ಬಾಲಿವುಡ್ ನಟಿ ಜಾನ್ಹವಿ ಕಪೂರ್​ ಸಹೋದರಿ ಖುಷಿ ಕಪೂರ್ ಅನ್ನು ನೋಡಿದ್ದೀರಾ?

10 NOV 2023

ನಟಿ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ಪುತ್ರಿ ಜಾನ್ಹವಿ ಕಪೂರ್ ಬಾಲಿವುಡ್​ನಲ್ಲಿ ಮಿನುಗುತ್ತಿರುವ ನಟಿ.

ಜಾನ್ಹವಿ ಕಪೂರ್

ಜಾನ್ಹವಿ ಕಪೂರ್​ಗೆ ಒಬ್ಬ ಸಹೋದರಿಯೂ ಇದ್ದಾರೆ. ಅವರೇ ಖುಷಿ ಕಪೂರ್.

ಖುಷಿ ಕಪೂರ್

ಅಕ್ಕನಂತೆ ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿರುವ ಖುಷಿ ಕಪೂರ್ ಪ್ರಸ್ತುತ ಸಣ್ಣ ಮಟ್ಟದಲ್ಲಿ ಮಾಡೆಲಿಂಗ್ ಮಾಡುತ್ತಿದ್ದಾರೆ.

ಮಾಡೆಲಿಂಗ್ ಆಸಕ್ತಿ

ಅಕ್ಕನಷ್ಟು ಅದೃಷ್ಟವಂತೆಯಲ್ಲದ ಖುಷಿ ಕಪೂರ್​ಗೆ ಈವರೆಗೆ ದೊರೆತಿರುವುದು ಕೇವಲ ಒಂದೇ ಒಂದು ಸಿನಿಮಾ ಅವಕಾಶವಷ್ಟೆ.

ಒಂದು ಸಿನಿಮಾ

ಖುಷಿ ಕಪೂರ್ ಪ್ರಸ್ತುತ 'ದಿ ಆರ್ಚೀಸ್' ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಡಿಸೆಂಬರ್ 7ಕ್ಕೆ ಬಿಡುಗಡೆ ಆಗಲಿದೆ.

'ದಿ ಆರ್ಚೀಸ್'

ಖುಷಿ ಕಪೂರ್ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು ತಮ್ಮ ಹಾಟ್ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

ಖುಷಿ ಕಪೂರ್

ನಟಿ ಜಾನ್ಹವಿ ಕಪೂರ್, ಸಹೋದರಿ ಖುಷಿ ಕಪೂರ್ ಜೊತೆಗೆ ಹಬ್ಬ ಆಚರಿಸಿದ್ದು ಇಬ್ಬರೂ ಒಟ್ಟಿಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಹಬ್ಬ ಆಚರಣೆ

'ದಿ ಆರ್ಚೀಸ್' ಸಿನಿಮಾ ಬಿಡುಗಡೆ ಬಳಿಕ ಖುಷಿ ಕಪೂರ್​ಗೆ ಇನ್ನಷ್ಟು ಸಿನಿಮಾ ಅವಕಾಶಗಳು ಲಭಿಸುತ್ತವೆಯೇ ಕಾದು ನೋಡಬೇಕಿದೆ.

ಇನ್ನಷ್ಟು ಅವಕಾಶ

ಸಮಂತಾ ಧರಿಸಿರುವ ಆಭರಣಗಳ ಬೆಲೆ ಎಷ್ಟು ಲಕ್ಷ ಗೊತ್ತೆ?