ಹಲವು ಸ್ಟಾರ್​ಗಳೊಟ್ಟಿಗೆ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ಈಗ ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿ ಆಗಲಿದ್ದಾರೆ

24 May 2024

Author : Manjunatha

ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಮಾತ್ರವಲ್ಲದೆ ಬಾಲಿವುಡ್​ನಲ್ಲೂ ಬೇಡಿಕೆಯ ನಟಿಯಾಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ

ರಣ್​ಬೀರ್ ಕಪೂರ್, ದಳಪತಿ ವಿಜಯ್, ಅಲ್ಲು ಅರ್ಜುನ್, ಅಮಿತಾಬ್ ಬಚ್ಚನ್, ವಿಜಯ್ ದೇವರಕೊಂಡ ಇನ್ನೂ ಕೆಲವು ಸ್ಟಾರ್​ಗಳೊಟ್ಟಿಗೆ ರಶ್ಮಿಕಾ ನಟಿಸಿದ್ದಾರೆ.

ಸ್ಟಾರ್ ನಟರ ಸಿನಿಮಾ

ಇದೀಗ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ನಟನ ಸಿನಿಮಾನಲ್ಲಿ ನಾಯಕಿಯಾಗುವ ಅವಕಾಶ ರಶ್ಮಿಕಾಗೆ ಒಲಿದಿದೆ.

 ಪ್ಯಾನ್ ಇಂಡಿಯಾ ಸ್ಟಾರ್

RRR ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಆಗಿರುವ ಜೂ ಎನ್​ಟಿಆರ್​ ಮುಂದಿನ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ.

ಜೂ ಎನ್​ಟಿಆರ್​ ಸಿನಿಮಾ

ಪ್ರಶಾಂತ್ ನೀಲ್ ನಿರ್ದೇಶನ ಮಾಡಿ ಜೂ ಎನ್​ಟಿಆರ್ ನಟಿಸಲಿರುವ ‘ಡ್ರ್ಯಾಗನ್’ ಸಿನಿಮಾಕ್ಕೆ ರಶ್ಮಿಕಾ ನಾಯಕಿಯಂತೆ.

    ‘ಡ್ರ್ಯಾಗನ್’ ಸಿನಿಮಾ

ರಶ್ಮಿಕಾ ಮಂದಣ್ಣ ಈ ಹಿಂದೆ ಜೂ ಎನ್​ಟಿಆರ್ ಜೊತೆ ನಟಿಸಿಲ್ಲ. ಇದೀಗ ಮೊದಲ ಬಾರಿಗೆ ಎನ್​ಟಿಆರ್ ಜೊತೆ ನಟಿಸಲಿದ್ದಾರೆ.

ಜೂ ಎನ್​ಟಿಆರ್-ರಶ್ಮಿಕಾ

ಜೂ ಎನ್​ಟಿಆರ್ ಪ್ರಸ್ತುತ ‘ದೇವರ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಬಳಿಕ ‘ಡ್ರ್ಯಾಗನ್’ ಶುರುವಾಗಲಿದೆ.

‘ದೇವರ’ ಸಿನಿಮಾ ಬಳಿಕ

ರಶ್ಮಿಕಾ ಮಂದಣ್ಣ ಸಹ ಹಲವು ಸಿನಿಮಾಗಳ ಶೂಟಿಂಗ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಸಹ ‘ಡ್ರ್ಯಾಗನ್​’ಗಾಗಿ ಬಿಡುವು ಮಾಡಿಕೊಳ್ಳಬೇಕಿದೆ.

     ರಶ್ಮಿಕಾ ಸಹ ಬ್ಯುಸಿ

ರಶ್ಮಿಕಾ ಮಂದಣ್ಣ ಪ್ರಸ್ತುತ ‘ಪುಷ್ಪ 2’, ‘ಬಾಯ್​ಫ್ರೆಂಡ್’, ವಿಜಯ್ ದೇವರಕೊಂಡ ಜೊತೆಗೊಂದು ಸಿನಿಮಾ. ಬಾಲಿವುಡ್​ನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಜಯ್ ದೇವರಕೊಂಡ

ನಟಿ ಶ್ರುತಿ ಹಾಸನ್ ಮೊದಲ ಬಾರಿಗೆ ಬ್ರೇಕ್ ಅಪ್ ಬಗ್ಗೆ ಮಾತನಾಡಿದ್ದಾರೆ, ಈಗ ಶ್ರುತಿ ಸಿಂಗಲ್ಲಾ?