ಕೈ ಹಿಡಿಯಲಿಲ್ಲ ಬಾಲಿವುಡ್, ಬಿಕಿನಿ ಮಾರಾಟ ಆರಂಭಿಸಿದ ವಿಶ್ವ ಸುಂದರಿ ಮಾನುಷಿ ಚಿಲ್ಲರ್

24 May 2024

Author : Manjunatha

ಹರಿಯಾಣಾದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಸ್ಪರ್ಧೆ ಗೆದ್ದು ಬೀಗಿದ್ದರು. 

   ಮಾಜಿ ವಿಶ್ವ ಸುಂದರಿ

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅಕ್ಷಯ್ ಕುಮಾರ್ ಜೊತೆ ನಟಿಸುವ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು.

    ಬಾಲಿವುಡ್ ಪ್ರವೇಶ

ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಆದರೆ ಸ್ಟಾರ್ ನಟಿ ಎನಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮಾನುಷಿ ಚಿಲ್ಲರ್ ನಟನೆ

ಬಾಲಿವುಡ್​ನಲ್ಲಿ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗದ ಕಾರಣ ಇದೀಗ ಮಾನುಷಿ ಉದ್ಯಮವೊಂದಕ್ಕೆ ಕೈ ಹಾಕಿದ್ದಾರೆ.

ಉದ್ಯಮಕ್ಕೆ ಕೈ ಹಾಕಿದ್ದಾರೆ

ಮಾನುಷಿ ಚಿಲ್ಲರ್ ಇದೀಗ ಬಿಕಿನಿ ಮಾರಾಟ ಆರಂಭ ಮಾಡಿದ್ದಾರೆ. ದ್ವೀಪ್ ಹೆಸರಿನ ಬ್ರ್ಯಾಂಡ್​ ಸ್ಥಾಪಿಸಿದ್ದಾರೆ ಮಾನುಷಿ

ಬಿಕಿನಿ ಮಾರಾಟ ಆರಂಭ

ದ್ವೀಪ್ ಲೈಫ್ ಹೆಸರಿನಲ್ಲಿ ವಿವಿಧ ಬಗೆಯ ಬಿಕಿನಿ, ಸ್ವಿಮ್ ವೇರ್​ಗಳ ಮಾರಾಟವನ್ನು ಮಾನುಷಿ ಮಾಡುತ್ತಿದ್ದಾರೆ.

      ಬಿಕಿನಿ, ಸ್ವಿಮ್ವೇರ್ 

ಮಾನುಷಿಯ ದ್ವೀಪ್ ಬ್ರ್ಯಾಂಡ್​ನಲ್ಲಿ 2000 ದಿಂದ ಆರಂಭಿಸಿ 20 ಸಾವಿರ ಬೆಲೆಯ ವಿವಿಧ ಬಗೆಯ ಬಿಕಿನಿ ಮಾರಾಟಕ್ಕಿವೆ.

   ಬಿಕಿನಿ ಬೆಲೆ ಎಷ್ಟು?

ತೆಳ್ಳಗಿರುವವರಿಗೆ, ದಪ್ಪ ಇರುವವರಿಗೆ ಬೇರೆ ಬೇರೆ ಬಣ್ಣದ ಯುವತಿಯರಿಗೆ ಎಲ್ಲರಿಗೂ ಒಪ್ಪುವ ಬಿಕಿನಿಗಳು ಮಾನುಷಿ ತಯಾರಿಸಿ ಮಾರುತ್ತಾರೆ.

ಎಲ್ಲ ಬಗೆಯ ಬಿಕಿನಿ ಲಭ್ಯ

ಮರುಬಳಕೆಯ ಪಾಲಿಯೆಸ್ಟರ್ ಮತ್ತು ಸಾವಯವ ಹತ್ತಿಯಂತಹ ಪರಿಸರ ಸ್ನೇಹಿ ವಸ್ತುಗಳ ಬಳಸಿ ಈ ಬಿಕಿನಿಗಳ ತಯಾರಿಸಲಾಗುತ್ತದೆಯಂತೆ.

ಪರಿಸರ ಸ್ನೇಹಿ ಬಿಕಿನಿ

ಹಲವು ಸ್ಟಾರ್ ಗಳೊಟ್ಟಿಗೆ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ಈಗ ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿ ಆಗಲಿದ್ದಾರೆ