ನಟಿ ಸಾಯಿ ಪಲ್ಲವಿ ಕೈಯಿಂದ ದೊಡ್ಡ ಸಿನಿಮಾ ಒಂದು ಮಿಸ್ ಆಗಿದೆ. ಆ ಸಿನಿಮಾ ಯಾರ ಕೈ ಸೇರಿದೆ?

07 Feb 2024

Author : Manjunatha

ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಜನಪ್ರಿಯ ಹಾಗೂ ಪ್ರತಿಭಾನ್ವಿತ ನಟಿಯರಲ್ಲಿ ಪ್ರಮುಖವಾದವರು.

ನಟಿ ಸಾಯಿ ಪಲ್ಲವಿ

ಸಹವರ್ತಿ ನಟಿಯರ ರೀತಿಯಲ್ಲಲ್ಲದೆ ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಪ್ರಬುದ್ಧತೆ ಮೆರೆಯುತ್ತಾ ಸಂದೇಶವುಳ್ಳ ಚಿತ್ರಗಳನ್ನಷ್ಟೆ ಆರಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಆಯ್ಕೆ ಭಿನ್ನ

ರಾಮಾಯಣ ಕತೆ ಆಧರಿಸಿದ ಸಾವಿರಾರು ಕೋಟಿ ಬಜೆಟ್​ನ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.

ಕೋಟಿ ಬಜೆಟ್​ನ ಸಿನಿಮಾ

ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ ನಟಿಸಲಿದ್ದಾ ಎಂಬ ಸುದ್ದಿ ಹರಿದಾಡುತ್ತಿತ್ತು.

ಯಶ್ ರಾವಣನ ಪಾತ್ರ

ಆದರೆ ಇದೀಗ ಬಂದಿರುವ ಸುದ್ದಿಯಂತೆ ಸಾಯಿ ಪಲ್ಲವಿಯಿಂದ ಅವಕಾಶ ಕೈತಪ್ಪಿದೆ. ಆ ಪಾತ್ರ ಬಾಲಿವುಡ್​ನ ಬೇರೆ ನಟಿಯ ಪಾಲಾಗಿದೆ.

ಅವಕಾಶ ಕೈತಪ್ಪಿದೆ

ಬಾಲಿವುಡ್​ನ ಜನಪ್ರಿಯ ನಟಿ ಜಾನ್ಹವಿ ಕಪೂರ್ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಟಿ ಜಾನ್ಹವಿ ಕಪೂರ್

ಸಾಯಿ ಪಲ್ಲವಿ ಅವರೇ ಅವಕಾಶವನ್ನು ತಿರಸ್ಕರಿಸಿದರಾ ಅಥವಾ ಚಿತ್ರತಂಡವೇ ಅವರನ್ನು ಪಾತ್ರದಿಂದ ಹೊರಗಿಟ್ಟಿಯಾ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.

ಅವಕಾಶ ತಿರಸ್ಕರಿಸಿದರಾ

ಮತ್ತೊಂದು ಸುದ್ದಿಯ ಪ್ರಕಾರ, ರಾವಣನ ಮಡದಿ ಮಂಡೋದರಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಮಂಡೋದರಿ ಪಾತ್ರ?

ಸಾಯಿ ಪಲ್ಲವಿ ಸದ್ಯಕ್ಕೆ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದು ಸಿನಿಮಾಕ್ಕೆ ಕಮಲ್ ಹಾಸನ್ ಕತೆ ಬರೆದಿದ್ದಾರೆ.

ಸದ್ಯಕ್ಕೆ ನಾಲ್ಕು ಸಿನಿಮಾ

ಮತ್ತೊಬ್ಬ ಟಾಲಿವುಡ್ ಸ್ಟಾರ್ ಸಿನಿಮಾದಲ್ಲಿ ಶ್ರೀಲೀಲಾ? ಯಾವುದು ಸಿನಿಮಾ?