ಯಶ್ ಸಿನಿಮಾ ನಿರಾಕರಿಸಿ ಪ್ರಭಾಸ್ ಸಿನಿಮಾಕ್ಕೆ ಯೆಸ್ ಎಂದರೇ ಕರೀನಾ

184 SEP 2024

 Manjunatha

ಬಾಲಿವುಡ್ ಬೆಡಗಿ ಕರೀನಾ ಕಪೂರ್, ಈ ವರೆಗೆ ಯಾವುದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿಲ್ಲ.

   ಬೆಡಗಿ ಕರೀನಾ ಕಪೂರ್

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್​ರ ಸಹೋದರಿ ಪಾತ್ರಕ್ಕೆ ಕರೀನಾ ಕಪೂರ್ ಅನ್ನು ಕೇಳಲಾಗಿತ್ತು, ಆದರೆ ಅವರು ನಟಿಸಲಿಲ್ಲ.

ಯಶ್ ನಟನೆಯ ‘ಟಾಕ್ಸಿಕ್’

ಇದೀಗ ಪ್ರಭಾಸ್ ನಟನೆಯ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂಬ ಮಾತುಗಳು ತುಸು ಜೋರಾಗಿಯೇ ಕೇಳಿ ಬರುತ್ತಿವೆ.

   ಪ್ರಭಾಸ್ ಜೊತೆ ಕರೀನಾ

ಪ್ರಭಾಸ್ ನಟಿಸಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿರುವ ‘ಸ್ಪಿರಿಟ್’ ಸಿನಿಮಾದಲ್ಲಿ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

    ‘ಸ್ಪಿರಿಟ್’ ಸಿನಿಮಾದಲ್ಲಿ

‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್​ರದ್ದು ಎರಡು ಶೇಡ್​ನ ಪಾತ್ರವಿದ್ದು, ಒಂದು ಪಾತ್ರಕ್ಕೆ ಕರೀನಾ ಕಪೂರ್ ನಾಯಕಿಯಂತೆ.

ಪ್ರಭಾಸ್​ಗೆ ಕರೀನಾ ನಾಯಕಿ

ಸಂದೀಪ್ ರೆಡ್ಡಿ ವಂಗಾ ಈಗಾಗಲೇ ಕರೀನಾಗೆ ಕತೆ ಹೇಳಿದ್ದು ಕರೀನಾ ಕಪೂರ್ ಸಹ ಪ್ರಭಾಸ್ ಜೊತೆ ನಟಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ.

  ಕತೆ ಹೇಳಿರುವ ಸಂದೀಪ್

ಈ ಹಿಂದೆ ಪ್ರಭಾಸ್ ನಟಿಸಿದ್ದ ‘ಆದಿಪುರುಷ್’ ಸಿನಿಮಾದಲ್ಲಿ ಕರೀನಾ ಪತಿ ಸೈಫ್ ಅಲಿ ಖಾನ್ ಜೊತೆಗೆ ಪ್ರಭಾಸ್ ನಟಿಸಿದ್ದರು.

 ಆದಿಪುರುಷ್ ಸಿನಿಮಾನಲ್ಲಿ

‘ದೇವರ’ ಸಿನಿಮಾಕ್ಕೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಪಡೆದ ಸಂಭಾವನೆ ಎಷ್ಟು?