ತಮನ್ನಾ ಭಾಟಿಯಾ ಧರಿಸಿರುವ ಈ ಹೊಳೆಯುವ ಉಡುಗೆಯ ಕಪ್ಪು ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

08 Mar 2024

Author : Manjunatha

ತಮನ್ನಾ ಭಾಟಿಯಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಹಿಂದಿಯಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಮನ್ನಾ ಭಾಟಿಯಾ

ತಮನ್ನಾ ಒಳ್ಳೆಯ ನಟಿಯಾಗಿರುವ ಜೊತೆಗೆ ಬೇಡಿಕೆಯ ಮಾಡೆಲ್ ಸಹ ಹೌದು. ಹಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿರುತ್ತಾರೆ.

ಬೇಡಿಕೆಯ ಮಾಡೆಲ್

ತಮನ್ನಾ ಉಡುಗೆಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇನ್​ಸ್ಟಾಗ್ರಾಂನಲ್ಲಿಯೂ ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಹೊಸ ಪ್ರಯೋಗಗಳು

ಇತ್ತೀಚೆಗೆ ಕಪ್ಪು ಬಣ್ಣದ ಭಿನ್ನ ರೀತಿಯ ಉಡುಪನ್ನು ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದ ತಮನ್ನಾ, ಚಿತ್ರಗಳನ್ನು ಹಂಚಿಕೊಂಡಿದ್ದರು.

ಭಿನ್ನ ರೀತಿಯ ಉಡುಪು

ಚಿತ್ರಗಳಲ್ಲಿ ತಮನ್ನಾ ತೊಟ್ಟಿರುವ ಹೊಳೆಯುವ ಕಪ್ಪು ಬಣ್ಣದ ವೆಲ್ವೆಟ್ ಮಾದರಿಯ ಉಡುಪಿನ ಬೆಲೆ ಬರೋಬ್ಬರಿ 1.94 ಲಕ್ಷ ರೂಪಾಯಿಗಳು.

ಉಡುಪಿನ ಬೆಲೆ ಎಷ್ಟು?

ಜನಪ್ರಿಯ ಡೇವಿಡ್ ಕೋಮಾ ವಿನ್ಯಾಸದ ಉಡುಪಿನ ಹೆಸರು ಫುಲ್ ಸ್ಲೀವ್ಡ್ ಬ್ಲಾಕ್ ಸ್ಟೇನ್ ಮಿಡಿ ಡ್ರೆಸ್ ಎಂದು.

ಡೇವಿಡ್ ಕೋಮಾ ವಿನ್ಯಾಸ

ಈ ಉಡುಗೆಯನ್ನು ಹಲವು ರೀತಿಯ ಬಟ್ಟೆಗಳನ್ನು ಬಳಸಿ ಮಾಡಲಾಗಿದೆ. ಇದರ ವಿನ್ಯಾಸ ಹಾಗೂ ನಿರ್ಮಾಣ ಆಗಿರುವುದು ಲಂಡನ್​ನಲ್ಲಿ.

ಲಂಡನ್​ನಲ್ಲಿ ವಿನ್ಯಾಸ

ಮಿಲ್ಕಿ ಬ್ಯೂಟಿ ಎಂಬ ಉಪನಾಮೆ ಹೊಂದಿರುವ ತಮನ್ನಾ ಭಾಟಿಯಾಗೆ ಕಪ್ಪು ಬಣ್ಣದ ಬಟ್ಟೆಗಳು ಬಹಳ ಚೆನ್ನಾಗಿ ಒಪ್ಪುತ್ತವೆ.

ಮಿಲ್ಕಿ ಬ್ಯೂಟಿ ಉಪನಾಮೆ

ತಮನ್ನಾ ಭಾಟಿಯಾ ಪ್ರಸ್ತುತ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಪ್ರೀತಿಯಲ್ಲಿದ್ದು ಇಬ್ಬರೂ ಶೀಘ್ರವೇ ಮದುವೆ ಸಹ ಆಗಲಿದ್ದಾರೆ.

ವಿಜಯ್ ವರ್ಮಾ ಜೊತೆ

ಸಪೂರ ಸುಂದರಿ ನಿಕ್ಕಿ ತಾಂಬೋಲಿಯ ಫಿಟ್​ನೆಸ್ ಗುಟ್ಟೇನು? ಅವರ ಡಯಟ್ ಹೇಗಿದೆ?