ಕರ್ನಾಟಕದ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಎಷ್ಟು ಸಿನಿಮಾಗಳಿವೆ? ಅವು ಯಾವುವು?

08 Mar 2024

Author : Manjunatha

‘ಕಿರಿಕ್ ಪಾರ್ಟಿ’ ಸಿನಿಮಾದಿಂದ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ನಟಿ. ಹಲವು ಭಾಷೆಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

‘ಕಿರಿಕ್ ಪಾರ್ಟಿ’ ಸಿನಿಮಾ

ರಶ್ಮಿಕಾ ಮಂದಣ್ಣ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪ 2 ಸಿನಿಮಾದಲ್ಲಿ ಈ ಬಾರಿ ರಶ್ಮಿಕಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆಯಂತೆ.

ಪುಷ್ಪ 2 ಸಿನಿಮಾ

ತೆಲುಗಿನ ‘ಗರ್ಲ್​ಫ್ರೆಂಡ್’ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಸಿನಿಮಾದ ನಾಯಕ ಕನ್ನಡಿಗ ದೀಕ್ಷಿತ್ ಶೆಟ್ಟಿ.

‘ಗರ್ಲ್​ಫ್ರೆಂಡ್’ ಸಿನಿಮಾ

‘ರೇನ್​ಬೋ’ ಹೆಸರಿನ ತೆಲುಗು ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾ ಸಹ ಮಹಿಳಾ ಪ್ರಧಾನ ಸಿನಿಮಾ.

‘ರೇನ್​ಬೋ‘ ಸಿನಿಮಾ

ತಮಿಳಿನ ಸ್ಟಾರ್ ನಟ ಧನುಶ್ ಜೊತೆಗೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ‘ಕುಬೇರ’ ಎಂದು ಹೆಸರಿಡಲಾಗಿದೆ.

ಧನುಶ್ ಜೊತೆ ನಟನೆ

ರಶ್ಮಿಕಾ ಮಂದಣ್ಣ ಮತ್ತೆ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ. ಇಬ್ಬರು ಒಟ್ಟಿಗೆ ನಟಿಸಿದ್ದ ಮೊದಲ ಸಿನಿಮಾ ‘ಗೀತಾ ಗೋವಿಂದಂ’ ಸೀಕ್ವೆಲ್​ನಲ್ಲಿ ಇಬ್ಬರು ಒಂದಾಗುತ್ತಿದ್ದಾರೆ.

ವಿಜಯ್ ದೇವರಕೊಂಡ 

ರಶ್ಮಿಕಾ ಮಂದಣ್ಣ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆಗೆ ‘ಛಾವಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ.

ಬಾಲಿವುಡ್ ಸಿನಿಮಾ

ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ರಶ್ಮಿಕಾ ಮಂದಣ್ಣ ಹೊಸದೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.

ವರುಣ್ ಧವನ್

ರಶ್ಮಿಕಾ ಮಂದಣ್ಣ ತಮಿಳಿನ ಸೂಪರ್ ಸ್ಟಾರ್ ಒಟ್ಟಿಗೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಇನ್ನೂ ಖಾತ್ರಿಯಾಗಿಲ್ಲ.

ತಮಿಳು ಸೂಪರ್ ಸ್ಟಾರ್

ನಟಿ ತಮನ್ನಾ ಧರಿಸಿರುವ ಈ ಹೊಳೆಯುವ ಕಪ್ಪು ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?