ಈ ವಾರ ನಾಮಿನೇಟ್ ಆದ ಎಲ್ಲರೂ ಪ್ರಮುಖರೇ

26 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಸಂಗೀತಾ ಶೃಂಗೇರಿ ಅವರು ಮುನ್ನುಗ್ಗುತ್ತಿದ್ದಾರೆ. ಅವರಿಗೆ ಪಾರಾಗಲೇಬೇಕಾಗಿದೆ.

ಸಂಗೀತಾ ಶೃಂಗೇರಿ

ವಿನಯ್ ಗೌಡ ಅವರು ಈ ವಾರದಿಂದ ಶಾಂತಿ ಮಂತ್ರ ಪಠಿಸುತ್ತಿದ್ದಾರೆ. ಆದರೂ ನಾಮಿನೇಷನ್​ನಿಂದ ಬಚಾವ್ ಆಗೋಕೆ ಆಗಿಲ್ಲ.

ವಿನಯ್ ಗೌಡ

ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ತಂತ್ರಗಾರಿಕೆ ಮೂಲಕ ವರ್ತೂರು ಸಂತೋಷ್ ಗಮನ ಸೆಳೆಯುತ್ತಿದ್ದು, ಈ ವಾರ ಅವರು ನಾಮಿನೇಟ್ ಆಗಿದ್ದಾರೆ.

ವರ್ತೂರು ಸಂತೋಷ್

ಕಳೆದ ವಾರದ ಎಲಿಮಿನೇಷನ್​ನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಮೈಕಲ್. ಈ ವಾರ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ.

ಮೈಕಲ್ ಅಜಯ್

ದೊಡ್ಮನೆಯಲ್ಲಿ ಕಾರ್ತಿಕ್ ಮಹೇಶ್ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಅವರನ್ನು ಹೊರಗೆ ಕಳುಹಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ.

ಕಾರ್ತಿಕ್ ಮಹೇಶ್

ಹಲವು ವಾರಗಳಿಂದ ಸೇವ್ ಆಗುತ್ತಲೇ ಬರುತ್ತಿದ್ದಾರೆ ಕಿರುತೆರೆ ನಟಿ ಸಿರಿ. ಈ ವಾರವೂ ಅವರು ನಾಮಿನೇಟ್ ಆಗಿ ಡೇಂಜರ್ ​ಜೋನ್​ನಲ್ಲಿದ್ದಾರೆ.

ಸಿರಿ

ತನಿಷಾ ಕುಪ್ಪಂಡ ಅವರು ಈ ವಾರ ಡೇಂಜರ್​ಜೋನ್​ನಲ್ಲಿ ಇದ್ದಾರೆ. ಅವರ ಮೇಲೂ ಎಲಿಮಿನೇಷನ್ ತೂಗುಗತ್ತಿ ಇದೆ.

ತನಿಷಾ ಕುಪ್ಪಂಡ

ಆಟದ ತಂತ್ರಗಾರಿಕೆ ಬದಲಿಸಿಕೊಂಡು ತುಕಾಲಿ ಸಂತೋಷ್ ಅವರು ಆಟ ಮುಂದುವರಿಸಿದ್ದಾರೆ. ಅವರು ಈ ವಾರ ನಾಮಿನೇಟ್ ಆಗಿದ್ದಾರೆ.

ತುಕಾಲಿ ಸಂತೋಷ್

ಕ್ಯಾಪ್ಟನ್ ನಮ್ರತಾ ನಾಮಿನೇಟ್ ಆಗಿಲ್ಲ. ಅವರಿಗೆ ಒಬ್ಬರನ್ನು ಸೇವ್ ಮಾಡೋ ಅವಕಾಶ ಇತ್ತು. ಅವರು ಡ್ರೋನ್ ಪ್ರತಾಪ್​ನ ಸೇವ್ ಮಾಡಿದರು.

ಇಬ್ಬರು ಬಚಾವ್

ಶ್ರೀಗೌರಿ ಧಾರಾವಾಹಿಗೆ ಅಮೂಲ್ಯ ಗೌಡ ನಾಯಕಿ