Pic credit - Instagram

Author: Rajesh Duggumane

‘ಪೆದ್ದಿ’ ವಿವಾದ; ನಿರ್ದೇಶಕನ ಬೆಂಬಲಕ್ಕೆ ನಿಂತ ಕಂಗನಾ ರಣಾವತ್ 

09 June 2026

ಕಂಗನಾ ಮಾತು

ಚಿತ್ರರಂಗದಲ್ಲಿ ನಾಯಕಿಯರ ಅತಿಯಾದ ಗ್ಲಾಮರೈಸ್ ಮಾಡುವ ವಿಚಾರದ ಬಗ್ಗೆ ನಟಿ ಕಂಗನಾ ರನೌತ್ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೆದ್ದಿ ವಿವಾದ

'ಪೆದ್ದಿ' ಸಿನಿಮಾದಲ್ಲಿ ಜಾನ್ವಿ ಕಪೂರ್ ಪಾತ್ರವನ್ನು ಹೈಪರ್‌ಸೆಕ್ಷುಅಲೈಸ್ ಮಾಡಿದ ಹಿನ್ನೆಲೆಯಲ್ಲಿ ಈ ಗ್ಲಾಮರ್ ಚರ್ಚೆ ದೇಶಾದ್ಯಂತ ತೀವ್ರಗೊಂಡಿತ್ತು.

ಚಿತ್ರದ ಮೇಕಿಂಗ್

ಯಾವುದೇ ನಿರ್ದೇಶಕರು ಮಹಿಳೆಯನ್ನು ಕೇವಲ ಭೋಗದ ವಸ್ತುವಾಗಿ ತೋರಿಸುವ ಉದ್ದೇಶದಿಂದ ಚಿತ್ರೀಕರಣ ಆರಂಭಿಸುವುದಿಲ್ಲ ಎಂದಿದ್ದಾರೆ ಕಂಗನಾ.

ಪುರುಷ ದೃಷ್ಟಿಕೋನ

ಹಲವು ಬಾರಿ ಪುರುಷರ ಕೋನದಿಂದ ಕಥೆಗಳನ್ನು ಬರೆಯುವಾಗ ಇಂತಹ ತಪ್ಪುಗಳು ಅರಿಯದೆಯೇ ನಡೆದುಹೋಗುತ್ತವೆ ಎಂದು ಸಂಸದೆ ಹೇಳಿದ್ದಾರೆ.

ಮಹಿಳಾ ಧ್ವನಿ

ಶೂಟಿಂಗ್ ಸೆಟ್‌ಗಳಲ್ಲಿ ತಮಗಾಗುವ ಮುಜುಗರ ಹಾಗೂ ಉಡುಪುಗಳ ಬಗ್ಗೆ ನಾಯಕಿಯರು ಧೈರ್ಯದಿಂದ ತಮ್ಮ ಧ್ವನಿ ಎತ್ತಬೇಕೆಂದು ಸಲಹೆ ನೀಡಿದ್ದಾರೆ.

ಮುಕ್ತ ಸಂವಹನ

ನಟಿಯರು ತಮಗೆ ಸರಿ ಅನಿಸದ ವಿಷಯಗಳನ್ನು ನಿರ್ದೇಶಕರಿಗೆ ತಿಳಿಸಿದಾಗ ಅವರು ಖಂಡಿತವಾಗಿಯೂ ಬದಲಾವಣೆಗೆ ಒಪ್ಪಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ದೃಶ್ಯ ಕತ್ತರಿ

ಸದ್ಯ ಜಾನ್ವಿ ಪಾತ್ರದ ವಿವಾದದ ಬೆನ್ನಲ್ಲೇ ನಿರ್ದೇಶಕ ಬುಚ್ಚಿ ಬಾಬು ಪ್ರೇಕ್ಷಕರಲ್ಲಿ ಕ್ಷಮೆ ಕೇಳಿ ದೃಶ್ಯಗಳನ್ನು ಕತ್ತರಿಸಿದ್ದಾರೆ.