ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಲಿರುವ ಸಿನಿಮಾಕ್ಕೆ ತ್ರಿಷಾ ಕೃಷ್ಣನ್ ದೊಡ್ಡ ಸಂಭಾವನೆ ಪಡೆಯಲಿದ್ದಾರೆ.

30 Mar 2024

Author : Manjunatha

20ಕ್ಕೂ ಹೆಚ್ಚು ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ನಟಿ ತ್ರಿಷಾ ಕೃಷ್ಣನ್ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ತ್ರಿಷಾ ಕೃಷ್ಣನ್

ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್’ ಸಿನಿಮಾದ ಮಹತ್ವದ ಪಾತ್ರದಲ್ಲಿ ತ್ರಿಷಾ ನಟಿಸಿದ್ದರು. ಅದಾದ ಬಳಿಕ ವಿಜಯ್ ಜೊತೆ ಲಿಯೋನಲ್ಲಿಯೂ ನಟಿಸಿದರು.

‘ಪೊನ್ನಿಯನ್ ಸೆಲ್ವನ್’

20 ವರ್ಷಕ್ಕೂ ಹೆಚ್ಚು ವರ್ಷಗಳಾದರೂ ಈಗಲೂ ಸಹ ಸ್ಟಾರ್ ನಟರೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ತ್ರಿಷಾ. ಅಂತೆಯೇ ಅವರ ಸಂಭಾವನೆ ಸಹ ಇತ್ತೀಚೆಗೆ ಏರಿಕೆ ಕಂಡಿದೆ.

ಸಂಭಾವನೆ ಏರಿಕೆ ಆಗಿದೆ

ಇದೀಗ ತ್ರಿಷಾ, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿಮಾದಲ್ಲಿ ನಾಯಕಿಯ ಪಾತ್ರ ಅವರದ್ದು.

‘ವಿಶ್ವಂಭರ’ ಸಿನಿಮಾ

‘ವಿಶ್ವಂಭರ’ ಸಿನಿಮಾಕ್ಕೆ ದೊಡ್ಡ ಮೊತ್ತದ ಸಂಭಾವನೆಯನ್ನು ತ್ರಿಷಾ ಪಡೆಯುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಈ ಸಿನಿಮಾಕ್ಕೆ ತ್ರಿಷಾ 10 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ.

10 ಕೋಟಿ ಸಂಭಾವನೆ

‘ವಿಶ್ವಂಭರ’ ಸಿನಿಮಾ ಫಿಕ್ಷನ್ ಕತೆ ಹೊಂದಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ತ್ರಿಷಾ ರಾಣಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ರಾಣಿಯ ಪಾತ್ರದಲ್ಲಿ ತ್ರಿಷಾ

ತ್ರಿಷಾ ಕೃಷ್ಣನ್ ಕೈಯಲ್ಲಿ ಪ್ರಸ್ತುತ ಐದು ಸಿನಿಮಾಗಳಿವೆ. ಅದೂ ಐದೂ ಸಿನಿಮಾಗಳು ದೊಡ್ಡ ಬಜೆಟ್​ನ ಸಿನಿಮಾಗಳಾಗಿವೆ. ಕೆಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ತ್ರಿಷಾ ನಟಿಸುತ್ತಿದ್ದಾರೆ.

ಐದು ಸಿನಿಮಾಗಳಿವೆ

ಕಮಲ್ ಹಾಸನ್ ನಟಿಸುತ್ತಿರುವ ‘ಥಗ್ ಲೈಫ್’ ಸಿನಿಮಾದಲ್ಲಿಯೂ ತ್ರಿಷಾ ಕೃಷ್ಣನ್ ನಾಯಕಿ. ಈ ಸಿನಿಮಾದಲ್ಲಿ ಕಮಲ್ ಜೊತೆ ಇನ್ನೂ ಕೆಲವು ಜನಪ್ರಿಯ ನಟರಿದ್ದಾರೆ.

ಕಮಲ್ ಹಾಸನ್ ಸಿನಿಮಾ

ಅಜಿತ್ ನಟನೆಯ ‘ವಿದಾ ಮಯುರ್ಚಿ’, ಕಮಲ್ ನಟನೆಯ ‘ಥಗ್ ಲೈಫ್’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’, ಮೋಹನ್​ಲಾಲ್ ನಟನೆಯ ‘ರಾಮ್’ ಸಿನಿಮಾದಲ್ಲಿ ನಟಿಸಿದ್ದಾರೆ.

ಕೈಲಿರುವ ಸಿನಿಮಾಗಳು

ಆ ಬಿಗ್​ ಬಜೆಟ್ ಸಿನಿಮಾ ಅವಕಾಶ ಕಳೆದುಕೊಂಡ ಶ್ರೀಲೀಲಾ, ಒಳ್ಳೆಯದಾಯ್ತು ಎಂದ ಅಭಿಮಾನಿಗಳು