ನಟಿ ತಮನ್ನಾ ಭಾಟಿಯಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

14 May 2024

Author : Manjunatha

ತಮನ್ನಾ ಭಾಟಿಯಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಪರಸ್ಪರ ಪ್ರೀತಿಸುತ್ತಿರುವುದಾಗಿ ಕಳೆದ ವರ್ಷ ಬಹಿರಂಗವಾಗಿಯೇ ಘೋಷಿಸಿದರು.

ತಮನ್ನಾ-ವಿಜಯ್ ಪ್ರೇಮ

ತಮನ್ನಾ ಭಾಟಿಯಾ ಭಾರತದ ಅತ್ಯಂತ ಸುಂದರ ಹಾಗೂ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಕೆಲವರಂತೂ ವಿಜಯ್ ವರ್ಮಾರ ಅದೃಷ್ಟಕ್ಕೆ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದೂ ಉಂಟು.

ಹಲವರಿಗೆ ಹೊಟ್ಟೆ ಕಿಚ್ಚು

ಅಸಲಿಗೆ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ನಡುವೆ ಪ್ರೀತಿ ಶುರುವಾಗಿದ್ದು ಹೇಗೆ? ಎಂಬುದು ಹಲವರ ಪ್ರಶ್ನೆಯಾಗಿತ್ತು. ಇದಕ್ಕೆ ವಿಜಯ್ ವರ್ಮಾ ಸಂದರ್ಶನವೊಂದರಲ್ಲಿ ಉತ್ತರ ಕೊಟ್ಟಿದ್ದಾರೆ.

  ಶುರುವಾಗಿದ್ದು ಹೇಗೆ?

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ‘ಲಸ್ಟ್ ಸ್ಟೋರೀಸ್ 2’ ಅಂಥಾಲಜಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದಲ್ಲಿ ವಿಜಯ್ ತುಸು ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.

   ‘ಲಸ್ಟ್ ಸ್ಟೋರೀಸ್ 2’

ಆ ಸಿನಿಮಾದ ಚಿತ್ರೀಕರಣದ ವೇಳೆ ತಮನ್ನಾ ಹಾಗೂ ವಿಜಯ್ ಹೆಚ್ಚೇನು ಮಾತನಾಡಿರಲಿಲ್ಲವಂತೆ. ಆದರೆ ಸಿನಿಮಾ ಮುಗಿದ ಬಳಿಕ ಇಬ್ಬರೂ ಗೆಳೆಯರಾದರಂತೆ ಅದೂ ಒಂದು ಪಾರ್ಟಿಯಿಂದ.

ತಮನ್ನಾ ಹಾಗೂ ವಿಜಯ್

‘ಲಸ್ಟ್ ಸ್ಟೋರೀಸ್ 2’ ಮುಗಿದಾಗ ವ್ರಾಪ್ ಅಪ್ ಪಾರ್ಟಿಯೊಂದನ್ನು ವಿಜಯ್ ಆಯೋಜಿಸಿದ್ದರಂತೆ. ಅದಕ್ಕೆ ಬಂದಿದ್ದು ನಾಲ್ಕೇ ಮಂದಿ. ಅದರಲ್ಲಿ ತಮನ್ನಾ ಭಾಟಿಯಾ ಸಹ ಒಬ್ಬರು.

   ವ್ರಾಪ್ ಅಪ್ ಪಾರ್ಟಿ

ಅಂದು ತಮನ್ನಾ ಜೊತೆ ಕೆಲ ಸಮಯ ಮಾತನಾಡಿದ ವಿಜಯ್ ವರ್ಮಾ, ನಿಮ್ಮೊಂದಿಗೆ ಇನ್ನಷ್ಟು ಸಮಯ ಕಳೆಯಬೇಕು ಎಂದರಂತೆ. ಅದಾದ 25 ದಿನಗಳ ಬಳಿಕ ಇಬ್ಬರೂ ಒಟ್ಟಿಗೆ ಡೇಟ್​ಗೆ ಹೋದರಂತೆ.

ವಿಜಯ್, ತಮನ್ನಾ ಡೇಟ್

ಇಬ್ಬರ ನಡುವೆ ಪರಿಚಯ ಹೆಚ್ಚಾಗಿ, ಕೊನೆಗೆ ಅದೇ ಪ್ರೀತಿಗೆ ತಿರುಗಿದೆ. ಈಗ ತಮನ್ನಾ ಹಾಗೂ ವಿಜಯ್ ಹಲವು ಕಡೆ ಕೈ ಕೈ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ. ರೊಮ್ಯಾಂಟಿಕ್ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.

ಎಂಜಾಯ್ ಮಾಡುತ್ತಿದ್ದಾರೆ

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಶೀಘ್ರವೇ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಸಹ ಜೋರಾಗಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ತಮನ್ನಾ-ವಿಜಯ್ ಇಬ್ಬರೂ ಉತ್ತರಿಸಿಲ್ಲ.

      ಶೀಘ್ರವೇ ಮದುವೆ

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ