16 June 2024

ಅಪ್ಪ ನೀವೇ ನನ್ನ ಹೀರೋ;  'ಫಾದರ್ಸ್ ಡೇ' ಗೆ ದರ್ಶನ್​​ ಪುತ್ರನ ಭಾವುಕ ಪೋಸ್ಟ್​!

Pic Credit - Instagram 

Author :Akshatha Vorkady

 'ಫಾದರ್ಸ್ ಡೇ'

ಇಂದು ವಿಶ್ವ ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ದರ್ಶನ್​​ ಪುತ್ರ ವಿನೀಶ್​​ ಇನ್​ಸ್ಟಾಗ್ರಾಮ್ ಸ್ಟೋರಿ ಒಂದನ್ನು ಹಾಕಿದ್ದಾರೆ. 

Pic Credit - Instagram 

ಇನ್​ಸ್ಟಾಗ್ರಾಮ್ ಸ್ಟೋರಿ

ಕೊಲೆ ಕೇಸ್​​ನಲ್ಲಿ ಬಂಧಿತರಾಗಿರುವ ದರ್ಶನ್​​​ ನೆನೆದು ಪುತ್ರ ಭಾವುಕ ಸಾಲುಗಳನ್ನು ಬರೆದು ಪೋಸ್ಟ್​ ಹಂಚಿಕೊಂಡಿದ್ದಾರೆ.

Pic Credit - Instagram 

ನೀವೇ ನನ್ನ ಹೀರೋ

"ಅಪ್ಪ ನೀವೇ ನನ್ನ ಹೀರೋ, ನಿಮ್ಮನ್ನು ತುಂಬಾ ಮಿಸ್​​ ಮಾಡಿಕೊಳುತ್ತಿದ್ದೇನೆ" ಎಂದು  ಪೋಸ್ಟ್​ನಲ್ಲಿ ಬರೆಯಲಾಗಿದೆ. 

Pic Credit - Instagram 

ಶುಭಾಶಯ ಕೋರಿದ್ದಾರೆ

ಇನ್​​ಸ್ಟಾಗ್ರಾಂನಲ್ಲಿ ದರ್ಶನ್​ ಮತ್ತು ತಾಯಿ ವಿಜಯಲಕ್ಷ್ಮೀ ಜೊತೆಗಿನ ಫೋಟೋವನ್ನು ವಿನೀಶ್ ಹಂಚಿಕೊಂಡು, ಶುಭಾಶಯ ಕೋರಿದ್ದಾರೆ.

Pic Credit - Instagram 

ದರ್ಶನ್ ಹಾಗೂ ಗ್ಯಾಂಗ್

ಜೂನ್ 15ರಂದು ದರ್ಶನ್ ಹಾಗೂ ಗ್ಯಾಂಗ್ ನ್ನು ಕೋರ್ಟ್​ಗೆ ಹಾಜರುಪಡಿಸಲಾಗಿದ್ದು ಈಗ ಮತ್ತೆ ದರ್ಶನ್ ಹಾಗೂ ಟೀಮ್​ನ್ನು ಕಸ್ಟಡಿಗೆ ನೀಡಲಾಗಿದೆ.

Pic Credit - Instagram 

ಇನ್​ಸ್ಟಾಗ್ರಾಮ್ ಸ್ಟೋರಿ ಡಿಲೀಟ್

ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿ ತಂದೆಗೆ ವಿಶ್ ಮಾಡಿದ್ದು,ನಂತರ ಇನ್​ಸ್ಟಾ ಸ್ಟೋರಿಯನ್ನು ಡಿಲೀಟ್ ಮಾಡಿ, ಪೈವೇಟ್​​ ಅಕೌಂಟ್​ ಮಾಡಿದ್ದಾರೆ. 

Pic Credit - Instagram 

ಕೆಟ್ಟದಾಗಿ ಕಮೆಂಟ್​

ಇತ್ತೀಚಿಗಷ್ಟೇ ಕೆಟ್ಟದಾಗಿ ಕಮೆಂಟ್​ ಮಾಡುವವರ ಕುರಿತು ವಿನೀಶ್​​​​  ಇನ್​ಸ್ಟಾಗ್ರಾಮ್​​​ನಲ್ಲಿ ಸ್ಟೋರಿ ಹಾಕಿದ್ದರು. 

Pic Credit - Instagram 

ರೇಣುಕಾಸ್ವಾಮಿ ಕೊಲೆ 

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತಾದ ಚರ್ಚೆಗಳೇ ಜೋರಾಗಿ ನಡೆಯುತ್ತಿವೆ. 

Pic Credit - Instagram