ನಟಿ ಶ್ರೀಲೀಲಾ, ಬಿಗ್​ಬಜೆಟ್ ಸಿನಿಮಾ ಒಂದರ ಅವಕಾಶ ಕಳೆದುಕೊಂಡಿದ್ದಾರೆ. ಒಳ್ಳೆಯದೇ ಆಯಿತು ಎಂದಿದ್ದಾರೆ ಅಭಿಮಾನಿಗಳು. 

29 Mar 2024

Author : Manjunatha

ಕರ್ನಾಟಕದ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಖತ್ ಬ್ಯುಸಿಯಾಗಿದ್ದಾರೆ

ಮಹೇಶ್  ಬಾಬು, ರವಿತೇಜ, ನಂದಮೂರಿ ಬಾಲಕೃಷ್ಣ, ಪವನ್ ಕಲ್ಯಾಣ್, ರಾಮ್ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ.

ಸ್ಟಾರ್ ನಟರ ಆಯ್ಕೆ

ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಅದೆಷ್ಟು ಬ್ಯುಸಿಯಾಗಿದ್ದಾರೆಂದರೆ ಡೇಟ್ಸ್ ಕೊರತೆಯಿಂದ ಹಲವು ಒಳ್ಳೆಯ ಅವಕಾಶಗಳನ್ನು ಕೈಬಿಡಬೇಕಾಗಿದೆ.

ಶ್ರೀಲೀಲಾಗೆ ಡೇಟ್ಸ್ ಕೊರತೆ

ನಿನ್ನೆಯಷ್ಟೆ ಬಿಡುಗಡೆ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ‘ಟಿಲ್ಲು ಸ್ಕೇರ್’ ಸಿನಿಮಾದ ನಾಯಕಿ ಆಫರ್ ಶ್ರೀಲೀಲಾಗೆ ಬಂದಿತ್ತಂತೆ.

‘ಟಿಲ್ಲು ಸ್ಕೇರ್’ ಸಿನಿಮಾ

ಆದರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ಶ್ರೀಲೀಲಾ ಆ ಸಿನಿಮಾ ಅವಕಾಶವನ್ನು ಒಪ್ಪಿಕೊಂಡಿಲ್ಲ. ಅದು ಅನುಪಮಾ ಪರಮೇಶ್ವರನ್ ಪಾಲಾಗಿದೆ.

ಅನುಪಮಾ ಪರಮೇಶ್ವರ

‘ಟಿಲ್ಲು ಸ್ಕೇರ್’ ಸಿನಿಮಾದಲ್ಲಿ ಅನುಪಮಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಚುಂಬನ ದೃಶ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಸಖತ್ ಹಾಟ್ ಅನುಪಮಾ

‘ಟಿಲ್ಲು ಸ್ಕೇರ್’ ಸಿನಿಮಾದ ನಾಯಕಿ ಪಾತ್ರ ಸಖತ್ ಬೋಲ್ಡ್ ಆಗಿದ್ದು, ಆ ಪಾತ್ರ ಶ್ರೀಲೀಲಾಗೆ ಒಪ್ಪಿಗೆ ಆಗುತ್ತಿರಲಿಲ್ಲ, ಶ್ರೀಲೀಲಾ ಆ ಸಿನಿಮಾ ಒಪ್ಪಿಕೊಳ್ಳದೇ ಇರುವುದು ಒಳ್ಳೆಯದೇ ಆಗಿದೆ ಎಂದಿದ್ದಾರೆ ಫ್ಯಾನ್ಸ್.

ಅಭಿಮಾನಿಗಳಿಗೆ ಖುಷಿ

ಶ್ರೀಲೀಲಾ ಪ್ರಸ್ತುತ ಸಿನಿಮಾಗಳಿಂದ ಸಣ್ಣ ವಿರಾಮ ಪಡೆದಿದ್ದಾರೆ ಎನ್ನಲಾಗುತ್ತಿದೆ. ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಶ್ರೀಲೀಲಾ ಪರೀಕ್ಷೆಯ ತಯಾರಿ ನಡೆಸುತ್ತಿದ್ದಾರಂತೆ.

ಪರೀಕ್ಷೆಯ ತಯಾರಿ

ಈಗಾಗಲೇ ಶ್ರೀಲೀಲಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಪರೀಕ್ಷೆ ಮುಗಿಸಿ ಬಂದ ಬಳಿಕ ಮತ್ತೆ ಶ್ರೀಲೀಲಾ ಸಖತ್ ಬ್ಯುಸಿಯಾಗಲಿದ್ದಾರೆ.

ಹಲವು ಸಿನಿಮಾಗಳಿವೆ

ಅಂಥಹಾ ಸಿನಿಮಾ ನೋಡುವುದಿಲ್ಲ, ನಟಿಸಲು ಅವಕಾಶ ಸಿಕ್ಕರೆ ಬಿಡುವುದಿಲ್ಲ ಎಂದ ನಟಿ