ದಳಪತಿ ವಿಜಯ್ ನಟಿಸಲಿರುವ ಕೊನೆಯ ಸಿನಿಮಾದಲ್ಲಿ ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ನಾಯಕಿ, ಯಾರಾಕೆ?

05 Mar 2024

Author : Manjunatha

ದಳಪತಿ ವಿಜಯ್ ರಾಜಕೀಯ ಪ್ರವೇಶಿಸುವುದಾಗಿ ಘೋಷಣೆ ಮಾಡಿದ್ದು, ಇನ್ನು ಕೇವಲ ಒಂದು ಸಿನಿಮಾದಲ್ಲಿ ಮಾತ್ರವೇ ನಟಿಸಲಿದ್ದಾರೆ.

ವಿಜಯ್ ರಾಜಕೀಯ 

ವಿಜಯ್ ನಟಿಸಲಿರುವ ಕೊನೆಯ ಸಿನಿಮಾದ ನಾಯಕಿ ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದ್ದು, ಸ್ಟಾರ್ ನಟಿಯೊಬ್ಬರು ನಾಯಕಿ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಸ್ಟಾರ್ ನಟಿ ನಾಯಕಿ

ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ ಸಮಂತಾ, ದಳಪತಿ ವಿಜಯ್​ರ ಕೊನೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ವಿಜಯ ಕೊನೆಯ ಸಿನಿಮಾ

ಸಮಂತಾ ಕಳೆದ ಒಂದು ವರ್ಷದಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಒಂದೊಮ್ಮೆ ವಿಜಯ್ ಸಿನಿಮಾನಲ್ಲಿ ಸಮಂತಾ ನಟಿಸಿದರೆ ಭರ್ಜರಿ ಕಮ್ ಬ್ಯಾಕ್ ಆಗಲಿದೆ.

ಸಿನಿಮಾಗಳಿಂದ ದೂರ

ಇನ್ನು ಕೆಲವು ಮಾಹಿತಿಗಳ ಪ್ರಕಾರ ವಿಜಯ್​ರ ಕೊನೆಯ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

ರಶ್ಮಿಕಾ ಮಂದಣ್ಣ

ದಳಪತಿ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು ಲೋಕಸಭೆ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ.

ಲೋಕಸಭೆ ಚುನಾವಣೆ

ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿರುವ ಕಾರಣ ಸಿನಿಮಾಗಳಿಂದ ವಿಜಯ್ ದೂರ ಉಳಿಯಲಿದ್ದಾರೆ.

ರಾಜಕೀಯದಲ್ಲಿ ಸಕ್ರಿಯ

ದಳಪತಿ ವಿಜಯ್​ ಪ್ರಸ್ತುತ ‘ಗೋಟ್’ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ವಿಜಯ್ ಅವರದ್ದು ದ್ವಿಪಾತ್ರ. ಫೈಟರ್ ಜೆಟ್ ಪೈಲೆಟ್ ಆಗಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ.

‘ಗೋಟ್’ ಸಿನಿಮಾ

‘ಗೋಟ್’ ಸಿನಿಮಾದ ಬಳಿಕ ಒಂದು ಸಿನಿಮಾದಲ್ಲಿ ವಿಜಯ್ ನಟಿಸಲಿದ್ದು, ಆ ಸಿನಿಮಾಕ್ಕೆ ಸಮಂತಾ ಅಥವಾ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರಂತೆ.

ನಾಯಕಿ ಯಾರು?

ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ‘ಆರತಿ ಗರ್ಲ್’ ಆದ ಜಾನ್ಹವಿ ಕಪೂರ್, ಸಖತ್ ಟ್ರೋಲ್