ಸಿನಿಮಾ ತ್ಯಜಿಸುತ್ತಿದ್ದಾರೆಯೇ ಕಂಗನಾ ರನೌತ್, ಮುಂದಿನ ಪಯಣ ಎಲ್ಲಿಗೆ?

ಸಿನಿಮಾ ತ್ಯಜಿಸುತ್ತಿದ್ದಾರೆಯೇ ಕಂಗನಾ ರನೌತ್, ಮುಂದಿನ ಪಯಣ ಎಲ್ಲಿಗೆ?

08 DEC 2023

TV9 Kannada Logo For Webstory First Slide

Author : Manjunatha

ನಟಿ ಕಂಗನಾ ರನೌತ್ ಬಾಲಿವುಡ್​ನ ಅತ್ಯಂತ ಪ್ರತಿಭಾವಂತ ನಟಿ, ಅವರಿಗೆ ಧಕ್ಕಿರುವ ಮೂರು ರಾಷ್ಟ್ರಪ್ರಶಸ್ತಿಗಳೇ ಇದಕ್ಕೆ ಸಾಕ್ಷಿ.

ಪ್ರತಿಭಾವಂತ ನಟಿ

ಆದರೆ ಇತ್ತೀಚೆಗೆ ಕಂಗನಾಗೆ ದೊಡ್ಡ ಗೆಲುವಿರಲಿ, ಸಾಧಾರಣ ಎನ್ನಬಹುದಾದ ಗೆಲುವು ಸಹ ದೊರೆತಿಲ್ಲ.

ಗೆಲುವು ಮರೀಚಿಕೆ

ಬಹುತೇಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ನಟಿಸುತ್ತಿರುವ ಕಂಗನಾನ ಸಾಲು-ಸಾಲು ಸಿನಿಮಾಗಳು ಸೋತಿವೆ.

ಸಾಲು-ಸಾಲು ಸೋಲು

ಕೆಲ ಸಿನಿಮಾಗಳಿಗೆ ಸ್ವತಃ ನಿರ್ಮಾಪಕಿಯೂ ಆಗಿರುವ ಕಂಗನಾಗೆ ಸಿನಿಮಾ ಸೋಲಿನಿಂದ ದೊಡ್ಡ ನಷ್ಟವೇ ಉಂಟಾಗಿದೆ.

ಭಾರಿ ನಷ್ಟ

ಇದೇ ಕಾರಣಕ್ಕೆ ಕಂಗನಾ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರು ಜೀವನದ ಮತ್ತೊಂದು ಪಯಣಕ್ಕೆ ಅಣಿಯಾಗಿದ್ದಾರೆ.

ಸಿನಿಮಾದಿಂದ ಅಂತರ

ಕಂಗನಾ ರನೌತ್, ರಾಜಕೀಯ ರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿಯ ಪ್ರಬಲ ಬೆಂಬಲಿಗರಾಗಿರುವ ಕಂಗನಾ, ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಗೆ ಕಂಗನಾ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಚುನಾವಣೆಗೆ ಕಂಗನಾ ರನೌತ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

ಚುನಾವಣೆಗೆ ಕಂಗನಾ

ಹಿಮಾಚಲ ಪ್ರದೇಶದ ಕ್ಷೇತ್ರವೊಂದರಿಂದ ಕಂಗನಾ ಲೋಕಸಭೆ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆಯಲ್ಲಿದ್ದಾರಂತೆ.

ಕ್ಷೇತ್ರ ಯಾವುದು?

ಆಸ್ಪತ್ರೆ ಸೇರಿದ್ದ ಡ್ರೋನ್ ಪ್ರತಾಪ್, ಬಿಗ್​ಬಾಸ್ ಮನೆಗೆ ರೀ ಎಂಟ್ರಿ