ನಟ, ರಾಜಕಾರಣಿ ಪವನ್ ಕಲ್ಯಾಣ್ ಆಸ್ತಿ ಎಷ್ಟು? ಇರುವ ಸಾಲವೆಷ್ಟು?

13 OCT 2023

ಪವನ್ ಕಲ್ಯಾಣ್​ 2019ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಆಸ್ತಿ ಘೋಷಣೆ ಮಾಡಿಕೊಂಡಿದ್ದರು.

ಆಸ್ತಿ ಘೋಷಣೆ

2019ರಲ್ಲಿ ಪವನ್ ಕಲ್ಯಾಣ್ 52 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು. ಅದೀಗ ಕನಿಷ್ಟ ಒಂದು ಪಟ್ಟಾದರೂ ಹೆಚ್ಚಾಗಿರುವುದು ಖಾತ್ರಿ.

52 ಕೋಟಿ ಆಸ್ತಿ 

2019ರಲ್ಲಿ ಪವನ್ ಕಲ್ಯಾಣ್ ಬಳಿ ಸುಮಾರು 40 ಕೋಟಿ ಮೌಲ್ಯದ ಕೃಷಿ ಹಾಗೂ ಕೃಷಿಯೇತರ ಜಮೀನಿತ್ತು. ಅದರ ಮೌಲ್ಯ ಈಗ 50% ಹೆಚ್ಚಾಗಿರಬಹುದು.

ಜಮೀನು ಮೌಲ್ಯ

ಬೆಂಜ್ ಎಸ್ ಕ್ಲಾಸ್, ವೋಲ್ವೋ ಕಾರು, ಫಾರ್ಚುನರ್, ಸ್ಕೋಡಾ ರ್ಯಾಪಿಡಾ, ಹಾರ್ಲೆ ಡೇವಿಡ್​ಸನ್ ಬೈಕ್ ಇನ್ನಿತರೆಗಳನ್ನು ಸೇರಿ 2.75 ಕೋಟಿ ಮೌಲ್ಯದ ವಾಹನಗಳು ಆಗಲೇ ಇದ್ದವು.

ಕಾರುಗಳು ಯಾವುವು?

ಪವನ್ ಕಲ್ಯಾಣ್ ಹೈದರಾಬಾದ್​ನ ಬಂಜಾರಾ ಹಿಲ್ಸ್​ನಲ್ಲಿ 1.75 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ಅವರ ಈಗಿನ ಪತ್ನಿ ಅನ್ನಾ ರಷ್ಯಾನಲ್ಲಿ 40 ಲಕ್ಷ ಮೌಲ್ಯದ ಮನೆ ಹೊಂದಿದ್ದಾರೆ.

ಮನೆ ಮೌಲ್ಯವೆಷ್ಟು?

ಪವನ್ ಕಲ್ಯಾಣ್​ಗೆ ಸಾಲುಗಳು ಕಡಿಮೆ ಇಲ್ಲ. ಬ್ಯಾಂಕ್ ಸಾಲ, ನಿರ್ಮಾಣ ಸಂಸ್ಥೆಗಳಿಂದ ಪಡೆದ ಸಾಲ, ಖಾಸಗಿ ಸಾಲಗಳ ಒಟ್ಟು ಮೊತ್ತ 33 ಕೋಟಿ. ಇದು 2019ರ ಲೆಕ್ಕ.

ಸಾಲ ಎಷ್ಟಿತ್ತು?

ಅಂದಹಾಗೆ ತಮ್ಮ ಅಫಿಡವಿಟ್​ನಲ್ಲಿ ಹೇಳಿಕೊಂಡಿರುವಂತೆ ಪವನ್ ಕಲ್ಯಾಣ್ ಓದಿರುವುದು ಕೇವಲ 10ನೇ ತರಗತಿ ಅಷ್ಟೆ.

ವಿದ್ಯಾರ್ಹತೆ ಏನು?

ಇದೆಲ್ಲವೂ 2019ರ ಲೆಕ್ಕ, ಈಗ ಪವನ್ ಕಲ್ಯಾಣ್ ಆಸ್ತಿ ಮೌಲ್ಯ 200 ಕೋಟಿ ದಾಟಿರುವ ಅಂದಾಜಿದೆ.

ಈಗಿನ ಮೌಲ್ಯ ಎಷ್ಟು?

ಟ್ರೆಡಿಷನಲ್ ಲುಕ್​ನಲ್ಲಿ ಕಣ್ಣು ಕುಕ್ಕಿದ ದಿವ್ಯಾ ಉರುಡುಗ