ನಟಿ ಹೇಮಾಮಾಲಿನಿಗೆ ಗೆಲುವು, ಇಲ್ಲಿದೆ ಅವರ ರಾಜಕೀಯ ಪಯಣದ ಇಣುಕು ನೋಟ
04 JUNE 2024
Author : Manjunatha
ಖ್ಯಾತ ಬಾಲಿವುಡ್ ನಟಿ ಹೇಮಾಮಾಲಿನಿ ಲೋಕಸಭೆ ಚುನಾವಣೆಯಲ್ಲಿ ಮಥುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
ನಟಿ ಹೇಮಾಮಾಲಿನಿ
1999 ರಲ್ಲಿಯೇ ಹೇಮಾಮಾಲಿನಿ ಬಿಜೆಪಿ ಅಭ್ಯರ್ಥಿ ವಿನೋದ್ ಖನ್ನಾ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು.
ಚುನಾವಣೆ ಪ್ರಚಾರ
2004 ರಲ್ಲಿ ಹೇಮಾಮಾಲಿನಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಅದಕ್ಕೆ ಮುನ್ನ ಕೇವಲ ಪ್ರಚಾರ ಮಾತ್ರವೇ ಮಾಡಿದ್ದರು.
ಅಧಿಕೃತ ಬಿಜೆಪಿ ಸೇರ್ಪಡೆ
ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೆಶಿತಗೊಂಡಿದ್ದ ಹೇಮಾಮಾಲಿನಿ, 2009 ರ ವರೆಗೆ ರಾಜ್ಯಸಭೆ ಸದಸ್ಯೆಯಾಗಿದ್ದರು.
ರಾಜ್ಯಸಭೆ ಸದಸ್ಯೆ
2014 ರಲ್ಲಿ ಮೊದಲ ಬಾರಿಗೆ ಮಥುರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ ಹೇಮಾಮಾಲಿನಿ ಮೊದಲ ಗೆಲುವು ಕಂಡರು.
2014 ರಲ್ಲಿ ಮೊದಲ ಜಯ
ಬಳಿಕ 2019ರಲ್ಲಿಯೂ ಸಹ ಹೇಮಾ ಮಾಲಿನಿ ಮಥುರಾದಿಂದಲೇ ಚುನಾವಣೆಗೆ ಸ್ಪರ್ಧಿಸಿ ದೊಡ್ಡ ಅಂತರದ ಗೆಲುವು ಕಂಡರು.
2019ರಲ್ಲಿಯೂ ಸಹ ಗೆಲುವು
ಇದೀಗ 2024 ರಲ್ಲಿ ಮತ್ತೊಮ್ಮೆ ಮಥುರಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಿ ಭಾರಿ ಅಂತರದಿಂದ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಸಂಸದೆಯಾಗಿದ್ದಾರೆ.
ಈಗ ಮತ್ತೆ ಗೆಲುವು
ಕರ್ನಾಟಕದ ಮಾಜಿ ಸಂಸದ, ದಿವಂಗತ ಅನಂತ್ ಕುಮಾರ್ ಅವರಿಂದಾಗಿ 2011 ರಲ್ಲಿ ಬಿಜೆಪಿಯ ಕಾರ್ಯದರ್ಶಿಯೂ ಆಗಿ ಕಾರ್ಯನಿರ್ವಹಿಸಿದ್ದಾರೆ ಹೇಮಾಮಾಲಿನಿ.
ಪಕ್ಷದ ಕಾರ್ಯದರ್ಶಿ
2020 ರ ಬಳಿಕ ಹೇಮಾಮಾಲಿನಿ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ, ಭರತ ನಾಟ್ಯ ಕಲಾವಿದೆಯಾಗಿರುವ ಇವರು ಆಗಾಗ್ಗೆ ನಾಟ್ಯ ಪ್ರದರ್ಶನ ನೀಡುತ್ತಿರುತ್ತಾರೆ.
ನಾಟ್ಯ ಪ್ರದರ್ಶನ
ನಟಿ ಕಂಗನಾ ರನೌತ್ಗೆ ಮೊದಲ ಪ್ರಯತ್ನದಲ್ಲೇ ಚುನಾವಣೆಯಲ್ಲಿ ಗೆಲುವು, ನಟಿ ಪಡೆದ ಮತಗಳೆಷ್ಟು?
ಇದನ್ನೂ ನೋಡಿ