ರೊಮ್ಯಾಂಟಿಕ್ ಆಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಜಾನ್ಹವಿ ಕಪೂರ್ ಬಾಯ್​ಫ್ರೆಂಡ್

06 Mar 2024

Author : Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಜನಪ್ರಿಯ ಯುವನಟಿ. ಶ್ರೀದೇವಿ-ಬೋನಿ ಕಪೂರ್ ಪುತ್ರಿಯೂ ಆಗಿರುವ ಜಾನ್ಹವಿ ಬಾಲಿವುಡ್​ನ ಬೇಡಿಕೆಯ ನಟಿ.

ಜಾನ್ಹವಿ ಹುಟ್ಟುಹಬ್ಬ

ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿಟ್ಟಿರುವ ಜಾನ್ಹವಿ ಕಪೂರ್ ಇಲ್ಲಿಯೂ ಸಹ ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

 ದಕ್ಷಿಣ ಭಾರತ ಚಿತ್ರರಂಗ

ಜಾನ್ಹವಿ ಕಪೂರ್ ತಮ್ಮ ಸಿನಿಮಾಗಳ ಜೊತೆಗೆ, ಫ್ಯಾಷನ್, ಜೆನ್ಜಿ ಲೈಫ್ ಸ್ಟೈಲ್, ಪಾರ್ಟಿಗಳಿಂದಲೂ ಜನಪ್ರಿಯರು ಅಂದಹಾಗೆ ಇಂದು (ಮಾರ್ಚ್ 06) ಜಾನ್ಹವಿ ಹುಟ್ಟುಹಬ್ಬ.

ಪಾರ್ಟಿ ಲೈಫ್ ಸ್ಟೈಲ್

ಜಾನ್ಹವಿ ಕಪೂರ್ ಹುಟ್ಟುಹಬ್ಬಕ್ಕೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಶುಭಾಶಯಗಳನ್ನು ಕೋರಿದ್ದಾರೆ. ಜಾನ್ಹವಿಯ ಬಾಯ್​ಫ್ರೆಂಡ್ ಸಹ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಸೆಲೆಬ್ರಿಟಿಗಳ ಶುಭಾಶಯ

ಜಾನ್ಹವಿ ಕಪೂರ್ ಉದ್ಯಮಿ, ಪೋಲೋ ಆಟಗಾರ ಶಿಖರ್ ಪಾರಿಯಾ ಅವರೊಟ್ಟಿಗೆ ಪ್ರೀತಿಯಲ್ಲಿದ್ದಾರೆ. ಈ ಬಗ್ಗೆ ಒಮ್ಮೆ ಜಾನ್ಹವಿ ಕಪೂರ್ ಸಹ ಹೇಳಿಕೊಂಡಿದ್ದರು.

ಶಿಖರ್ ಪಾರಿಯಾ

ಶಿಖರ್ ಪಾರಿಯಾ, ತಾವು ಹಾಗೂ ಜಾನ್ಹವಿ ಪ್ಯಾರಿಸ್​ನ ಐಫೆಲ್ ಟವರ್ ಮುಂದೆ ನಿಂತಿರುವ ಚಿತ್ರ ಹಂಚಿಕೊಂಡು ‘ಹ್ಯಾಪಿ ಬರ್ತ್​ಡೇ’ ಎಂದು ಬರೆದು ಹೃದಯದ ಇಮೋಜಿ ಹಾಕಿದ್ದಾರೆ.

ಪ್ಯಾರಿಸ್ ಪ್ರವಾಸ

ಅದು ಮಾತ್ರವೇ ಅಲ್ಲದೆ, ಶಿಖರ್​ರ ಮನೆಯಲ್ಲಿನ ನಾಯಿಗಳ ಜೊತೆಗೆ ಜಾನ್ಹವಿ ಕುಳಿತಿರುವ ಚಿತ್ರಗಳನ್ನು ಸಹ ಶಿಖರ್ ಹಂಚಿಕೊಂಡಿದ್ದಾರೆ.

ಶುಭಾಶಯ ಕೋರಿದ್ದಾರೆ

ಶಿಖರ್ ಹಾಗೂ ಜಾನ್ಹವಿ ಬಹಳ ವರ್ಷಗಳಿಂದ ಪರಸ್ಪರರನ್ನು ಬಲ್ಲರು, ಒಮ್ಮೆ ಪ್ರೇಮಿಸಿ ದೂರಾಗಿದ್ದರು. ಈಗ ಮತ್ತೆ ಇಬ್ಬರೂ ಹತ್ತಿರವಾಗಿದ್ದಾರೆ.

ಪ್ರೇಮಿಸಿ ದೂರಾಗಿದ್ದರು

ಕಳೆದ ಬಾರಿ ಕಾಫಿ ವಿತ್ ಕರಣ್ ಶೋಗೆ ಬಂದಿದ್ದಾಗ ಜಾನ್ಹವಿ ಕಪೂರ್, ಶಿಖರ್ ಹೆಸರನ್ನು ಶೋನಲ್ಲಿ ಉಲ್ಲೇಖಿಸಿದ್ದರು. ಇಬ್ಬರೂ ಸೇರಿ ಕೆಲವು ದೇವಾಲಯಗಳಿಗೂ ಭೇಟಿ ಕೊಟ್ಟಿದ್ದಾರೆ.

ದೇವಾಲಯಗಳಿಗೂ ಭೇಟಿ

ವಿಜಯ್ ಕೊನೆಯ ಸಿನಿಮಾದಲ್ಲಿ ಈ ಸ್ಟಾರ್ ನಟಿ ನಾಯಕಿ: ಯಾರು ಆ ನಟಿ?