ತಮನ್ನಾ ಭಾಟಿಯಾಗೆ ಬಾಲಿವುಡ್​ನಲ್ಲಿ ಹೆಚ್ಚಾಯ್ತು ಬೇಡಿಕೆ, ಆದರೆ ನಾಯಕಿಯಾಗಿ ಅಲ್ಲ!

04 SEP 2024

 Manjunatha

ತಮನ್ನಾ ಭಾಟಿಯಾ ದಕ್ಷಿಣ ಭಾರತದಲ್ಲಿ ಖ್ಯಾತ ನಾಯಕಿ, ಹಲವು ವರ್ಷಗಳಿಂದಲೂ ತಮಿಳು, ತೆಲುಗಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ನಟಿ ತಮನ್ನಾ ಭಾಟಿಯಾ

ತಮಿಳು, ತೆಲುಗು ಮಾತ್ರವೇ ಅಲ್ಲದೆ ಹಿಂದಿಯಲ್ಲಿಯೂ ಸಹ ಕೆಲ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    ನಾಯಕಿಯಾಗಿ ನಟನೆ

ಆದರೆ ಹಿಂದಿಯಲ್ಲಿ ನಟಿಸಿದ್ದರೂ ಸಹ ಬೇಡಿಕೆಯ ನಟಿ ಎನಿಸಿಕೊಂಡಿರಲಿಲ್ಲ ತಮನ್ನಾ, ಆದರೆ ಈಗ ಬಾಲಿವುಡ್​ನಲ್ಲಿ ತಮನ್ನಾಗೆ ಬೇಡಿಕೆ ಬಂದಿದೆ.

  ಬಾಲಿವುಡ್​ನಲ್ಲಿ ಬೇಡಿಕೆ

ಬಾಲಿವುಡ್​ನಲ್ಲಿ ಐಟಂ ಹಾಡುಗಳಿಗೆ ತಮನ್ನಾಗೆ ಹಠಾತ್ತನೆ ಬೇಡಿಕೆ ಏರಿದೆ. ‘ಸ್ತ್ರೀ 2’ ಸಿನಿಮಾದ ತಮನ್ನಾರ ಹಾಡು ಸಖತ್ ಹಿಟ್ ಆಗಿದೆ.

   ‘ಸ್ತ್ರೀ 2’ ಸಿನಿಮಾ ಹಾಡು 

‘ಸ್ತ್ರೀ 2’ ಸಿನಿಮಾದಲ್ಲಿ ತಮನ್ನಾ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಆ ಹಾಡು ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ.

   ತಮನ್ನಾ ಐಟಂ ಹಾಡು

‘ಸ್ತ್ರೀ 2’ ಸಿನಿಮಾದ ಒಂದು ಹಾಡಿಗೆ ತಮನ್ನಾ 1 ಕೋಟಿ ಸಂಭಾವನೆ ಪಡೆದಿದ್ದರಂತೆ. ಇನ್ನು ಮುಂದೆ ಸಂಭಾವನೆ ಇನ್ನಷ್ಟು ಏರಿಕೆ ಆಗಲಿದೆ.

     1 ಕೋಟಿ ಸಂಭಾವನೆ

ಅಂದಹಾಗೆ ತಮನ್ನಾ ಈಗಲೂ ಕೆಲ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಕೈಯಲ್ಲಿ ಕೆಲ ತೆಲುಗು, ಹಿಂದಿ ಸಿನಿಮಾಗಳಿವೆ.

   ಈಗಲೂ ನಾಯಕಿಯೇ

ಅನನ್ಯಾ ಪಾಂಡೆ ಧರಿಸಿರುವ ಈ ಕೇಸರಿ ಮಿನಿ ಡ್ರೆಸ್ ನ ಬೆಲೆ ಕೆಲ ಲಕ್ಷಗಳು