ಅವಕಾಶ ಕಡಿಮೆಯಾದರೂ ಮಲೈಕಾ ಅರೋರಾ ಆದಾಯ ಕಡಿಮೆಯಾಗಿಲ್ಲ
06 SEP 2024
Manjunatha
ಮಲೈಕಾ ಅರೋರಾ, ಬಾಲಿವುಡ್ನ ಗ್ಲಾಮರಸ್ ನಟಿ, ವಯಸ್ಸು 50 ದಾಟಿದ್ದರೂ ಈಗಲೂ ಫಿಟ್ ಆಗಿದ್ದಾರೆ.
ಗ್ಲಾಮರಸ್ ನಟಿ ಮಲೈಕಾ
ಮಲೈಕಾಗೆ ಸಿನಿಮಾ ಅವಕಾಶಗಳು ಬಹಳ ಕಡಿಮೆಯಾಗಿವೆ. ವರ್ಷಕ್ಕೆ ಒಂದು ಸಿನಿಮಾ ದೊರೆತರೆ ಹೆಚ್ಚು, ಅದೂ ನಾಯಕಿಯಾಗಿ ಅಲ್ಲ.
ಸಿನಿಮಾ ಅವಕಾಶ ಕಡಿಮೆ
ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸಹ ಐಶಾರಾಮಿ ಜೀವನವನ್ನೇ ಮಲೈಕಾ ನಡೆಸುತ್ತಿದ್ದಾರೆ. ಫಾರಿನ್ ಟ್ರಿಪ್ಗಳಂತೂ ಲೆಕ್ಕಕ್ಕೆ ಇಲ್ಲ.
ಐಶಾರಾಮಿ ಜೀವನ
ಅಸಲಿಗೆ ಮಲೈಕಾ ಅರೋರಾ, ಅರ್ಬಾಜ್ ಖಾನ್ರಿಂದ ವಿಚ್ಛೇದನ ಪಡೆದ ಬಳಿಕ ಅವರಿಂದ ಉತ್ತಮ ಮೊತ್ತವನ್ನೇ ಜೀವನಾಂಶ ಪಡೆಯುತ್ತಿದ್ದಾರೆ ಮಗನ ಆರೈಕೆಗೆ.
ಉತ್ತಮ ಜೀವನಾಂಶ
ಇದರ ಜೊತೆಗೆ ಮಲೈಕಾ ಕೆಲ ರಿಯಾಲಿಟಿ ಶೋಗಳ ಜಡ್ಜ್ ಆಗಿದ್ದಾರೆ. ಶೋನ ಪ್ರತಿ ಎಪಿಸೋಡ್ಗೆ ಐದರಿಂದ ಆರು ಲಕ್ಷ ಚಾರ್ಜ್ ಮಾಡುತ್ತಾರೆ.
ರಿಯಾಲಿಟಿ ಶೋಗಳ ಜಡ್ಜ್
ಇವುಗಳ ಹೊರತಾಗಿ ಮಲೈಕಾ ಅರೋರಾ ಬಹಳ ಮುಂಚೆ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದು, ತಿಂಗಳ ಬಾಡಿಗೆ ಸುಮಾರು 50 ಲಕ್ಷ ಬರುತ್ತದೆಯಂತೆ.
ರಿಯಲ್ ಎಸ್ಟೇಟ್ ಹೂಡಿಕೆ
ಮಲೈಕಾ ಅರೋರಾ ಕೆಲವು ಫ್ಯಾಷನ್ ಬ್ರ್ಯಾಂಡ್ಗಳ ರಾಯಭಾರಿ ಆಗಿದ್ದು, ಜಾಹೀರಾತು ಹಾಗೂ ಮಾಡೆಲಿಂಗ್ನಿಂದಲೂ ಸಂಪಾದಿಸುತ್ತಾರೆ.
ಜಾಹೀರಾತು ಹಣ
ತಮನ್ನಾ ಭಾಟಿಯಾಗೆ ಬಾಲಿವುಡ್ ನಲ್ಲಿ ಹೆಚ್ಚಾಯ್ತು ಬೇಡಿಕೆ, ಆದರೆ ನಾಯಕಿಯಾಗಿ ಅಲ್ಲ!
ಇದನ್ನೂ ನೋಡಿ