ಮದುವೆಯಾಗುತ್ತಿದ್ದಾರೆ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ, ವರ ಯಾರು? ಮದುವೆ ಯಾವಾಗ?

06 Mar 2024

Author : Manjunatha

ಕನ್ನಡದ ‘ಗೂಗ್ಲಿ’ ಸಿನಿಮಾ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಕೃತಿ ಕರಬಂಧ ಮದುವೆಯಾಗುತ್ತಿದ್ದಾರೆ.

ಗೂಗ್ಲಿ ಚೆಲುವೆ ಕೃತಿ

ತಮ್ಮ ಬಹುಸಮಯದ ಬಾಯ್​ಫ್ರೆಂಡ್ ಪುಲ್ಕಿತ್ ಸಾಮ್ರಾಟ್ ಅವರೊಟ್ಟಿಗೆ ಕೃತಿ ಕರಬಂಧ ವಿವಾಹವಾಗುತ್ತಿದ್ದಾರೆ.

ಬಾಯ್​ಫ್ರೆಂಡ್ ಪುಲ್ಕಿತ್

ಕೃತಿ ಕರಬಂಧ ವಿವಾಹವಾಗುತ್ತರುವ ಪುಲ್ಕಿತ್ ಸಾಮ್ರಾಟ್ ಸಹ ನಟರೇ ಆಗಿದ್ದು, ಹಿಂದಿಯ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹಿಂದಿ ನಟ ಪುಲ್ಕಿತ್

2012ರಲ್ಲಿ ‘ಬಿಟ್ಟು ಬಾಸ್’ ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಪುಲ್ಕಿಟ್ ಸಾಮ್ರಾಟ್​ಗೆ ಭಾರಿ ದೊಡ್ಡ ಯಶಸ್ಸು ಲಭಿಸಿಲ್ಲ.

‘ಯಶಸ್ಸು ಲಭಿಸಿಲ್ಲ

ನಾಯಕ ನಟನಾಗಿ, ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ, ಸೆಕೆಂಡ್ ಹೀರೋ ಆಗಿ ಹೀಗೆ ಹಲವು ಸಿನಿಮಾಗಳಲ್ಲಿ ಪುಲ್ಕಿಟ್ ಸಾಮ್ರಾಟ್ ನಟಿಸಿದ್ದಾರೆ.

ಬೇರೆ-ಬೇರೆ ಪಾತ್ರಗಳು

ಕೋಕಾ-ಕೋಲಾ ಸೇರಿದಂತೆ ಕೆಲವು ಜಾಹೀರಾತುಗಳಲ್ಲಿಯೂ ಪುಲ್ಕಿತ್ ನಟಿಸಿದ್ದು, ಪಾಕಿಸ್ತಾನದ ಜಾಹೀರಾತಿನಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ನಟ ಇವರು.

ಪಾಕ್ ಜಾಹೀರಾತಿನಲ್ಲಿ

ಕೃತಿ ಕರಬಂಧ ಹಾಗೂ ಪುಲ್ಕಿತ್ ಸಾಮ್ರಾಟ್ ಅವರುಗಳು ಮಾರ್ಚ್ 13 ರಂದು ವಿವಾಹವಾಗಲಿದ್ದಾರೆ. ಆಮಂತ್ರಣ ಪತ್ರಿಕೆಯನ್ನು ಸರಳವಾಗಿ ಮುದ್ರಿಸಿರುವ ಈ ಜೋಡಿ ವಿತರಣೆ ಆರಂಭಿಸಿದೆ.

ಮದುವೆ ಯಾವಾಗ?

ಮಾರ್ಚ್ 13 ರಂದು ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಲಿದ್ದಾರೆ ಕೃತಿ ಕರಬಂಧ ಹಾಗೂ ಪುಲ್ಕಿತ್ ಸಾಮ್ರಾಟ್, ಅದಾದ ಬಳಿಕ ಮುಂಬೈನಲ್ಲಿ ರಿಸೆಪ್ಷನ್ ಇರಲಿದೆ.

ಮದುವೆ ಎಲ್ಲಿ ?

ಕೃತಿ ಕರಬಂಧ ಸದ್ಯಕ್ಕೆ ರಿಸ್ಕಿ ರೋಮಿಯೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಮದುವೆ ಬಳಿಕ ಸಿನಿಮಾ ನಟನೆ ಮುಂದುವರೆಸುತ್ತಾರೆಯೇ ಇಲ್ಲವೇ ಕಾದು ನೋಡಬೇಕಿದೆ.

ಮದುವೆ ಬಳಿಕ ನಟನೆ?

ಪ್ರೇಯಸಿ ಜಾನ್ಹವಿ ಕಾಪೂರ್​ಗೆ ರೊಮ್ಯಾಂಟಿಕ್ ಆಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಬಾಯ್​ಫ್ರೆಂಡ್: ಯಾರಾತ?