ಜಗತ್ತಿನ ಟಾಪ್ 10 ಜನಪ್ರಿಯ ಮಾಡೆಲ್​ಗಳಿವರು: ಇವರ ವಾರ್ಷಿಕ ಆದಾಯ ಎಷ್ಟು ಗೊತ್ತೆ?

20 OCT 2023

ಅಮೆರಿಕದ ಕಪ್ಪು ಚೆಲುವೆ ಚಾನೆಲ್ ಇಮಾನ್ ರೊಬಿಸನ್ ಶೆಫರ್ಡ್ ಟಾಪ್ ಮಾಡೆಲ್​ಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅವರ ವಾರ್ಷಿಕ ಆದಾಯ 66.45 ಕೋಟಿ ರೂಪಾಯಿಗಳು.

10-ಚಾನೆಲ್ ಇಮಾನ್

ಕರ್ದಾಶಿಯನ್ ಕುಟುಂಬದ ಕಿಮ್ ಕರ್ದಾಶಿಯನ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಒಂದು ಸಮಯದಲ್ಲಿ ನಂಬರ್ 1 ಸಹ ಆಗಿದ್ದರು ಇವರು. ಇವರ ವಾರ್ಷಿಕ ಆದಾಯ 58 ಕೋಟಿ.

09-ಕಿಮ್ ಕರ್ದಾಶಿಯನ್

ವಿಕ್ಟೋರಿಯಾ ಸೀಕ್ರೆಟ್ ಏಂಜಲ್ ಪ್ರಶಸ್ತಿ ಗೆದ್ದಿದ್ದ ಟೈಲರ್ ಹಿಲ್ಲಿ, ಟಾಪ್ 8ರ ಸ್ಥಾನದಲ್ಲಿದ್ದಾರೆ. ಇವರ ವಾರ್ಷಿಕ ಆದಾಯ 55 ಕೋಟಿ ರೂಪಾಯಿ.

08- ಟೈಲರ್ ಹಿಲ್ಲಿ

ಲಂಡನ್ ಮೂಲದ ಎಮಿಲಿ ಓಹಾರಾ ಹಲವು ಜನಪ್ರಿಯ ಬ್ರ್ಯಾಂಡ್​ಗಳಿಗೆ ಮಾಡೆಲಿಂಗ್ ಮಾಡಿದ್ದಾರೆ. ಇವರ ವಾರ್ಷಿಕ ಆದಾಯ 65 ಕೋಟಿ ರೂಪಾಯಿ.

07-ಎಮಿಲಿ ಒಹಾರಾ

ಆಸ್ಟ್ರೇಲಿಯಾದ ಚೆಲುವೆ ಮಿರಾಂಡಾ ಕೆರ್ ಮಾಡೆಲ್, ನಟಿ ಹಾಗೂ ಉದ್ಯಮಿ ಸಹ. ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಇವರ ವಾರ್ಷಿಕ ಆದಾಯ 70.65 ಕೋಟಿ.

06- ಮಿರಾಂಡಾ ಕೆರ್

ಅಮೆರಿಕದ ಜನಪ್ರಿಯ ಮಾಡೆಲ್​ಗಳಲ್ಲಿ ಒಬ್ಬರಾಗಿರುವ ಬೆಲ್ಲಾ ಹದೀದ್ ವಿಶ್ವದ ಪ್ರಮುಖ ಫ್ಯಾಷನ್ ವೀಕ್​ಗಳಲ್ಲಿ ಭಾಗಿಯಾಗಿದ್ದಾರೆ. ಇವರ ವಾರ್ಷಿಕ ಆದಾಯ 75 ಕೋಟಿ ರೂಪಾಯಿ.

05- ಬೆಲ್ಲಾ ಹದೀದ್

ಚೂಪು ಕಣ್​ಗಳ ಚೆಲುವೆ ಕಾರಾ ಡೆಲ್​ವಿನ್ ಮಾಡೆಲಿಂಗ್ ಜೊತೆಗೆ ನಟನೆಯನ್ನೂ ಮಾಡುತ್ತಾರೆ. ಇವರ ವಾರ್ಷಿಕ ಆದಾಯ 75 ಕೋಟಿ.

04-ಕಾರಾ ಡೆಲ್​ವಿನ್

ಹಂಗೇರಿಯಾದ ಮಾಡೆಲ್ ಬಾರ್ಬರಾ ಪಾಲ್ವಿನ್ ವಿಕ್ಟೋರಿಯಾ ಸೀಕ್ರೆಟ್ ಏಂಜಲ್ ಆಗಿದ್ದವರು. ಅರ್ಮಾನಿ, ಎಚ್​ ಆಂಡ್ ಎಂ ಸೇರಿದಂತೆ ಇನ್ನೂ ಹಲವು ವಿಶ್ವಪ್ರಸಿದ್ಧ ಬ್ರ್ಯಾಂಡ್​ಗಳಿಗೆ ಮಾಡೆಲಿಂಗ್ ಮಾಡಿದ್ದಾರೆ. ಇವರ ಆದಾಯ 83 ಕೋಟಿ ರೂಪಾಯಿ.

03-ಬಾರ್ಬರಾ ಪಾಲ್ವಿನ್

ಇತ್ತೀಚೆಗಷ್ಟೆ ಭಾರತಕ್ಕೆ ಬಂದಿದ್ದ, ವರುಣ್ ಧವನ್ ಜೊತೆ ವೇದಿಕೆ ಹಂಚಿಕೊಂಡು ತುಸು ವಿವಾದಕ್ಕೂ ಗುರಿಯಾಗಿದ್ದ ಗೀಗಿ ಹದೀದ್ ವಾರ್ಷಿಕ ಆದಾಯ 92 ಕೋಟಿ ರೂಪಾಯಿಗಳು.

02-ಗೀಗಿ ಹದೀದ್

ಕೆಂಡಲ್ ಜೆನ್ನರ್ ವಿಶ್ವದ ಟಾಪ್ 1 ಮಾಡೆಲ್. ಹಲವು ವಿಶ್ವಪ್ರಸಿದ್ಧ ಬ್ರ್ಯಾಂಡ್​ಗಳಿಗೆ ಮಾಡೆಲಿಂಗ್ ಮಾಡಿರುವ ಕೆಂಡಲ್​ರ ವಾರ್ಷಿಕ ಆದಾಯ 150 ಕೋಟಿಗೂ ಹೆಚ್ಚು.

01-ಕೆಂಡಲ್ ಜೆನ್ನರ್

ಮಿನುಗುವ ಉಡುಪಿನಲ್ಲಿ ಮಾಜಿ ನಾಗಿಣಿ ಮೌನಿ ರಾಯ್