ಹವಿ ಕಪೂರ್, ತಮ್ಮ ಲವ್ ಲೈಫ್​ನಿಂದಾಗಿಯೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

ಜಾನ್ಹವಿ ಲವ್ ಲೈಫ್

ಯುವ ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಕೈ ಕೈ ಹಿಡಿದುಕೊಂಡು ನಟಿ ಜಾನ್ಹವಿ ಕಪೂರ್ ಸುತ್ತಾಡುತ್ತಿದ್ದಾರೆ.

ಶಿಖರ್ ಫಾರಿಯಾ

ಶಿಖರ್ ಹಾಗೂ ಜಾನ್ಹವಿ ಕಪೂರ್ ತಿಂಗಳ ಹಿಂದೆ ಒಂದರ ಹಿಂದೊಂದು ದೆವಾಲಯಗಳಿಗೂ ಸಹ ಭೇಟಿ ಕೊಟ್ಟಿದ್ದರು.

ದೇವಾಲಯಕ್ಕೆ ಭೇಟಿ

ಈ ಜೋಡಿಯ ದೇವಾಲಯ ಭೇಟಿ ಕಂಡು ಶೀಘ್ರವೇ ಇವರು ವಿವಾಹವಾಗಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡಿತ್ತು.

ಮದುವೆ ಸುದ್ದಿ ಹರಿದಾಡುತ್ತಿದೆ

ಇದೇ ವಿಷಯವನ್ನು ಪಾಪರಾಟ್ಜಿಗಳು ಇತ್ತೀಚೆಗೆ ಜಾನ್ಹವಿ ಕಪೂರ್ ಬಳಿ ನೇರವಾಗಿ ಕೇಳಿದ್ದಾರೆ. ಆದರೆ ಮದುವೆ ಕುರಿತು ಪ್ರಶ್ನೆಗೆ ಜಾನ್ಹವಿ ಸಿಟ್ಟಾಗಿದ್ದಾರೆ.

ಮದುವೆ ಕುರಿತು ಪ್ರಶ್ನೆ

ಶಿಖರ್ ಜೊತೆ ಶೀಘ್ರವೇ ಮದುವೆ ಆಗುತ್ತಿದ್ದೀರಂತೆ ಎಂಬ ಪ್ರಶ್ನೆಗೆ ಸಿಟ್ಟಾದ ಜಾನ್ಹವಿ ಕಪೂರ್, ಏನು ಬೇಕಾದರೂ ಕೇಳುತ್ತೀರಲ್ಲ, ಇಲ್ಲದ ವಿಷಯ ಹಬ್ಬಿಸಬೇಡಿ ಎಂದಿದ್ದಾರೆ.

ಸಿಟ್ಟಾದ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ಲಿವಿನ್ ರಿಲೇಶನ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಸ್ವತಃ ಜಾನ್ಹವಿ ತಾವು ಶಿಖರ್ ಜೊತೆಗೆ ಆತ್ಮೀಯವಾಗಿರುವ ಬಗ್ಗೆ ಹಿಂದೆ ಹೇಳಿಕೊಂಡಿದ್ದರು.

ಲಿವಿನ್ ರಿಲೇಶನ್

ಜಾನ್ಹವಿ ಕಪೂರ್ ಪ್ರಸ್ತುತ ನಾಲ್ಕು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಬಳಿಕ ಈಗ ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

ತಮಿಳಿಗೆ ಜಾನ್ಹವಿ ಎಂಟ್ರಿ

ಮೆಟ್ ಗಾಲಾನಲ್ಲಿ ಮಿಂಚು ಹರಿಸಿದ ಬಾಲಿವುಡ್ ಬೆಡಗಿ ಆಲಿಯಾ ಭಟ್