50 ವರ್ಷ ವಯಸ್ಸಿನ ಮಲೈಕಾ ಅರೋರಾ 30ರಂತೆ ಕಾಣಲು ಪಾಲಿಸುವ ಡಯಟ್ ಯಾವುದು? ಅವರ ಆರೋಗ್ಯದ ಗುಟ್ಟೇನು?

08 May 2024

Author : Manjunatha

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಈಗ 50 ವರ್ಷ ವಯಸ್ಸು. ಆದರೆ ಮಲೈಕಾ 30 ವರ್ಷದವರಂತೆ ಕಾಣುತ್ತಾರೆ. ಮಲೈಕಾ ಈಗಲೂ ಬಾಲಿವುಡ್​ನ ಹಾಟ್ ನಟಿ.

ಮಲೈಕಾ ವಯಸ್ಸು 50

ಸಪೂರ ದೇಹ ಹೊಂದಿರುವ ಮಲೈಕಾ ಅರೋರಾ, ತಮ್ಮ ದೇಹವನ್ನು ಸುಂದರವಾಗಿಟ್ಟುಕೊಳ್ಳಲು ಶಿಸ್ತಿನ ಡಯಟ್ ಹಾಗೂ ದೈಹಿಕ ವ್ಯಾಯಾಮಗಳನ್ನು ಮಾಡುತ್ತಾರೆ.

ಸಪೂರ ದೇಹದ ಮಲೈಕಾ

ಮಲೈಕಾ ಅರೋರಾ ತಮ್ಮ ದಿನ ಪ್ರಾರಂಭಿಸುವುದು ನಿಂಬೆ ಬೆರೆತ ನೀರು ಕುಡಿಯುವುದರೊಂದಿಗೆ. ಅದರ ಬಳಿಕ ಜೀರಿಗೆ, ಅಜ್ವೈನ್ ಬೆರೆತ ನೀರು ಕುಡಿಯುತ್ತಾರೆ.

ದಿನದ ಪ್ರಾರಂಭ

ಆ ನಂತರ ಮಲ್ಲಿಕಾರ ಉಪಹಾರದ ಸಮಯ. ಉಪಹಾರಕ್ಕೆ ಅವರು ಬೇಯಿಸಿದ ಮೊಟ್ಟೆ ಜೊತೆಗೆ ಕೆಲವು ಒಣ ಹಣ್ಣುಗಳನ್ನಷ್ಟೆ ಸೇವಿಸುತ್ತಾರೆ.

ಮಲ್ಲಿಕಾರ ಉಪಹಾರ

ಆ ನಂತರ ಜಿಮ್​ಗೆ ಹೋಗುವ ಮಲೈಕಾ ಅರೋರಾ ಅಲ್ಲಿ ಬೆವರಿಳಿಯುವಂತೆ ವರ್ಕೌಟ್ ಮಾಡುತ್ತಾರೆ. ವರ್ಕೌಟ್ ಸಮಯದಲ್ಲಿ ಚೆನ್ನಾಗಿ ನೀರು ಮತ್ತು ಪ್ರೋಟಿನ್ ಶೇಕ್ ಸಹ ಕುಡಿಯುತ್ತಾರೆ.

ಪ್ರೋಟೀನ್ ಶೇಕ್

ಮಧ್ಯಾಹ್ನದ ಭೋಜನಕ್ಕೆ ಎಣ್ಣೆ ರಹಿತ ಚಪಾತಿ, ಹೆಚ್ಚು ಮಸಾಲೆಗಳಿಲ್ಲದ ದಾಲ್. ಸ್ವಲ್ಪವೇ ಅನ್ನ ಮತ್ತು ಚಿಕನ್ ಅನ್ನು ಸೇವಿಸುತ್ತಾರೆ. ಅವರ ಆಹಾರ ಬಹಳ ಮಿತವಾಗಿರುತ್ತದೆ.

ಮಧ್ಯಾಹ್ನದ ಊಟ

ಮಲೈಕಾ ಅರೋರಾ ರಾತ್ರಿ ಊಟವನ್ನು ಬೇಗನೆ ಮುಗಿಸುತ್ತಾರೆ. ಏಳು ಗಂಟೆಗೆಲ್ಲ ಅವರ ರಾತ್ರಿ ಊಟ ಮುಗಿದಿರುತ್ತದೆ. ರಾತ್ರಿ ಊಟದಲ್ಲಿ ಹಸಿ ಮತ್ತು ಬೇಯಿಸಿದ ತರಕಾರಿ, ಕೆಲವು ರೀತಿಯ ಸೊಪ್ಪುಗಳು ಇರುತ್ತವೆ. ಚೀಸ್ ಸಹ ಸೇವಿಸುತ್ತಾರೆ.

ಮಲೈಕಾ ರಾತ್ರಿ ಊಟ

ಮಲೈಕಾ ಅರೋರಾ ಎಣ್ಣೆ, ಅತಿಯಾದ ಮಸಾಲೆ ಪದಾರ್ಥಗಳನ್ನು ಸೇವಿಸುವುದಿಲ್ಲ. ಮೈದಾದಿಂದ ಮಾಡಿದ ಪದಾರ್ಥ, ಜಂಕ್ ಫುಡ್​ಗಳನ್ನು ಸೇವಿಸುವುದಿಲ್ಲ.

ಜಂಕ್ ಫುಡ್ ತಿನ್ನರು

ಮಲೈಕಾ ಅರೋರಾ ಊಟದ ಜೊತೆಗೆ ವರ್ಕೌಟ್​ಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ. ದಿನವೂ ತಪ್ಪದೆ ವ್ಯಾಯಾಮ ಮಾಡುತ್ತಾರೆ. ಜಿಮ್ ವರ್ಕೌಟ್ ಜೊತೆಗೆ ಯೋಗ ಸಹ ಮಾಡುತ್ತಾರೆ.

ವ್ಯಾಯಾಮಕ್ಕೆ ಆದ್ಯತೆ

ಒದ್ದೆ ಬಟ್ಟೆ ಧರಿಸಿ ಬಂದು ತನ್ನ ಗ್ಲಾಮರ್ ನಿಂದ ಮೆಟ್ ಗಾಲಾಕ್ಕೆ ಗ್ಲಾಮರಸ್ ತುಂಬಿದ ಗಾಯಕಿ ಡೋಜಾ ಕ್ಯಾಟ್