ತೆಲುಗು ಬಳಿಕ ತಮಿಳಿಗೆ ಜಾನ್ಹವಿ ಕಪೂರ್, ಸ್ಟಾರ್ ನಟನೊಟ್ಟಿಗೆ ಸಿನಿಮಾ

28 Jan 2024

Author : Manjunatha

ಬಾಲಿವುಡ್​ನ ಟಾಪ್ ಯುವನಟಿ ಜಾನ್ಹವಿ ಕಪೂರ್, ಇದೀಗ ತೆಲುಗಿಗೆ ಎಂಟ್ರಿ ನೀಡಿದ್ದಾರೆ.

ನಟಿ ಜಾನ್ಹವಿ ಕಪೂರ್

ಬಾಲಿವುಡ್​ನ ಜನಪ್ರಿಯ ಯುವನಟಿ ಜಾನ್ಹವಿ ಕಪೂರ್, ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ನೀಡಿದ್ದಾರೆ.

ತೆಲುಗಿಗೆ ಎಂಟ್ರಿ ನೀಡಿದ್ದಾರೆ

‘ದೇವರ’ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿಯೂ ಜಾನ್ಹವಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

2ನೇ ತೆಲುಗು ಸಿನಿಮಾ

ಇದರ ನಡುವೆ ತಮಿಳು ಚಿತ್ರರಂಗಕ್ಕೂ ಸಹ ನಟಿ ಜಾನ್ಹವಿ ಕಪೂರ್ ಎಂಟ್ರಿ ನೀಡಿದ್ದಾರೆ. ಸ್ಟಾರ್ ನಟರೊಟ್ಟಿಗೆ ಸಿನಿಮಾದಲ್ಲಿ ನಟಿಸಲಿದ್ದಾರೆ.

ತಮಿಳಿಗೆ ಜಾನ್ಹವಿ ಎಂಟ್ರಿ

ತಮಿಳು ಸ್ಟಾರ್ ನಟ ಸೂರ್ಯ ನಟಿಸಲಿರುವ ‘ಕರ್ಣ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಇದು ದೊಡ್ಡ ಬಜೆಟ್​ನ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

‘ಕರ್ಣ’ ಸಿನಿಮಾ ನಾಯಕಿ

‘ಕರ್ಣ’ ಸಿನಿಮಾವು ಮಹಾಭರಾತದ ಕರ್ಣನ ಪಾತ್ರದ ಮೇಲೆ ಆಧರಿತವಾಗಿರಲಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ.

ಮಹಾಭರಾತ ಆಧರಿತ

ಸೂರ್ಯ-ಜಾನ್ಹವಿ ನಟಿಸಲಿರುವ ಈ ಸಿನಿಮಾವನ್ನು ರಾಕೇಶ್ ಓಂಪ್ರಕಾಶ್ ನಿರ್ದೇಶನ ಮಾಡಲಿದ್ದು, ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ.

ರಾಕೇಶ್ ಓಂಪ್ರಕಾಶ್

ಜಾನ್ಹವಿ ಕಪೂರ್ ಹಿಂದಿಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗು-ತಮಿಳಿನಿಂದಲೂ ಆಫರ್​ಗಳನ್ನು ಪಡೆಯುತ್ತಿದ್ದಾರೆ.

ದಕ್ಷಿಣ ಭಾರತದ ಆಫರ್

ಜಾನ್ಹವಿಯ ತಾಯಿ ಶ್ರಿದೇವಿ, ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಜಾನ್ಹವಿ ಬಾಲಿವುಡ್​ನಲ್ಲಿ ಹೆಸರು ಮಾಡಿ ದಕ್ಷಿಣಕ್ಕೆ ಬರುತ್ತಿದ್ದಾರೆ.

ಬಾಲಿವುಡ್​ಗೆ ಪದಾರ್ಪಣೆ

ತೂಗು ಮಂಚದಲ್ಲಿ ಕೂತು ಮೇಘಶಾಮನ ನಿರೀಕ್ಷೆಯಲ್ಲಿ ಶ್ರೀಲೀಲಾ