ತೆಲುಗು ಚಿತ್ರರಂಗದ ಮತ್ತೊಬ್ಬ ಮತ್ತೊಬ್ಬ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾಗೆ ದೊರಕಿದೆ. ಆದರೆ ನಾಯಕಿಯಾಗಿ ಅಲ್ಲ!

06 Feb 2024

Author : Manjunatha

ಕನ್ನಡತಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಬಲು ಬೇಡಿಕೆಯ ನಟಿಯಾಗಿದ್ದಾರೆ. ಒಂದರಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕನ್ನಡತಿ ಶ್ರೀಲೀಲಾ

ರವಿತೇಜ, ಮಹೆಶ್ ಬಾಬು, ನಂದಮೂರಿ ಬಾಲಕೃಷ್ಣ, ಪವನ್ ಕಲ್ಯಾಣ್ ಸೇರಿದಂತೆ ತೆಲುಗಿನ ಕೆಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಶ್ರೀಲೀಲಾ ಈಗಾಗಲೇ ನಟಿಸಿದ್ದಾರೆ. 

ಸ್ಟಾರ್ ನಟರ ಸಿನಿಮಾ

ಇದೀಗ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಸಿನಿಮಾದಲ್ಲಿಯೂ ಶ್ರೀಲೀಲಾಗೆ ಪಾತ್ರವೊಂದು ಅರಸಿ ಬಂದಿದೆ.

ಮೆಗಾಸ್ಟಾರ್ ಚಿರಂಜೀವಿ

ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಆದರೆ ಅದು ನಾಯಕಿ ಪಾತ್ರ ಅಲ್ಲ ಎನ್ನಲಾಗುತ್ತಿದೆ.

‘ವಿಶ್ವಂಭರ’ ಸಿನಿಮಾ

‘ವಿಶ್ವಂಭರ’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಲಿದ್ದಾರೆ. ಹಾಗಿದ್ದರೆ ಶ್ರೀಲೀಲಾಗೆ ಯಾವ ಪಾತ್ರ ಎಂಬ ಅನುಮಾನ ಅಭಿಮಾನಿಗಳದ್ದು.

ತ್ರಿಷಾ ಕೃಷ್ಣನ್ ನಾಯಕಿ

ಅಂದಹಾಗೆ ‘ವಿಶ್ವಂಭರ’ ಸಿನಿಮಾದಲ್ಲಿ ಒಟ್ಟು ನಾಲ್ಕು ಮಂದಿ ನಾಯಕಿಯರು ಇರಲಿದ್ದಾರಂತೆ. ಅವರಲ್ಲಿ ಶ್ರೀಲೀಲಾ ಸಹ ಒಬ್ಬರು.

ನಾಲ್ಕು ನಾಯಕಿಯರು

ಶ್ರೀಲೀಲಾ ಕೆಲವು ದೃಶ್ಯಗಳು ಹಾಗೂ ಒಂದು ಮಹತ್ವವಾದ ಹಾಡೊಂದರಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಅತಿಥಿ ಪಾತ್ರದಲ್ಲಿ ಲೀಲಾ

ಶ್ರೀಲೀಲಾ ಪ್ರಸ್ತುತ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಉಸ್ತಾದ್ ಭಗತ್ ಸಿಂಗ್

ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿಯೂ ಸಹ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಕನ್ನಡದ ಯಾವ ಸಿನಿಮಾವನ್ನೂ ಶ್ರೀಲೀಲಾ ಪ್ರಸ್ತುತ ಒಪ್ಪಿಕೊಂಡಿಲ್ಲ.

ತಮಿಳಿನ ಸ್ಟಾರ್ ನಟ

ಬಾಲಿವುಡ್ ನಟಿ ಕೃತಿ ಸೆನನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ ರೂಪಾಯಿ ಗೊತ್ತೆ?