ಮಲ್ಲಿಕಾ ಶೆರಾವತ್ ವಿವಾದಗಳು ಒಂದೆರಡಲ್ಲ, ಇಲ್ಲಿದೆ ಪಟ್ಟಿ

24 OCT 2024

 Manjunatha

ಬಾಲಿವುಡ್​ನ ಹಾಟೆಸ್ಟ್ ನಟಿಯಾಗಿದ್ದವರು ಮಲ್ಲಿಕಾ ಶೆರಾವತ್, ನಾಯಕಿಯರು ಹಾಟ್​ ಆಗಿ ಕಾಣಿಸಿಕೊಳ್ಳುವ ಸಂಪ್ರದಾಯಕ್ಕೆ ನಾಂದಿ ಹಾಡಿದರು ಮಲ್ಲಿಕಾ.

  ನಟಿ ಮಲ್ಲಿಕಾ ಶೆರಾವತ್

ಮಲ್ಲಿಕಾ ಶೆರಾವತ್ ಹೆಸರು ಸಾಕಷ್ಟು ವಿವಾದಗಳಲ್ಲಿಯೂ ಸಹ ಕೇಳಿ ಬಂದಿತ್ತು. ಬಾಲಿವುಡ್​ ಅನ್ನೇ ತೊರೆಯುವಂತೆ ಮಾಡಿದವು ವಿವಾದಗಳು.

ಮಲ್ಲಿಕಾ ಹೆಸರು ವಿವಾದಲ್ಲಿ

ಚಿತ್ರರಂಗಕ್ಕೆ ಬರುವ ಮುಂಚೆಯೇ ಮಲ್ಲಿಕಾಗೆ ಮದುವೆ ಆಗಿತ್ತು, ಆದರೆ ಅದನ್ನು ಮುಚ್ಚಿಟ್ಟಿದ್ದರು. ಬಹಿರಂಗವಾದ ಬಳಿಕ ವಿಚ್ಛೇದನ ನೀಡಿದರು.

 ಮಲ್ಲಿಕಾ ಮದುವೆ ವಿಷಯ

ಭಾರತದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ, ಇಲ್ಲಿ ಪ್ರತಿದಿನ ಅತ್ಯಾಚಾರಗಳು ನಡೆಯುತ್ತವೆ ಎಂದೆಲ್ಲ ಭಾರತದ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದು ವಿವಾದವಾಗಿತ್ತು.

    ಭಾರತದ ಬಗ್ಗೆ ಮಾತು

‘ಡರ್ಟಿ ಪಾಲಿಟಿಕ್ಸ್’ ಹೆಸರಿನ ಸಿನಿಮಾದ ಪೋಸ್ಟರ್​ನಲ್ಲಿ ಬೆತ್ತಲೆ ಮೈಮೇಲೆ ಭಾರತದ ತ್ರಿವರ್ಣ ಧ್ವಜ ಹೊದ್ದುಕೊಂಡಿದ್ದರು ಮಲ್ಲಿಕಾ ಇದು ವಿವಾದವಾಗಿತ್ತು.

‘ಡರ್ಟಿ ಪಾಲಿಟಿಕ್ಸ್’ ವಿವಾದ

‘ಖ್ವಾಯಿಷ್’ ಹೆಸರಿನ ಸಿನಿಮಾದಲ್ಲಿ ನಾಯಕನಿಗಾಗಿ ಕಾಂಡೊಮ್ ಖರೀದಿ ಮಾಡುವ ದೃಶ್ಯದಲ್ಲಿ ನಟಿಸಿದ್ದರು, ಈ ದೃಶ್ಯಕ್ಕೆ ವಿರೋಧ ವ್ಯಕ್ತವಾಗಿತ್ತು.

     ಕಾಂಡೊಮ್ ಖರೀದಿ 

‘ಫ್ರೀ ಎ ಗರ್ಲ್​ ಇನ್ ಇಂಡಿಯಾ’ ಹೆಸರಿನ ಎನ್​ಜಿಓ ಪರವಾಗಿ 12 ಗಂಟೆಗಳ ಕಾಲ ಕಂಬಿಯ ಹಿಂದೆ ಕಳೆದಿದ್ದರು, ಇದು ಭಾರತ ವಿರೋಧಿ ಎನಿಸಿಕೊಂಡಿತ್ತು.

 ದೇಶ ವಿರೋಧಿ ಪ್ರತಿಭಟನೆ

‘ಮರ್ಡರ್’ ಸಿನಿಮಾದ ನಟ ಇಮ್ರಾನ್ ಹಶ್ಮಿ ಜೊತೆ ಜಗಳ ಮಾಡಿಕೊಂಡು 20 ವರ್ಷಗಳ ಕಾಲ ಮಾತು ಬಿಟ್ಟಿದ್ದರು.

ಇಮ್ರಾನ್ ಹಶ್ಮಿ ಜೊತೆ ಜಗಳ

ಶೀಘ್ರವೇ ಅಭಿಮಾನಿಗಳೆದುರು ಬರಲಿದ್ದಾರೆ ಅನುಷ್ಕಾ ಶೆಟ್ಟಿ