ಬಾಲಿವುಡ್ ಬೆಡಗಿ ಕಿಯಾರ ಅಡ್ವಾಣಿಯ ಸಪೂರ ದೇಹದ ಗುಟ್ಟೇನು? ಡಯಟ್ ಹೇಗಿರುತ್ತೆ? 

04 AUG 2024

 Manjunatha

ಬೆಡಗಿ ಕಿಯಾರಾ ಅಡ್ವಾಣಿ, ಸೌಂದರ್ಯ ಮತ್ತು ಪ್ರತಿಭೆ ಎರಡೂ ಹೊಂದಿರುವ ಬಾಲಿವುಡ್​ನ ಬೇಡಿಕೆಯ ನಟಿ.

ಬಾಲಿವುಡ್​ ಬೇಡಿಕೆಯ ನಟಿ

ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಮದುವೆಯಾಗಿ ಸಿನಿಮಾಕ್ಕಿಂತಲೂ ಜೀವನವೇ ಮುಖ್ಯ ಎಂದು ತೋರಿಸಿರುವ ನಟಿ ಕಿಯಾರಾ ಅಡ್ವಾಣಿ.

ಸಿದ್ಧಾರ್ಥ್ ಜೊತೆ ಮದುವೆ

ಮದುವೆಯಾದ ಬಳಿಕವೂ ಕಿಯಾರಾ ಅಡ್ವಾಣಿಗೆ ಬೇಡಿಕೆ ಕಡಿಮೆ ಆಗಿಲ್ಲ ಮಾತ್ರವಲ್ಲೆ ಮೊದಲಿಗಿಂತಲೂ ಹೆಚ್ಚು ಅವಕಾಶ ಸಿಗುತ್ತಿವೆ. ಇದೇ ಕಾರಣಕ್ಕೆ ಅವರು ಡಯಟ್ ಶಿಸ್ತಾಗಿಟ್ಟುಕೊಂಡಿದ್ದಾರೆ.

 ಕಿಯಾರಾ ಶಿಸ್ತಿನ ಡಯಟ್

ಮನೆಯ ಆಹಾರವನ್ನಷ್ಟೆ ತಿನ್ನುವ ಕಿಯಾರಾ ಬೇಯಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ಆದರೆ ಆಹಾರದಲ್ಲಿ ಮಸಾಲೆಗಳನ್ನು ಅತ್ಯಂತ ಕಡಿಮೆ ಬಳಸುತ್ತಾರೆ.

 ಮಸಾಲೆ ಕಡಿಮೆ ಇರಬೇಕು

ಬೆಂಡೇಕಾಯಿ, ಕುಂಬಳಕಾಯಿ, ಸಾಲ್ಮೋನ್ ಊಟದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸುವುದಿಲ್ಲ.

   ತರಕಾರಿ, ಹಣ್ಣು ಹೆಚ್ಚು

ಬೆಳಗೆದ್ದ ಕೂಡಲೇ ನಿಂಬೆಹಣ್ಣಿನ ರಸ ಬೆರೆತ ಬಿಸಿ ನೀರು ಸೇವಿಸುತ್ತಾರೆ. ಪೂರ್ತಿ ದಿನದಲ್ಲಿ ಸಹ ನೀರು ಸೇವನೆಗೆ ಹೆಚ್ಚು ಆದ್ಯತೆ ನೀಡುತ್ತಾರೆ.

  ನಿಂಬೆ-ಬಿಸಿನೀರು ಸೇವನೆ

ಆಹಾರವನ್ನು ಶಿಸ್ತಾಗಿ ಸೇವನೆ ಮಾಡುವ ಜೊತೆಗೆ ವ್ಯಾಯಾಮವನ್ನೂ ಸಹ ತಪ್ಪಿಸುವುದಿಲ್ಲ ನಟಿ ಕಿಯಾರಾ ಅಡ್ವಾಣಿ.

   ವ್ಯಾಯಾಮ ತಪ್ಪಿಸಲ್ಲ

ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ ಸಖತ್ ಫೋಟೊಶೂಟ್, ಕಾರಣವೇನು?