ಬಾಲಿವುಡ್ ನಟಿ ನೋರಾ ಫತೇಹಿ ಕೈಯಲ್ಲಿ ಹಿಡಿದಿರುವ ಈ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ಗೊತ್ತೆ?

07 Feb 2024

Author : Manjunatha

ನಟಿ ನೋರಾ ಫತೇಹಿ ಇತ್ತೀಚೆಗಷ್ಟೆ ಗೆಳೆಯರೊಟ್ಟಿಗೆ ಸೇರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. 

ನೋರಾ ಹುಟ್ಟುಹಬ್ಬ 

ಹುಟ್ಟುಹಬ್ಬದಂದು ಕಪ್ಪು ಬಣ್ಣದ ಉಡುಗೆ ಧರಿಸಿ ಅದರ ಮೇಲೆ ದುಬಾರಿ ನೆಕ್​ಲೆಸ್ ತೊಟ್ಟಿದ್ದರು. ಜೊತೆಯಲ್ಲೊಂದು ಬ್ಯಾಗ್ ಇತ್ತು.

ಕಪ್ಪು ಬಣ್ಣದ ಉಡುಗೆ

ಕಪ್ಪು ಬಟ್ಟೆಗೆ ಹೊಂದುವಂತೆ ಹೊಳೆಯುತ್ತಿದ್ದ ಪುಟ್ಟ ಬ್ಯಾಗ್ ಒಂದನ್ನು ಹಿಡಿದು ನೋರಾ ಫತೇಹಿ ಫೊಟೊಶೂಟ್ ಮಾಡಿಸಿಕೊಂಡಿದ್ದರು.

ನೋರಾ ಫೊಟೊಶೂಟ್

ಐಶಾರಾಮಿ ಜೀವನ ನಡೆಸುವ ನಟಿ ನೋರಾ ಫತೇಹಿ ಕೈಯಲ್ಲಿ ಹಿಡಿದಿದ್ದ ಪುಟ್ಟ ಬ್ಯಾಗ್​ನ ಬೆಲೆ ಸಾವಿರಗಳಲ್ಲ ಬದಲಿಗೆ ಲಕ್ಷಗಳು.

ಬ್ಯಾಗ್​ನ ಬೆಲೆ ಎಷ್ಟು?

ನೋರಾ ಫತೇಹಿ ಕೈಯಲ್ಲಿರುವ ಪುಟ್ಟ ಬ್ಯಾಗಿನ ಬೆಲೆ ಬರೋಬ್ಬರಿ 3.65 ಲಕ್ಷ ರೂಪಾಯಿಗಳು. ಇಟಲಿಯ ಜನಪ್ರಿಯ ಬ್ರ್ಯಾಂಡ್​ನ ಬ್ಯಾಗ್ ಇದು.

3.65 ಲಕ್ಷ ರೂಪಾಯಿಗಳು

ನೋರಾ ಫತೇಹಿ ಕೈಯಲ್ಲಿರುವುದು ಐಶಾರಾಮಿ ಬ್ರ್ಯಾಂಡ್ ಬೆಲೆನ್ಷಿಯಾಗಾದ ಹರ್ಗ್ಲೋಸ್ ಕ್ರಿಸ್ಟಲ್ ಎಂಬಲಿಶ್ಡ್ ಮಿನಿ ಬ್ಯಾಗ್.

ಬೆಲೆನ್ಷಿಯಾಗಾ ಹರ್ಗ್ಲೋಸ್

ನೋರಾ ಫತೇಹಿ ಧರಿಸಿರುವ ಕಪ್ಪು ಬಣ್ಣದ ಆಂಕಲ್ ಲೆಂತ್ ಮ್ಯಾಕ್ಸಿ ಉಡುಪಿನ ಬೆಲೆ 2.15 ಲಕ್ಷ ರೂಪಾಯಿಗಳು.

ಉಡುಪಿನ ಬೆಲೆ ಎಷ್ಟು?

ನೋರಾ ಫತೇಹಿ ಬಾಲಿವುಡ್​ನ ಹಾಟ್ ನಟಿಯರಲ್ಲಿ ಪ್ರಮುಖರು. ಸದಾ ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಿರುತ್ತಾರೆ.

ಬಾಲಿವುಡ್​ನ ಹಾಟ್ ನಟಿ

ನೋರಾ ಫತೇಹಿ ಇತ್ತೀಚೆಗೆ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದ ವಿಶೇಷ ಹಾಡಿನಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾದಲ್ಲಿ

ಸಾಯಿ ಪಲ್ಲವಿ ಕೈತಪ್ಪಿದ ದೊಡ್ಡ ಸಿನಿಮಾ. ಯಾವ ನಟಿಯ ಕೈಸೇರಿತು?