ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಿಯಾರಾ ಅಡ್ವಾಣಿ ಸುತ್ತಾಟ, ಧರಿಸಿರುವ ಸೂಟ್​ನ ಬೆಲೆ ಎಷ್ಟು ಲಕ್ಷ ಗೊತ್ತೆ?

10 July 2024

Author : Manjunatha

ಬೆಡಗಿ ಕಿಯಾರಾ ಅಡ್ವಾಣಿ ಬಾಲಿವುಡ್​ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಯಾವುದೇ ವಿವಾದಗಳಿಲ್ಲದೆ ತಮ್ಮ ಪಾಡಿಗೆ ನಟನೆ ಮೇಲಷ್ಟೆ ಗಮನ ಹರಿಸಿದ್ದಾರೆ.

ಬೆಡಗಿ ಕಿಯಾರಾ ಅಡ್ವಾಣಿ

ವೃತ್ತಿ ಜೀವನಕ್ಕಾಗಿ ಮದುವೆಯನ್ನು ತಿರಸ್ಕರಿಸಿ ನಟಿಯರಿರುವಾಗ ವೃತ್ತಿಯ ಉತ್ತುಂಗದಲ್ಲಿರುವಾಗಲೇ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮದುವೆಯಾದರು ಕಿಯಾರಾ ಅಡ್ವಾಣಿ.

   ಸಿದ್ಧಾರ್ಥ್ ಮಲ್ಹೋತ್ರಾ

ಸಿದ್ಧಾರ್ಥ್ ಜೊತೆಗೆ ಆಗಾಗ್ಗೆ ಹೊರಗೆ ಸುತ್ತಾಡುವ ಕಿಯಾರಾ. ಇತ್ತೀಚೆಗೆ ವಿಂಬಲ್ಡನ್ ನೋಡಲು ಪತಿಯೊಟ್ಟಿಗೆ ತೆರಳಿದ್ದರು. ಈ ವೇಳೆ ಅವರು ಧರಿಸಿದ್ದ ತಿಳಿ ನೀಲಿ ಸೂಟ್ ಗಮನ ಸೆಳೆಯಿತು.

ತಿಳಿ ನೀಲಿ ಬಣ್ಣದ ಸೂಟ್

ಅಂದಹಾಗೆ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಧರಿಸಿರುವ ಸೂಟ್​ ಮತ್ತು ಪ್ಯಾಂಟ್​ನ ಬೆಲೆ ಬರೋಬ್ಬರಿ 1.09 ಲಕ್ಷ ರೂಪಾಯಿಗಳು. ಇದು ನಟಿಗೆ ತೀರ ದುಬಾರಿಯೇನಲ್ಲ ಬಿಡಿ.

    ಉಡುಪಿನ ಬೆಲೆ ಎಷ್ಟು?

ಇದು ಸಾಧಾರಣ ಬಟ್ಟೆಯಿಂದ ಮಾಡಿದ ಸೂಟ್ ಅಲ್ಲ ಬದಲಿಗೆ ವೆಲ್ವೆಟ್ ಬಟ್ಟೆ ಬಳಸಿ ಮಾಡಿರುವ ಬಳುಕುವ ಸೂಟ್. ಹಾಗಾಗಿ ಇದಕ್ಕೆ ಭಾರಿ ಬೆಲೆ.

 ವೆಲ್ವೆಟ್ ಬಟ್ಟೆಯ ಸೂಟ್

ಕಿಯಾರಾ ಅಡ್ವಾಣಿ ಕೈಯಲ್ಲಿ ಹಿಡಿದಿರುವ ಪುಟ್ಟ ಬ್ಯಾಗಿನ ಬೆಲೆ ಲಕ್ಷಗಳಲ್ಲಿದೆ. ಫ್ಯಾಷನ್​ಗೆ ಹೆಚ್ಚು ಒತ್ತು ನೀಡುತ್ತಾರೆ ಬೆಡಗಿ ಕಿಯಾರಾ ಅಡ್ವಾಣಿ.

   ಫ್ಯಾಷನ್​ಗೆ ಹೆಚ್ಚು ಒತ್ತು

ಕಿಯಾರಾ ಅಡ್ವಾಣಿ ಇದೀಗ ರಾಮ್ ಚರಣ್ ತೇಜ ನಟನೆಯ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕೆಲವು ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

‘ಗೇಮ್ ಚೇಂಜರ್’ ಸಿನಿಮಾ

ಅಪರೂಪಕ್ಕೆ ಸಾಧಾರಣ ಬಟ್ಟೆ ಧರಿಸಿದ ಗ್ಲಾಮರಸ್ ನಟಿ ಆಲಿಯಾ ಎಫ್, ಬೆಲೆ ಎಷ್ಟು ಗೊತ್ತೆ?