ಪ್ರಭಾಸ್ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಾಯಕಿ, ಸಿನಿಮಾ ಯಾವುದು? ನಟಿ ಯಾರು?

31 Mar 2024

Author : Manjunatha

ಪ್ರಭಾಸ್ ಪ್ರಸ್ತುತ ಕಲ್ಕಿ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದಾರೆ. ಇದರ ನಡುವೆ ಅವರ ಮುಂದಿನ ಎರಡು ಸಿನಿಮಾಗಳ ಕುರಿತು ಚರ್ಚೆ ಆರಂಭವಾಗಿದೆ.

ಸಿನಿಮಾ ಬಗ್ಗೆ ಚರ್ಚೆ

ಅದರಲ್ಲಿಯೂ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ ಒಟ್ಟಿಗೆ ಮಾಡಲಿರುವ ‘ಸ್ಪಿರಿಟ್’ ಸಿನಿಮಾ ಈಗಾಗಲೇ ಪ್ರಭಾಸ್ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಸಂದೀಪ್ ರೆಡ್ಡಿ ವಂಗಾ

ಪ್ರಭಾಸ್ ನಟಿಸಿ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿರುವ ‘ಸ್ಪಿರಿಟ್’ ಸಿನಿಮಾಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ಸ್ಪಿರಿಟ್’ ಸಿನಿಮಾ ನಾಯಕಿ

ಈ ಸಿನಿಮಾದಲ್ಲಿ ನಾಯಕನಷ್ಟೆ ಪ್ರಧಾನವಾದ ಪಾತ್ರ ನಾಯಕಿಗೂ ಇದ್ದು, ನಾಯಕಿ ಸುಂದರವಾಗಿರುವ ಜೊತೆಗೆ ನಟನೆಯೂ ಚೆನ್ನಾಗಿ ಬರಬೇಕೆಂಬ ಕಾರಣಕ್ಕೆ ಕೀರ್ತಿ ಸುರೇಶ್ ಅವರನ್ನು ಆರಿಸಲಾಗಿದೆ.

ಪ್ರತಿಭಾವಂತ ನಟಿ

ಕೀರ್ತಿ ಸುರೇಶ್ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ. ‘ಮಹಾನಟಿ’ ಸಿನಿಮಾದಲ್ಲಿನ ನಟನೆಗಾಗಿ ಕೀರ್ತಿ ಸುರೇಶ್​ಗೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ.

ನಟನೆಗೆ ರಾಷ್ಟ್ರಪ್ರಶಸ್ತಿ

ಕೀರ್ತಿ ಸುರೇಶ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್​ಗೂ ಪ್ರವೇಶ ಮಾಡಿರುವ ಕೀರ್ತಿ ಸುರೇಶ್ ಅಲ್ಲಿಯೂ ಬ್ಯುಸಿಯಾಗಲಿದ್ದಾರೆ.

ಬಾಲಿವುಡ್​ಗೆ ಕೀರ್ತಿ 

ಹೊಂಬಾಳೆ ನಿರ್ಮಾಣ ಮಾಡಿರುವ ‘ರಘು ತಾತ’ ಹೆಸರಿನ ಸಿನಿಮಾನಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಈ ಸಿನಿಮಾ ತಮಿಳರ ಹಿಂದಿ ವಿರೋಧಿ ಪ್ರತಿಭಟನೆ ಕುರಿತಾದದ್ದಾಗಿದೆ.

ಹೊಂಬಾಳೆ ನಿರ್ಮಾಣ

ಕೀರ್ತಿ ಸುರೇಶ್ ತಮಿಳಿನಲ್ಲಿ ‘ರಿವಾಲ್ವರ್ ರೀಟಾ’, ‘ಕಣ್ಣೀವೇಡಿ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ ಎರಡು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಹಲವು ಸಿನಿಮಾಗಳು

ಇನ್ನು ಇತ್ತೀಚೆಗಷ್ಟೆ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವ ಕೀರ್ತಿ ಸುರೇಶ್, ವರುಣ್ ಧವನ್ ನಾಯಕನಾಗಿರುವ ‘ಬೇಬಿ ಜಾನ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ವರುಣ್ ಧವನ್ ಜೊತೆ

ಮೆಗಾಸ್ಟಾರ್ ಚಿರಂಜೀವಿ ಜೊತೆ ಸಿನಿಮಾಕ್ಕೆ ದುಬಾರಿ ಸಂಭಾವನೆ ಪಡೆದ ನಟಿ ತ್ರಿಷಾ ಕೃಷ್ಣನ್