ನಕಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ದೂರು ನೀಡಿದ ಜ್ಯೋತಿ ರೈ, ಇಲ್ಲಿವೆ ನಟಿಯ ಚಿತ್ರಗಳು

09 May 2024

Author : Manjunatha

ಕರ್ನಾಟಕ ಮೂಲದ ನಟಿ ಜ್ಯೋತಿ ರೈ, ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಇದೀಗ ತೆಲುಗು, ತಮಿಳು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

       ನಟಿ ಜ್ಯೋತಿ ರೈ

ನಟಿ ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ಕೆಲವು ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ವಿಡಿಯೋ, ಚಿತ್ರ ವೈರಲ್

‘ಎಡಿಟ್ ಬಾ ಅಭಿ’ ಎನ್ನುವ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಚಿತ್ರ ಹಂಚಿಕೊಳ್ಳಲಾಗಿದ್ದು ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತೇನೆ ಎಂದು ಬರೆದುಕೊಳ್ಳಲಾಗಿತ್ತು.

    ‘ಎಡಿಟ್ ಬಾ ಅಭಿ’

ಈ ಬಗ್ಗೆ ನಟಿ ಜ್ಯೋತಿ ರೈ ಸೈಬರ್ ಕ್ರೈಮ್ ಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸೈಬರ್ ಕ್ರೈಮ್ ಗೆ ದೂರು

ಕಿಡಿಗೇಡಿಗಳಿಂದ ಕೆಲವು ಸಂದೇಶಗಳನ್ನ ಸ್ವೀಕರಿಸಿ ನಾನು ಆಘಾತಕ್ಕೆ ಒಳಗಾಗಿದ್ದೇನೆ, ನನ್ನ ಹಾಗೂ ಕುಟುಂಬದ ಮಾನಹಾನಿಗೆ ಅವರು ಯತ್ನಿಸುತ್ತಿದ್ದಾರೆ ಎಂದಿದ್ದಾರೆ ಜ್ಯೋತಿ.

ಆಘಾತಕ್ಕೆ ಒಳಗಾಗಿದ್ದೇನೆ

ಈ ಬಗ್ಗೆ ದೂರು ನೀಡಿರುವ ನಟಿ ಜ್ಯೋತಿ, ವಿಡಿಯೋ, ಚಿತ್ರಗಳನ್ನು ಹಂಚಿಕೊಂಡಿದ್ದವರ ಐಡಿಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಪೊಲೀಸರಿಗೆ ನಟಿ ದೂರು

ಜ್ಯೋತಿ ರೈ ಕನ್ನಡದವರಾಗಿದ್ದು ಸದ್ಯ ತೆಲುಗಿನ ಕಿರುತೆರೆ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕಿರುತೆರೆ ವೆಬ್ ಸಿರೀಸ್

ಜ್ಯೋತಿ 20 ವರ್ಷದವರಾಗಿದ್ದಾರ ಅವರಿಗೆ ಪದ್ಮನಾಭ್ ಎಂಬುವವರ ಜೊತೆ ಮದುವೆ ಆಗಿದ್ದು ಇಬ್ಬರು ವಿಚ್ಚೇದನ ಪಡೆದುಕೊಂಡಿದ್ದಾರೆ. ಅವರಿಗೆ 11 ವರ್ಷದ ಮಗನಿದ್ದಾನೆ.

ಮದುವೆಯಾಗಿ ವಿಚ್ಛೇದನ

ಕೆಲ ತಿಂಗಳ ಹಿಂದೆ ಸೂಕು ಪೂರ್ವಜ್ ಎಂಬ ಟಾಲಿವುಡ್ ಯುವ ನಿರ್ದೇಶಕನ ಜೊತೆ ಮದುವೆ ಆಗಿದ್ದಾರೆ ಜ್ಯೋತಿ ರೈ.

ನಿರ್ದೇಶಕನೊಂದಿಗೆ ಮದುವೆ

ಒದ್ದೆ ಬಟ್ಟೆ ಧರಿಸಿ ಬಂದು ಮೆಟ್ ಗಾಲಾನಲ್ಲಿ ಬಿಸಿ ಏರಿಸಿದ ಡೋಜಾ ಕ್ಯಾಟ್