Pic credit - Instagram

Author: Rajesh Duggumane

ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಮಿಂಚಿದ ಕಾಜಲ್ ಕುಂದರ್ 

05 June 2026

ಮ್ಯಾಂಗೋ ಪಚ್ಚ

ಕಿಚ್ಚ ಸುದೀಪ್ ಅಳಿಯ ಸಂಜಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಬಂದಿದೆ.

ಕಾಜಲ್ ನಟನೆ

ಖ್ಯಾತ ನಟಿ ಕಾಜಲ್ ಕುಂದರ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅದ್ಭುತವಾದ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ.

ಮುದ್ದಾದ ಅಭಿನಯ 

ಚಿತ್ರದಲ್ಲಿ ಮುದ್ದಾದ ಅಭಿನಯ ಸಿನಿರಸರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.

ವಿಭಿನ್ನ ಪಾತ್ರ

ಮ್ಯಾಂಗೋ ಪಚ್ಚನ ಲವರ್ ಪಾತ್ರದಲ್ಲಿ ಕಾಜಲ್ ಕುಂದರ್ ನಟಿಸಿದ್ದಾರೆ ಅನ್ನೋದು ವಿಶೇಷ. 

ಕೆಮಿಸ್ಟ್ರಿ ವರ್ಕೌಟ್

ಸಂಜಿತ್ ಸಂಜೀವ್ ಮತ್ತು ಕಾಜಲ್ ಕುಂದರ್ ನಡುವಿನ ಪರದೆಯ ಮೇಲಿನ ರೊಮ್ಯಾಂಟಿಕ್ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ.

ಪ್ರೇಕ್ಷಕರ ಮೆಚ್ಚುಗೆ

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಕಾಜಲ್ ಅವರ ಅದ್ಭುತ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸಾಲು ಅವಕಾಶ

ಈ ಚಿತ್ರದ ಯಶಸ್ಸಿನ ನಂತರ ಕಾಜಲ್ ಕುಂದರ್ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಹೊಸ ಅವಕಾಶಗಳು ಸಿಗೋ ಸಾಧ್ಯತೆ ಇದೆ.