ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಮಾಡುತ್ತಿರುವ ಜಾನ್ಹವಿ ಕಪೂರ್ ಇದೀಗ ರಾಮ್ ಚರಣ್​ ಎದುರು ನಾಯಕಿಯಾಗಿ ನಟಿಸಲಿದ್ದಾರೆ.

08 Feb 2024

Author : Manjunatha

ಬಾಲಿವುಡ್ ನಟಿ ಜಾನ್ಹವಿ ಕಪೂರ್, ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

‘ದೇವರ’ ಸಿನಿಮಾ

ಜಾನ್ಹವಿ ನಟನೆಯ ಮೊದಲ ದಕ್ಷಿಣ ಭಾರತ ಸಿನಿಮಾ ಬಿಡುಗಡೆಗೆ ಮುನ್ನವೇ ದಕ್ಷಿಣದಲ್ಲಿ ಒಂದರ ಮೇಲೊಂದು ಅವಕಾಶಗಳ ಬಾಚಿಕೊಳ್ಳುತ್ತಿದ್ದಾರೆ.

ದಕ್ಷಿಣ ಭಾರತ ಸಿನಿಮಾ

‘ದೇವರ’ ಸಿನಿಮಾದ ಶೂಟಿಂಗ್ ಮುಗಿಯುವ ಮೊದಲೇ ತೆಲುಗಿನಿಂದ ಎರಡು ಹಾಗೂ ತಮಿಳಿನಿಂದ ಒಂದು ಅವಕಾಶ ಜಾನ್ಹವಿಗಾಗಿ ಬಂದಿದೆ.

ತೆಲುಗು, ತಮಿಳು ಅವಕಾಶ

ತಮಿಳಿನಲ್ಲಿ ಸ್ಟಾರ್ ನಟ ಸೂರ್ಯ ನಟನೆಯ ಹೊಸ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ.

ಸೂರ್ಯ ಜೊತೆ ಸಿನಿಮಾ

‘ಆರ್​ಆರ್​ಆರ್’ ಸಿನಿಮಾದ ಸ್ಟಾರ್ ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.

ರಾಮ್ ಚರಣ್ ಜೊತೆಗೆ

ರಾಮ್ ಚರಣ್ ನಟಿಸಲಿರುವ 16ನೇ ಸಿನಿಮಾಕ್ಕೆ ಜಾನ್ಹವಿ ಕಪೂರ್ ನಾಯಕಿ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಲಿದ್ದಾರೆ.

ಜಾನ್ಹವಿ ಕಪೂರ್ ನಾಯಕಿ

ರಾಮ್ ಚರಣ್, ಜಾನ್ಹವಿ ಕಪೂರ್ ಹಾಗೂ ಶಿವಣ್ಣ ನಟಿಸಲಿರುವ ಈ ಬಿಗ್ ಬಜೆಟ್ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಲಿದ್ದಾರೆ.

ಶಿವಣ್ಣ ಸಹ ಇದ್ದಾರೆ

ಜಾನ್ಹವಿ ಕಪೂರ್, ಅಕ್ಕಿನೇನಿ ಕುಟುಂಬದ ಯುವ ನಟ ಅಖಿಲ್ ಅಕ್ಕಿನೇನಿಯ ಹೊಸ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಲಿದ್ದಾರೆ.

ಅಖಿಲ್ ಅಕ್ಕಿನೇನಿ ಜೊತೆ

ಇದೆಲ್ಲದರ ನಡುವೆ ಬಾಲಿವುಡ್​ನಲ್ಲಿಯೂ ಜಾನ್ಹವಿ ಕಪೂರ್ ಸಖತ್ ಬ್ಯುಸಿಯಾಗಿದ್ದಾರೆ. ರಣ್​ಬೀರ್ ಕಪೂರ್, ಯಶ್ ನಟಿಸುತ್ತಿರುವ ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಲಿದ್ದಾರೆ.

ಸೀತೆ ಪಾತ್ರದಲ್ಲಿ ಜಾನ್ಹವಿ

ನೋರಾ ಫತೇಹಿ ಕೈಯಲ್ಲಿ ಹಿಡಿದಿರುವ ಈ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ಗೊತ್ತೆ?