'ಕಾಫಿ ವಿತ್ ಕರಣ್​' ಹೊಸ ಸೀಸನ್​ಗೆ ಕರಣ್ ಜೊಹರ್ ಪಡೆಯುತ್ತಿರುವ ಸಂಭಾವನೆ ಎಷ್ಟು?

11 NOV 2023

ಜನಪ್ರಿಯ ಸಿನಿಮಾ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಟಾಕ್ ಶೋ ಹೋಸ್ಟ್ ಆಗಿಯೂ ಬಹಳ ಜನಪ್ರಿಯರು. 

ಕರಣ್ ಜೋಹರ್

ಕರಣ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಟಿವಿ ಜಗತ್ತಿನ ವಿವಾದಾತ್ಮಕ ಶೋ ಜೊತೆಗೆ ಅತ್ಯಂತ ದುಬಾರಿ ಬಜೆಟ್​ನ, ಹೆಚ್ಚು ವೀಕ್ಷಕ ವರ್ಗವಿರುವ, ಐಶಾರಾಮಿ ಶೋ ಸಹ. 

'ಕಾಫಿ ವಿತ್ ಕರಣ್'

ಇದೀಗ ಕಾಫಿ ವಿತ್ ಕರಣ್​ನ ಸೀಸನ್ 8 ಪ್ರಾರಂಭವಾಗಿದ್ದು, ಮೂರು ಎಪಿಸೋಡ್​ಗಳು ಪ್ರಸಾರವಾಗಿವೆ. ಅಂದಹಾಗೆ ಈ ಶೋ ಹೋಸ್ಟ್ ಮಾಡಲು ಕರಣ್ ಜೋಹರ್ ಪಡೆಯುವ ಸಂಭಾವನೆ ಎಷ್ಟು?

ಸಂಭಾವನೆ ಎಷ್ಟು?

ಕರಣ್ ಜೋಹರ್, ಕಾಫಿ ವಿತ್ ಕರಣ್​ ಸೀಸನ್ 8ರ ಒಂದು ಎಪಿಸೋಡ್​ಗೆ ಎರಡು ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

ಎರಡು ಕೋಟಿ 

ಕಾಫಿ ವಿತ್ ಕರಣ್​ ಶೋನ ಒಂದು ಸೀಸನ್​ಗೆ ಕರಣ್ ಜೋಹರ್​ ಸುಮಾರು 25 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ.

25 ಕೋಟಿ

ಬಾಲಿವುಡ್​ನ ಎಲ್ಲ ದಿಗ್ಗಜ ನಟ, ನಟಿ, ನಿರ್ದೇಶಕರನ್ನು ತಮ್ಮ ಶೋಗೆ ಆಹ್ವಾನಿಸಿ ಅವರೊಟ್ಟಿಗೆ ಸಂವಾದ ನಡೆಸಿದ್ದಾರೆ ಕರಣ್ ಜೋಹರ್.

ಸೆಲೆಬ್ರಿಟಿ ಶೋ

ಇದೀಗ ಎಂಟನೇ ಸೀಸನ್​ ಅನ್ನು ಕರಣ್ ಜೋಹರ್ ಹೋಸ್ಟ್ ಮಾಡುತ್ತಿದ್ದು, ದೀಪಿಕಾ-ರಣ್ವೀರ್, ಸಾರಾ ಅಲಿ ಖಾನ್-ಅನನ್ಯಾ ಪಾಂಡೆ, ಸನ್ನಿ ಡಿಯೋಲ್-ಬಾಬಿ ಡಿಯೋಲ್ ಅವರನ್ನು ಈವರೆಗೆ ಅತಿಥಿಗಳಾಗಿ ಆಹ್ವಾನಿಸಿದ್ದಾರೆ.

ದೀಪಿಕಾ-ರಣ್ವೀರ್

ಮೊದಲು ಬಾಲಿವುಡ್ ನಟರನ್ನಷ್ಟೆ ಆಹ್ವಾನಿಸುತ್ತಿದ್ದ ಕರಣ್, ಇತ್ತೀಚೆಗೆ ದಕ್ಷಿಣ ಭಾರತದ ನಟರನ್ನೂ ಆಹ್ವಾನಿಸುತ್ತಿದ್ದಾರೆ.

ದಕ್ಷಿಣ ಭಾರತದ ನಟ

ಹಾಟ್ ಅವತಾರದಲ್ಲಿ ಕೆಎಲ್ ರಾಹುಲ್ ಪತ್ನಿ ಆಥಿಯಾ ಶೆಟ್ಟಿ