‘ಕೆಜಿಎಫ್’ ಚೆಲುವೆ ಶ್ರೀನಿಧಿ ಶೆಟ್ಟಿ ಕೈಯಲ್ಲಿರುವ ಸಿನಿಮಾಗಳು ಯಾವುವು ಗೊತ್ತೆ?

17 NOV 2023

‘ಕೆಜಿಎಫ್’ ಸಿನಿಮಾ ಪ್ರಶಾಂತ್ ನೀಲ್, ಹೊಂಬಾಳೆ ಫಿಲಮ್ಸ್ ಹಾಗೂ ನಟ ಯಶ್​ಗೆ ದೊಡ್ಡ ಜನಪ್ರಿಯತೆ ಧಕ್ಕಿಸಿಕೊಟ್ಟಿತು.

‘ಕೆಜಿಎಫ್’

ಆದರೆ ಅದೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿಗೆ ‘ಕೆಜಿಎಫ್’ ಸಿನಿಮಾದಿಂದ ದೊಡ್ಡ ಬೂಸ್ಟ್ ಸಿಗಲಿಲ್ಲವೆಂದೇ ಹೇಳಬೇಕು.

ಬೂಸ್ಟ್ ಸಿಗಲಿಲ್ಲ

ಹಾಗೆಂದು ಶ್ರೀನಿಧಿ ಶೆಟ್ಟಿಗೆ ಅವಕಾಶಗಳೇ ಇಲ್ಲವೆಂದೇನೂ ಇಲ್ಲ. ಈಗ ನಿಧಾನಕ್ಕೆ ಒಂದೊಂದಾಗಿ ದೊಡ್ಡ ನಟರ ಸಿನಿಮಾಗಳು ಸಿಗುತ್ತಿವೆ.

ದೊಡ್ಡ ನಟರ ಸಿನಿಮಾ

ಶ್ರೀನಿಧಿ ಕೈಯಲ್ಲಿ ಪ್ರಸ್ತುತ ಎರಡು ಉತ್ತಮ ಸಿನಿಮಾಗಳಿದ್ದು, ಎರಡೂ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

 ಎರಡು ಉತ್ತಮ ಸಿನಿಮಾ

ಶ್ರೀನಿಧಿ ಪ್ರಸ್ತುತ ತೆಲುಗಿನ 'ತೆಲುಸು ಕದಾ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಸಿದ್ದು ಜೊನ್ನಲಗೊಂಡ ನಾಯಕ.

'ತೆಲುಸು ಕದಾ'

ಸುದೀಪ್ ನಟಿಸಲಿರುವ 47ನೇ ಸಿನಿಮಾಕ್ಕೂ ಸಹ ಶ್ರೀನಿಧಿ ಶೆಟ್ಟಿಯೇ ನಾಯಕಿ. ಈ ಸಿನಿಮಾವನ್ನು ತಮಿಳಿನ ಚೇರನ್ ನಿರ್ದೇಶಿಸಲಿದ್ದಾರೆ.

ಸುದೀಪ್ ಸಿನಿಮಾ

ಶ್ರೀನಿಧಿ ಶೆಟ್ಟಿ, ‘ಕೆಜಿಎಫ್’ ಸಿನಿಮಾದ ಹೊರತಾಗಿ ನಟಿಸಿರುವುದು ‘ಕೋಬ್ರಾ’ ಹೆಸರಿನ ಸಿನಿಮಾದಲ್ಲಿ ಮಾತ್ರವೇ ಈ ಸಿನಿಮಾಕ್ಕೆ ಚಿಯಾನ್ ವಿಕ್ರಂ ನಾಯಕ.

‘ಕೋಬ್ರಾ’

ಶ್ರೀನಿಧಿ ಶೆಟ್ಟಿ, ಸುಂದರಿ, ಪ್ರತಿಭಾವಂತೆ, ಗ್ಲಾಮರಸ್ ಪಾತ್ರಗಳಲ್ಲದೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರವೇ ಆರಿಸಿಕೊಳ್ಳುತ್ತಿದ್ದಾರೆ. ಶ್ರೀನಿಧಿಗೆ ಒಳ್ಳೆಯ ಭವಿಷ್ಯ ಕಾದಿದೆ.

ಒಳ್ಳೆಯ ಭವಿಷ್ಯ

ಟಾಲಿವುಡ್​ನಲ್ಲಿ ಬ್ಯುಸಿಯಾಗಿರುವ ಕನ್ನಡತಿ ಶ್ರೀಲೀಲಾ ಬಾಲಿವುಡ್​ಗೆ ಹೋಗಲಿದ್ದಾರೆಯೇ?