‘ಸ್ತ್ರೀ 2’ ಭರ್ಜರಿ ಯಶಸ್ಸು, ಹಾರರ್ ಸಿನಿಮಾ ಸಹಿ ಮಾಡಿದ ಜಾನ್ಹವಿ

06 SEP 2024

 Manjunatha

ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್ ನಟನೆಯ ‘ಸ್ತ್ರೀ 2’ ಭಾರಿ ದೊಡ್ಡ ಹಿಟ್ ಆಗಿದೆ. ‘ಅನಿಮಲ್’ ದಾಖಲೆ ಮುರಿದಿದೆ.

‘ಸ್ತ್ರೀ 2’ ಭಾರಿ ದೊಡ್ಡ ಹಿಟ್

ಹಾರರ್ ಕಾಮಿಡಿ ಸಿನಿಮಾ ‘ಸ್ತ್ರೀ 2’ ಭಾರಿ ಹಿಟ್ ಆಗುತ್ತಿದ್ದಂತೆ ಇದೀಗ ಒಮ್ಮೆಲೆ ಬಾಲಿವುಡ್​ನ ನಟಿಯರು, ನಟರು ಹಾರರ್​ ಸಿನಿಮಾದತ್ತ ಆಸಕ್ತಿ ಪ್ರದರ್ಶಿಸುತ್ತಿದ್ದಾರೆ.

ಹಾರರ್​ ಸಿನಿಮಾದತ್ತ ಆಸಕ್ತಿ

ಈ ವರೆಗೆ ಒಂದೂ ದೊಡ್ಡ ಹಿಟ್ ಸಿನಿಮಾ ಕೊಡದಿರುವ ಜಾನ್ಹವಿ ಕಪೂರ್ ಸಹ ಹಾರರ್ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

   ಹಿಟ್  ಕೊಡದ ಜಾನ್ಹವಿ

ಜಾನ್ಹವಿ ಕಪೂರ್ ಹೊಸ ಹಾರರ್ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದು, ಶೀಘ್ರವೇ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಲಿದೆಯಂತೆ.

   ಹೊಸ ಹಾರರ್ ಸಿನಿಮಾ

ಜಾನ್ಹವಿ ಕಪೂರ್​ ಈ ಹಿಂದೆ ‘ರೂಹಿ’ ಹೆಸರಿನ ಹಾರರ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿಯೂ ರಾಜ್​ಕುಮಾರ್ ರಾವ್ ನಾಯಕ.

  ‘ರೂಹಿ’ ಹಾರರ್ ಸಿನಿಮಾ

2021 ರಲ್ಲಿ ಬಿಡುಗಡೆ ಆಗಿದ್ದ ‘ರೂಹಿ’ ಸಿನಿಮಾ ದೊಡ್ಡ ಯಶಸ್ಸು ಗಳಿಸಿರಲಿಲ್ಲ. ಸಿನಿಮಾ ಫ್ಲಾಪ್ ಎನಿಸಿಕೊಂಡಿತ್ತು.

   ಸಿನಿಮಾ ಫ್ಲಾಪ್ ಆಗಿತ್ತು

ಈಗ ಮತ್ತೆ ಹಾರರ್ ಸಿನಿಮಾದತ್ತ ವಾಲಿರುವ ಜಾನ್ಹವಿ ಕಪೂರ್ ಮತ್ತೊಮ್ಮೆ ಭೂತದ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ.

 ಭೂತದ ಪಾತ್ರದಲ್ಲಿ ಜಾನು

ಅವಕಾಶ ಕಡಿಮೆಯಾದರೂ ಮಲೈಕಾ ಅರೋರಾ ಆದಾಯ ಕಡಿಮೆಯಾಗಿಲ್ಲ