ಜಾನ್ಹವಿ ಕಪೂರ್​ಗೆ ಕೂಡಿ ಬಂತು ಕಂಕಣ ಭಾಗ್ಯ, ಶೀಘ್ರವೇ ಮದುವೆ?

05 Dec 2024

 Manjunatha

ಬಾಲಿವುಡ್​ನ ಬಲು ಬೇಡಿಕೆಯ ಯುವನಟಿ ಜಾನ್ಹವಿ ಕಪೂರ್, ಬಾಲಿವುಡ್ ಮಾತ್ರವಲ್ಲದೆ ದಕ್ಷಿಣದಲ್ಲೂ ನಟಿಸುತ್ತಿದ್ದಾರೆ ಈ ನಟಿ

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಪ್ರಸ್ತುತ ರಾಮ್ ಚರಣ್ ನಟನೆಯ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲ ಹಿಂದಿ ಸಿನಿಮಾ ಸಹ ಕೈಯಲ್ಲಿವೆ.

  ಹಲವು ಸಿನಿಮಾ ಕೈಯಲ್ಲಿ

ಬಾಲಿವುಡ್​ನಲ್ಲಿ ಬಹಳ ಬ್ಯುಸಿಯಾಗಿರುವ ಈ ಹೊತ್ತಿನಲ್ಲಿಯೇ ಜಾನ್ಹವಿ ಕಪೂರ್ ಮದುವೆ ಆಲೋಚನೆಯನ್ನು ಮಾಡಿದ್ದಾರಂತೆ.

     ಮದುವೆ ಆಲೋಚನೆ

ಜಾನ್ಹವಿ ಕಪೂರ್, ಉದ್ಯಮಿ ಶಿಖರ್ ಫಾರಿಯಾ ಜೊತೆ ಪ್ರೇಮದಲ್ಲಿರುವುದು ಗುಟ್ಟೇನು ಅಲ್ಲ. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ.

ಉದ್ಯಮಿ ಶಿಖರ್ ಫಾರಿಯಾ

ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ಒಟ್ಟೊಟ್ಟಿಗೆ ದೇವಾಲಯಗಳನ್ನು ಸುತ್ತಿದ್ದಾರೆ. ಒಟ್ಟಿಗೆ ಪ್ರವಾಸಕ್ಕೂ ಹೋಗಿ ಬಂದಿದ್ದಾರೆ.

  ಒಟ್ಟಿಗೆ ಸುತ್ತಾಡುತ್ತಿದ್ದಾರೆ

ಇದೀಗ ಈ ಇಬ್ಬರು ಮದುವೆಯಾಗುವ ನಿರ್ಣಯ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಈ ಇಬ್ಬರ ವಿವಾಹ ನಡೆಯಲಿದೆ ಎನ್ನಲಾಗಿದೆ.

ಏಪ್ರಿಲ್ ತಿಂಗಳಲ್ಲಿ ವಿವಾಹ

ಜಾನ್ಹವಿ ಕಪೂರ್ ಮುಂದಿನ ಎರಡು ಮೂರು ತಿಂಗಳ ವರೆಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆ ನಂತರ ಮದುವೆ ಆಗಲಿದ್ದಾರಂತೆ. ಮದುವೆ ಅಧಿಕೃತ ಸುದ್ದಿ ಹೊರಬೀಳಬೇಕಿದೆ.

     ಸಿನಿಮಾಗಳಲ್ಲಿ ಬ್ಯುಸಿ

ಶ್ರೀಲೀಲಾ ಕೈಯಲ್ಲಿರುವ ಸಿನಿಮಾಗಳು ಯಾವುವು ಗೊತ್ತೆ?