ಆ ಸಿನಿಮಾದ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ಬಹಳ ಹಿಂಸೆಯಾಗಿತ್ತು: ಜಾನ್ಹವಿ ಕಪೂರ್

29 May 2024

Author : Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಹು ಬೇಡಿಕೆಯ ಯುವ ನಟಿ. ಪ್ರತಿಭೆ ಜೊತೆಗೆ ಗ್ಲಾಮರ್ ಸಹ ಹೊಂದಿದ್ದಾರೆ ಜಾನ್ಹವಿ.

ನಟಿ ಜಾನ್ಹವಿ ಕಪೂರ್

ಬಾಲಿವುಡ್​ನಲ್ಲಿ ಮಾತ್ರವೇ ಅಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಮಿಂಚಲು ಜಾನ್ಹವಿ ರೆಡಿಯಾಗಿದ್ದಾರೆ.

     ದಕ್ಷಿಣ ಭಾರತದಲ್ಲಿ

ಗ್ಲಾಮರಸ್ ನಟಿ ಜಾನ್ಹವಿ ಕಪೂರ್ ಕೆಲವು ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಆ ದೃಶ್ಯಗಳಲ್ಲಿ ನಟಿಸುವಾಗಿನ ಅನುಭವ ಹಂಚಿಕೊಂಡಿದ್ದಾರೆ.

ಗ್ಲಾಮರಸ್ ನಟಿ ಜಾನ್ಹವಿ 

ಈಗ ಬಿಡುಗಡೆ ಆಗುತ್ತಿರುವ ಜಾನ್ಹವಿಯ ‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದ ರೊಮ್ಯಾಂಟಿಕ್ ದೃಶ್ಯದ ಬಗ್ಗೆ ಜಾನ್ಹವಿ ಮಾತನಾಡಿದ್ದಾರೆ.

ಮಿಸ್ಟರ್ n ಮಿಸಸ್ ಮಹಿ

‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ನನಗೆ ಬಹಳ ಹಿಂಸೆಯಾಗಿತ್ತು ಎಂದಿದ್ದಾರೆ ಜಾನ್ಹವಿ.

ರೊಮ್ಯಾಂಟಿಕ್ ದೃಶ್ಯ

ಸುಮಾರು 20 ಗಂಟೆಯ ಶೂಟ್​ ಅಂದು ಮಾಡಿದ್ದೆವು, ಅದಾದ ಬಳಿಕ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಂತೆ ಹೇಳಿದರು. ನಾನು ಬಹಳ ಸುಸ್ತಾಗಿಬಿಟ್ಟಿದ್ದೆ ಎಂದಿದ್ದಾರೆ ಜಾನ್ಹವಿ.

     20 ಗಂಟೆಯ ಶೂಟ್

ರಾಜ್​ಕುಮಾರ್ ಸಹ ಬಹಳ ಸುಸ್ತಾಗಿದ್ದರು, ಇಬ್ಬರಿಗೂ ಅದೇ ದಿನ ಹೊಟ್ಟೆ ಕೆಟ್ಟಿತ್ತು, ಆದರೂ ನಾವು ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಬೇಕಿತ್ತು, ಮುತ್ತು ಕೊಡಬೇಕಿತ್ತು ಎಂದಿದ್ದಾರೆ.

ಇಬ್ಬರೂ ಸುಸ್ತಾಗಿಬಿಟ್ಟಿದ್ದೆವು

ರಾಜ್​ಕುಮಾರ್ ರಾವ್ ಮತ್ತು ನಾನು ಇಬ್ಬರೂ ಒಳಗಿನಿಂದ ಸಾಯುವಂತಾಗಿದ್ದೆವು, ಅಂಥಹಾ ಸಮಯದಲ್ಲಿ ಆ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣ ನಡೆಯಿತು ಎಂದಿದ್ದಾರೆ.

ಮುತ್ತು ಕೊಡುವ ದೃಶ್ಯ

ರಾಜ್​ಕುಮಾರ್ ರಾವ್ ಹಾಗೂ ಜಾನ್ಹವಿ ನಟಿಸಿರುವ ಮಿಸ್ಟರ್ ಆಂಡ್ ಮಿಸಸ್ ಮಹಿ ಸಿನಿಮಾ ಮೇ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಮೇ 31ರಂದು ಬಿಡುಗಡೆ

ಅಲ್ಲು ಅರ್ಜುನ್ ಕೈಗೆ ಧರಿಸಿರುವ ಗಡಿಯಾರದ ಬೆಲೆ ಕೆಲವು ಲಕ್ಷ ರೂಪಾಯಿಗಳು