ಫಿಲಂಫೇರ್​ ವೇದಿಕೆ ಮೇಲೆ ಜಾನ್ಹವಿ ಕಪೂರ್ ಸಖತ್ ಡ್ಯಾನ್ಸ್, ಇಲ್ಲಿವೆ ನೋಡಿ ಕೆಲ ಚಿತ್ರಗಳು

30 Jan 2024

Author : Manjunatha

ಬಾಲಿವುಡ್​ನ ಜನಪ್ರಿಯ ಯುವನಟಿ ಜಾನ್ಹವಿ ಕಪೂರ್ ಇತ್ತೀಚೆಗೆ ನಡೆದ ಫಿಲಂಫೇರ್ ಅವಾರ್ಡ್ ಕಾರ್ಯಕ್ರಮ ಅಟೆಂಡ್ ಮಾಡಿದ್ದರು.

ಯುವನಟಿ ಜಾನ್ಹವಿ 

ಫಿಲಂಫೇರ್ ವೇದಿಕೆ ಮೇಲೆ ವಿಶೇಷ ನೃತ್ಯ ಪ್ರದರ್ಶನವನ್ನು ಸಹ ಜಾನ್ಹವಿ ಕಪೂರ್ ನೀಡಿದ್ದಾರೆ. ಜಾನ್ಹವಿಯ ನೃತ್ಯದ ವಿಡಿಯೋ ತುಣುಕುಗಳು ವೈರಲ್ ಆಗಿವೆ.

ಜಾನ್ಹವಿ ಕಪೂರ್

ಜಾನ್ಹವಿ, ಬಾಲಿವುಡ್​ನ ಕೆಲವು ಐಕಾನಿಕ್ ನಟಿಯರ ಐಕಾನಿಕ್ ಹಾಡುಗಳನ್ನು ಆರಿಸಿ ಅದಕ್ಕೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಆ ಮೂಲಕ ಬಾಲಿವುಡ್​ನ ಐಕಾನಿಕ್ ನಟಿಯರಿಗೆ ತಮ್ಮ ಗೌರವ ಸಲ್ಲಿಸಿದ್ದಾರೆ.

ಐಕಾನಿಕ್ ಹಾಡುಗಳು

ಜಾನ್ಹವಿ ಒಳ್ಳೆಯ ನಟಿಯಾಗಿರುವ ಜೊತೆಗೆ ಒಳ್ಳೆಯ ಡ್ಯಾನ್ಸರ್ ಸಹ, ಸಿನಿಮಾಗಳಲ್ಲಿ ಹಲವು ಒಳ್ಳೆಯ ಹಾಡುಗಳಿಗೆ ಜಾನ್ಹವಿ ನರ್ತಿಸಿದ್ದಾರೆ.

ಒಳ್ಳೆಯ ಡ್ಯಾನ್ಸರ್ ಸಹ

ಜಾನ್ಹವಿ ಕಪೂರ್ ತಾಯಿ ಶ್ರೀದೇವಿಯೂ ಸಹ ಜನಪ್ರಿಯ ನಟಿಯಾಗಿದ್ದು, ಅವರ ಹಾಡುಗಳಿಗೆ ಒಮ್ಮೆ ಜಾನ್ಹವಿ ಕಪೂರ್ ಡ್ಯಾನ್ಸ್ ಮಾಡಿದ್ದರು.

ಜಾನ್ಹವಿ ತಾಯಿ ಶ್ರೀದೇವಿ

ಜಾನ್ಹವಿ ಕಪೂರ್ ಇದೀಗ ದಕ್ಷಿಣ ಭಾರತ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ.

ದಕ್ಷಿಣ ಭಾರತ ಚಿತ್ರರಂಗ

ಜಾನ್ಹವಿ ಕಪೂರ್ ತಮಿಳು ಸಿನಿಮಾ ಒಂದನ್ನು ಸಹ ಒಪ್ಪಿಕೊಂಡಿದ್ದು, ಆ ಸಿನಿಮಾಕ್ಕೆ ಸ್ಟಾರ್ ನಟ ಸೂರ್ಯ ನಾಯಕ. ಈ ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದೆ.

ಸೂರ್ಯ ನಾಯಕ

ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್ ಸಹ ಈಗ ನಟಿಯಾಗಿದ್ದಾರೆ. ‘ಆರ್ಚೀಸ್’ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದಾರೆ.

ಸಹೋದರಿ ಖುಷಿ ಕಪೂರ್

ಜಾನ್ಹವಿ ಕಪೂರ್ ಕೆಲವು ಬಾಲಿವುಡ್​ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಒಟ್ಟಾರೆ ಜಾನ್ಹವಿ ಕಪೂರ್ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ.

ಬಾಲಿವುಡ್​ ಸಿನಿಮಾ

ಸಿಗರೇಟು ಸೇದಬೇಡಿ ಎಂದಿದ್ದ ಆ ಪುಟ್ಟ ಬಾಲಕಿ ಈಗ ಹೀಗಾಗಿದ್ದಾಳೆ ನೋಡಿ