ಹೊಂಬಾಳೆ ಫಿಲಮ್ಸ್ ಪ್ರಸ್ತುತ ನಿರ್ಮಿಸುತ್ತಿರುವ ಸಿನಿಮಾಗಳೆಷ್ಟು? ಯಾವುವು?

26 OCT 2023

ಯಶಸ್ವಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್​, ಪ್ರಸ್ತುತ ಏಳು ಸಿನಿಮಾಗಳನ್ನು ಒಟ್ಟಿಗೆ ನಿರ್ಮಾಣ ಮಾಡುತ್ತಿದೆ ಹೊಂಬಾಳೆ.

ಏಳು ಸಿನಿಮಾ

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ಮಿಸಿದ್ದು ಈ ಸಿನಿಮಾ ಡಿಸೆಂಬರ್​ನಲ್ಲಿ ತೆರೆಗೆ ಬರಲಿದೆ.

'ಸಲಾರ್'

ಶ್ರೀಮುರಳಿ ನಟಿಸುತ್ತಿರುವ 'ಬಘೀರ' ಸಿನಿಮಾವನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈ ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ.

'ಬಘೀರ'

ಯುವ ರಾಜ್​ಕುಮಾರ್ ನಟನೆಯ 'ಯುವ' ಸಿನಿಮಾಕ್ಕೆ ಹೊಂಬಾಳೆ ಬಂಡವಾಳ ಹೂಡಿದ್ದು ಮುಂದಿನ ವರ್ಷ ಮಾರ್ಚ್​ 28ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

ಯುವ ರಾಜ್​ಕುಮಾರ್

ಮಲಯಾಳಂನಲ್ಲಿ 'ಟೈಸನ್' ಹೆಸರಿನ ಸಿನಿಮಾ ನಿರ್ಮಿಸುತ್ತಿದೆ. ಇದಕ್ಕೆ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಕ.

'ಟೈಸನ್'

ತಮಿಳಿನಲ್ಲಿ 'ರಘು ತಾತ' ಹೆಸರಿನ ಸಿನಿಮಾ ನಿರ್ಮಿಸುತ್ತಿದ್ದು, ಈ ಸಿನಿಮಾಕ್ಕೆ ಕೀರ್ತಿ ಸುರೇಶ್ ನಾಯಕಿ.

'ರಘು ತಾತ'

ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಲಿರುವ 'ರಿಚರ್ಡ್ ಆಂಟೊನಿ' ಸಿನಿಮಾಕ್ಕೂ ಹೊಂಬಾಳೆಯದ್ದೇ ಬಂಡವಾಳ ಈ ಸಿನಿಮಾ ಚಿತ್ರೀಕರಣ ಶೀಘ್ರ ಆರಂಭವಾಗಲಿದೆ.

'ರಿಚರ್ಡ್ ಆಂಟೊನಿ'

'ಕಾಂತಾರ 2' ಸಿನಿಮಾಕ್ಕೂ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದ್ದು ಸಿನಿಮಾ ಶೀಘ್ರ ಶುರುವಾಗಲಿದೆ.

'ಕಾಂತಾರ 2'

ಇದೆಲ್ಲದರ ಜೊತೆಗೆ 'ಕೆಜಿಎಫ್ 3' ಸಿನಿಮಾವನ್ನು ಸಹ ಹೊಂಬಾಳೆ ಘೋಷಿಸಿದೆ. ಈ ಸಿನಿಮಾದ ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆಯೋ ಗೊತ್ತಿಲ್ಲ.

'ಕೆಜಿಎಫ್ 3'

ಕಾಫಿ ವಿತ್ ಕರಣ್ ಶೋನಲ್ಲಿ ತಮ್ಮ ಬಗ್ಗೆ ಹಲವು ವಿಷಯಗಳನ್ನು ರಣ್ವೀರ್ ಸಿಂಗ್ ಹಾಗೂ ದೀಪಿಕಾ ಹಂಚಿಕೊಂಡಿದ್ದಾರೆ