ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ‘ಆರತಿ ಗರ್ಲ್’ ಆದ ನಟಿ ಜಾನ್ಹವಿ ಕಪೂರ್, ಸಖತ್ ಟ್ರೋಲ್

05 Mar 2024

Author : Manjunatha

ಮುಖೇಶ್ ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್​ನಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದು, ಅಂಬಾನಿ ಕುಟುಂಬಕ್ಕೆ ಸಖತ್ ಮನೊರಂಜನೆ ನೀಡುತ್ತಿದ್ದಾರೆ.

ಅನಂತ್ ಪ್ರೀ ವೆಡ್ಡಿಂಗ್

ಮದುವೆಯಲ್ಲಿ ವಿಶೇಷ ಆಕರ್ಷಣೆಯಾಗಿ ನಟ-ನಟಿಯರನ್ನು ಕರೆಸಿದರೆ ಅಂಬಾನಿ, ತಮ್ಮ ಕುಟುಂಬದ ಮದುವೆ ಪೂರ್ವ ಕಾರ್ಯಕ್ರಮಕ್ಕೆ ಇಡೀ ಬಾಲಿವುಡ್ ಅನ್ನೇ ಅತಿಥಿಗಳನ್ನಾಗಿ ಕರೆಸಿದ್ದಾರೆ.

ಅತಿಥಿಗಳಾಗಿ ಬಾಲಿವುಡ್

ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕೆಲವು ಬಾಲಿವುಡ್ ನಟಿಯರಿಗೆ ಕೆಲವು ವಿಶೇಷ ಜವಾಬ್ದಾರಿಗಳನ್ನು ಸಹ ನೀಡಲಾಗಿದೆ.

ವಿಶೇಷ ಜವಾಬ್ದಾರಿ

ನಟಿ ಜಾನ್ಹವಿ ಕಪೂರ್ ಅವರಿಗೆ ಆರತಿ ಗರ್ಲ್ ಕೆಲಸ ನೀಡಲಾಗಿದೆ. ಅನಂತ್ ಹಾಗೂ ರಾಧಿಕಾ ವೇದಿಕೆಗೆ ಬಂದಾಗ ಜಾನ್ಹವಿ ಸೈಡ್​ನಲ್ಲಿ ನಿಂತು ಅವರಿಗೆ ಆರತಿ ಬೆಳಗಿದ್ದಾರೆ.

ಆರತಿ ಬೆಳಗಿದ ಜಾನ್ಹವಿ

ಜಾನ್ಹವಿ ಅನಂತ್-ರಾಧಿಕಾಗೆ ಆರತಿ ಬೆಳಗುವಾಗ ನೂತನ ವಧು-ವರರು ಜಾನ್ಹವಿ ಕಡೆ ತಿರುಗಿಯೂ ನೋಡಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣ

ಏನೇ ಆಗಲಿ, ಜಾನ್ಹವಿಯಂತೂ ಅನಂತ್-ರಾಧಿಕಾರ ಮದುವೆ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಎಂಜಾಯ್ ಜಾನ್ಹವಿ

ಇತ್ತೀಚೆಗಷ್ಟೆ ಪಾಪ್ ಗಾಯಕಿ ರಿಯಾನಾ ಜೊತೆಗೆ ಜಾನ್ಹವಿ ಸಖತ್ ಆಗಿ ಹೆಜ್ಜೆ ಹಾಕಿದ್ದರು. ಆ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ರಿಯಾನಾ ಜೊತೆ ಹೆಜ್ಜೆ

ಜಾನ್ಹವಿ ಕಪೂರ್ ತಮ್ಮ ಇಡೀ ಕುಟುಂಬದೊಟ್ಟಿಗೆ ಮೊದಲ ದಿನದಿಂದಲೂ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಪ್ರೀ ವೆಡ್ಡಿಂಗ್ 

ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಿರುವ ಜಾನ್ಹವಿ ಕಪೂರ್, ಕಾರ್ಯಕ್ರಮದ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಜಾನ್ಹವಿ ಕಪೂರ್

ರಿಯಾನಾಗೂ ಇಷ್ಟವಾಯ್ತು ಓರಿ ಅವತಾರ, ಕಿವಿಯೋಲೆಗೆ ಪಾಪ್ ಗಾಯಕಿ ಫಿದಾ