ಜಾನ್ಹವಿ ಕಪೂರ್ ಪಕ್ಕದಲ್ಲಿರುವ ಈ ಬ್ಯಾಗಿನ ಬೆಲೆಗೆ ಒಂದು ಮನೆ ಕಟ್ಟಬಹುದೇನೋ

31 AUG 2024

 Manjunatha

ಬಾಲಿವುಡ್​ನ ಬಲು ಬೇಡಿಕೆಯ ಯುವನಟಿ ಜಾನ್ಹವಿ ಕಪೂರ್, ತನ್ನ ಗ್ಲಾಮರ್​ನಿಂದಲೇ ಅವರು ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

   ನಟಿ ಜಾನ್ಹವಿ ಕಪೂರ್

ಈವರೆಗೆ ಒಂದೂ ದೊಡ್ಡ ಹಿಟ್ ನೀಡದ ಜಾನ್ಹವಿ ಕಪೂರ್​ಗೆ ಅವಕಾಶಗಳು ಮಾತ್ರ ಒಂದರ ಹಿಂದೆ ಒಂದರಂತೆ ಬರುತ್ತಲೇ ಇವೆ.

   ಹಿಟ್ ನೀಡದ ಜಾನ್ಹವಿ

ಇದೀಗ ತೆಲುಗು ಚಿತ್ರರಂಗಕ್ಕೂ ಸಹ ಜಾನ್ಹವಿ ಕಪೂರ್ ಕಾಲಿಟ್ಟಿದ್ದಾರೆ. ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ಜಾನ್ಹವಿ ನಾಯಕಿ.

 ಜಾನ್ಹವಿ ತೆಲುಗು ಸಿನಿಮಾ 

ಬೇಡಿಕೆಯ ಯುವನಟಿಯಾಗಿರುವ ಜಾನ್ಹವಿ ಕಪೂರ್​ಗೆ ಫ್ಯಾಷನ್ ಬಗ್ಗೆ ಅತೀವ ಆಸಕ್ತಿ, ದುಬಾರಿ ಬಟ್ಟೆ, ವಸ್ತುಗಳನ್ನು ಮಾತ್ರವೇ ಆಕೆ ಬಳಸುತ್ತಾರೆ.

 ಫ್ಯಾಷನ್ ಪ್ರಿಯೆ ಜಾನ್ಹವಿ

ಈ ಚಿತ್ರದಲ್ಲಿ ಜಾನ್ಹವಿ ಕಪೂರ್ ಪಕ್ಕ ಇಡಲಾಗಿರುವ ಬ್ಯಾಗಿನ ಬೆಲೆ ಬರೋಬ್ಬರಿ 25.16 ಲಕ್ಷ ರೂಪಾಯಿಗಳು. ಇದು ಹೆರ್ಮೆಸ್ ಬಿರ್ಕಿನ್ ಕಂಪೆನಿಯ ಬ್ಯಾಗು.

 ಬ್ಯಾಗಿನ ಬೆಲೆ ಎಷ್ಟು ಲಕ್ಷ?

ಇಂಥಹಾ ಹಲವು ಅತ್ಯಂತ ದುಬಾರಿ ಬೆಲೆಯ ಬ್ಯಾಗುಗಳು ಜಾನ್ಹವಿ ಕಪೂರ್ ಬಳಿ ಇವೆ. ಇದಕ್ಕೂ ದುಬಾರಿಯಾದ ಬ್ಯಾಗುಗಳು ಸಹ ಇವೆ.

     ಹಲವು ಬ್ಯಾಗುಗಳಿವೆ

ಜಾನ್ಹವಿ ಕಪೂರ್ ಪ್ರಸ್ತುತ ಹಿಂದಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ದೇವರ’ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.

 ಜಾನ್ಹವಿಯ ಸಿನಿಮಾಗಳು

ನನಗೆ ಹಾರ್ದಿಕ್ ಪಾಂಡ್ಯಾ ಎಂದರೆ ಬಹಳ, ನನಗೆ ಆತನ ಮೇಲೆ ಕ್ರಶ್: ನಟಿ ಇಶಾ ರಾಜ್