ಮತ್ತೆ ಒಂದಾಗುತ್ತಿದೆ ಸೋತ ಜೋಡಿ, ಈ ಬಾರಿಯಾದರೂ ಗೆಲ್ಲುತ್ತಾರಾ ಜಾನ್ಹವಿ ಕಪೂರ್
09 Jan 2023
Author : Manjunatha
ಜಾನ್ಹವಿ ಕಪೂರ್ ಕೆಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ, ಅವರ ಖಾತೆಯಲ್ಲಿ ಕೆಲವು ಫ್ಲಾಪ್ಗಳು ಸಹ ಇವೆ.
ಜಾನ್ಹವಿ ಕಪೂರ್
ಅದರಲ್ಲಿ ಪ್ರಮುಖವಾದುದು ವರುಣ್ ಧವನ್ ಜೊತೆಗೆ ನಟಿಸಿರುವ ‘ಬವಾಲ್’ ಸಿನಿಮಾ. ಆ ಸಿನಿಮಾ ನೇರ ಒಟಿಟಿಯಲ್ಲಿ ಬಿಡುಗಡೆ ಆಯ್ತು ಆದರೆ ಅಲ್ಲಿಯೂ ಸಹ ಜನ ಸಿನಿಮಾವನ್ನು ತಿರಸ್ಕರಿಸಿದರು.
‘ಬವಾಲ್’ ಸಿನಿಮಾ
‘ದಂಗಲ್’, ‘ಚಿಚೋರೆ’ ಅಂಥಹಾ ಸೂಪರ್ ಹಿಟ್ ಕೊಟ್ಟದ್ದ ನಿತೇಶ್ ತಿವಾರಿ ‘ಬವಾಲ್’ ಸಿನಿಮಾ ನಿರ್ದೇಶಿಸಿದ್ದರು. ಆದರೂ ಸಹ ಸಿನಿಮಾ ಜನರ ಮನಸ್ಸು ಗೆಲ್ಲಲಿಲ್ಲ.
ನಿರ್ದೇಶಕ ನಿತೇಶ್ ತಿವಾರಿ
ಇದೀಗ ಮತ್ತೆ ಜಾನ್ಹವಿ ಕಪೂರ್ ಹಾಗೂ ವರುಣ್ ಧವನ್ ಒಂದಾಗುತ್ತಿದ್ದಾರೆ. ಗಂಭೀರ ಕತೆಯುಳ್ಳ ‘ಬವಾಲ್’ ಸಿನಿಮಾ ಮಾಡಿ ಸೋತಿದ್ದ ಈ ಜೊಡಿ ಈಗ ಕಾಮಿಡಿ ಸಿನಿಮಾ ಮಾಡುತ್ತಿದ್ದಾರೆ.
ಕಾಮಿಡಿ ಸಿನಿಮಾ
ವರುಣ್ ಧವನ್ ಹಾಗೂ ಜಾನ್ಹವಿ ಕಪೂರ್ ಹೊಸ ಕಾಮಿಡಿ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಸಿನಿಮಾ ನಿರ್ದೇಶನ ಮಾಡಲಿರುವುದು ಡೇವಿಡ್ ಧವನ್.
ವರುಣ್-ಜಾನ್ಹವಿ
ಜಾನ್ಹವಿ ಕಪೂರ್ ಪ್ರಸ್ತುತ ತೆಲುಗಿನ ‘ದೇವರ’, ಹಿಂದಿಯ ‘ಮಿಸ್ಟರ್ ಆಂಡ್ ಮಿಸಸ್ ಮಹಿ’, ‘ಉಲ್ಜಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
ವರುಣ್ ಧವನ್ ಪ್ರಸ್ತುತ ತಮ್ಮ 18ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ನಟಿಸಿದ್ದು ಅದು ಬಿಡುಗಡೆ ಆಗಬೇಕಿದೆ.
ಚಿತ್ರೀಕರಣದಲ್ಲಿ ಬ್ಯುಸಿ
ಜಾನ್ಹವಿ ಕಪೂರ್ ‘ದೇವರ’ ಜೊತೆಗೆ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
ತೆಲುಗು ಸಿನಿಮಾ
ಕತ್ರಿನಾ ಕೈಫ್ಗೆ ಜನವರಿಯಲ್ಲಿ ಕ್ರಿಸ್ಮಸ್ ಸಂಭ್ರಮ: ಅದು ಹೇಗೆ?
ಮತ್ತಷ್ಟು ನೋಡಿ