ಬಾಲಿವುಡ್​ಗೆ ಅದ್ಧೂರಿಯಾಗಿ ಕಾಲಿಟ್ಟ ದಕ್ಷಿಣದ ಚೆಲುವೆ ಕೀರ್ತಿ ಸುರೇಶ್, ನಾಯಕ ಯಾರು?

14 Jan 2024

Author : Manjunatha

ಕೀರ್ತಿ ಸುರೇಶ್, ದಕ್ಷಿಣ ಭಾರತದ ಜನಪ್ರಿಯ ಹಾಗೂ ಪ್ರತಿಭಾವಂತ ನಟಿ.  ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಪ್ರತಿಭಾವಂತ ನಟಿ

ಮಲಯಾಳಂ ಮೂಲದ ಕೀರ್ತಿ ಸುರೇಶ್, ತೆಲುಗಿನ ‘ಮಹಾನಟಿ’ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ನಟನೆಗೆ ರಾಷ್ಟ್ರಪ್ರಶಸ್ತಿ

ಗ್ಲಾಮರಸ್ ಪಾತ್ರಗಳಿಂದ, ಮರ ಸುತ್ತುವ ಪಾತ್ರಗಳಿಂದ ದೂರವೇ ಉಳಿದಿರುವ ಕೀರ್ತಿ, ತಮ್ಮ ಪಾತ್ರಕ್ಕೆ ಸ್ಕೋಪ್ ಇದ್ದರಷ್ಟೆ ನಟಿಸುತ್ತಾರೆ.

ಸ್ಕೋಪ್ ಇದ್ದರಷ್ಟೆ ನಟಿನೆ

ದಕ್ಷಿಣದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್ ಇದೀಗ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ ಅದೂ ಅದ್ಧೂರಿಯಾಗಿ.

ಬಾಲಿವುಡ್​ಗೆ ಪದಾರ್ಪಣೆ

ಕೀರ್ತಿ ಸುರೇಶ್ ನಟಿಸುತ್ತಿರುವ ಮೊದಲ ಬಾಲಿವುಡ್ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ.

ಸಿನಿಮಾದ ಮುಹೂರ್ತ

ಬಾಲಿವುಡ್​ನ ಸ್ಟಾರ್ ನಟ ವರುಣ್ ಧವನ್ ನಾಯಕರಾಗಿ ನಟಿಸುತ್ತಿರುವ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿ.

ನಾಯಕ ಯಾರು?

ಸಿನಿಮಾವನ್ನು ಕಲೀಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ತಮಿಳಿನ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದರು.

ಕಲೀಸ್ ನಿರ್ದೇಶನ

ಈ ಸಿನಿಮಾ ಅಟ್ಲಿ ನಿರ್ದೇಶಿಸಿರುವ ‘ತೇರಿ’ಯ ರೀಮೇಕ್ ಎನ್ನಲಾಗುತ್ತಿದೆ. ವಿಶೇಷವೆಂದರೆ ಈ ಸಿನಿಮಾಕ್ಕೆ ಅಟ್ಲಿ ಸಹ ಬಂಡವಾಳ ಹೂಡಿದ್ದಾರೆ.

‘ತೇರಿ’ಯ ರೀಮೇಕ್

2024ರ ಹೊಸ ನ್ಯಾಷನಲ್ ಕ್ರಶ್ ಎನ್ನಲಾಗುತ್ತಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?