ಬಾಯ್​ಫ್ರೆಂಡ್ ಕೈಹಿಡಿದು ಬಾಲಿವುಡ್ ನಟಿ ಜಾನ್ಹವಿ ಕಪೂರ್ ಸುತ್ತಾಟ

05 JUNE 2024

Author : Manjunatha

ಜಾನ್ಹವಿ ಕಪೂರ್ ನಟನೆಯ ‘ಮಿಸ್ಟರ್ ಆಂಡ್ ಮಿಸೆಸ್ ಮಹಿ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಪ್ರಚಾರ ಜೋರಾಗಿ ಮಾಡಿದ್ದಾರೆ ನಟಿ.

ಜಾನ್ಹವಿ ಕಪೂರ್ ಸಿನಿಮಾ

ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಸಿನಿಮಾಕ್ಕೆ ಸಾಧಾರಣ ಪ್ರತಿಕ್ರಿಯೆ ಅಷ್ಟೆ ಬಂದಿದೆ. ಜಾನ್ಹವಿಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

    ಸಾಧಾರಣ ಪ್ರತಿಕ್ರಿಯೆ

ಸಿನಿಮಾ ಬಿಡುಗಡೆ ಆಗುವವರೆಗೆ ಪ್ರಚಾರದಲ್ಲಿ ನಿರತರಾಗಿದ್ದ ಜಾನ್ಹವಿ, ಬಿಡುಗಡೆ ಆದ ಕೂಡಲೇ ಬಾಯ್​ಫ್ರೆಂಡ್ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ.

   ಪ್ರೇಮಿ ಜೊತೆ ಪ್ರವಾಸ

ಜಾನ್ಹವಿ ಕಪೂರ್ ತಮ್ಮ ಬಾಯ್​ಫ್ರೆಂಡ್ ಶಿಖರ್ ಪಾರಿಯಾ ಜೊತೆ ವಿದೇಶದಲ್ಲಿ ಕೈ-ಕೈ ಹಿಡಿದು ಸುತ್ತಾಡುತ್ತಿದ್ದಾರೆ.

ಶಿಖರ್ ಪಾರಿಯಾ ಜೊತೆ

ಕೆಲವು ಮೂಲಗಳ ಪ್ರಕಾರ, ಜಾನ್ಹವಿ ಹಾಗೂ ಶಿಖರ್, ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಹೋಗಿದ್ದು ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಅನಂತ್ ಅಂಬಾನಿರಾಧಿಕಾ

ಈಗ ಜಾನ್ಹವಿ ಅಪ್​ಲೋಡ್ ಮಾಡಿರುವ ಚಿತ್ರದಲ್ಲಿ ಜಾನ್ಹವಿ-ಶಿಖರ್ ಜೊತೆಗೆ ಇನ್ನೂ ಕೆಲವು ಗೆಳೆಯರಿದ್ದಾರೆ.

  ಗೆ:ಳೆಯರೊಟ್ಟಿಗೆ ಪಾರ್ಟಿ

ಜಾನ್ಹವಿ ಹಾಗೂ ಶಿಖರ್ ಪಾರಿಯಾ ಬಾಲ್ಯದಿಂದಲೂ ಗೆಳೆಯರು. ಈ ಇಬ್ಬರಿಗೂ ಒಮ್ಮೆ ಬ್ರೇಕಪ್ ಆಗಿತ್ತು. ಈಗ ಮತ್ತೆ ಜೊತೆಯಾಗಿದ್ದಾರೆ.

ಬಾಲ್ಯದಿಂದಲೂ ಗೆಳೆಯರು

ಜಾನ್ಹವಿ ಕಪೂರ್ ಹಾಗೂ ಶಿಖರ್ ಪಾರಿಯಾ ಪ್ರೀತಿಯನ್ನು ಮುಚ್ಚಿಟ್ಟಿಲ್ಲ, ಒಟ್ಟಿಗೆ ದೇವಸ್ಥಾನ, ಪ್ರವಾಸಗಳಿಗೆ ಸುತ್ತಾಡುತ್ತಿದ್ದಾರೆ.

     ಒಟ್ಟೊಟ್ಟಿಗೆ ಓಡಾಟ

ಶಿಖರ್ ಪಾರಿಯಾ ಜನಪ್ರಿಯ ಉದ್ಯಮಿಯ ಪುತ್ರನಾಗಿದ್ದು, ಸ್ವತಃ ಕೆಲವು ಉದ್ಯಮಗಳನ್ನು ಹೊಂದಿದ್ದಾರೆ.

    ನವೋದ್ಯಮಿ ಶಿಖರ್ 

ನಟಿ ಹೇಮಾಮಾಲಿನಿಗೆ ಗೆಲುವು, ಇಲ್ಲಿದೆ ಅವರ ರಾಜಕೀಯ ಪಯಣದ ಇಣುಕು ನೋಟ