ಕನ್ನಡದ ‘ಗೂಗ್ಲಿ’ ಸಿನಿಮಾದಲ್ಲಿ ನಟಿಸಿದ್ದ ಕೃತಿ ಕರಬಂಧ ಇತ್ತೀಚೆಗೆ ವಿವಾಹವಾಗಿದ್ದು, ಕೃತಿ ಮದುವೆಗೆ ಧರಿಸಿದ್ದ ಉಡುಗೆಯ ಬೆಲೆ ಎಷ್ಟು ಲಕ್ಷ?

17 Mar 2024

Author : Manjunatha

ನಟಿ ಕೃತಿ ಕರಬಂಧ, ಬಹು ವರ್ಷಗಳ ಗೆಳೆಯ ಪುಲ್ಕಿತ್ ಸಮರ್ಥ್ ಅವರನ್ನು ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಇವರ ಮದುವೆ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿದೆ.

ಗೋವಾದಲ್ಲಿ ಮದುವೆ

ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ಮದುವೆಗೆ ಕೇವಲ ಕುಟುಂಬ ಸದಸ್ಯರು, ಅತ್ಯಂತ ಆಪ್ತ ಗೆಳೆಯರು ಮಾತ್ರವೇ ಭಾಗವಹಿಸಿದ್ದರು.

ಪುಲ್ಕಿತ್ ಸಮರ್ಥ್ ಜೊತೆ

ಮದುವೆ ದಿನ ಕೃತಿ ಕರಬಂಧ ಗುಲಾಬಿ ಬಣ್ಣದ ಸುಂದರವಾದ ಲೆಹಂಗಾ ಉಡುಗೆಯನ್ನು ಧರಿಸಿದ್ದರು. ಕೃತಿ ಧರಿಸಿದ್ದ ಈ ಉಡುಗೆ ಸಖತ್ ಗಮನ ಸೆಳೆಯಿತು.

ಗುಲಾಬಿ ಬಣ್ಣದ ಲೆಹಂಗಾ

ಅಂದಹಾಗೆ ಕೃತಿ ತಮ್ಮ ಮದುವೆಯ ದಿನ ಧರಿಸಿದ್ದ ವಿಶೇಷ ವಿನ್ಯಾಸದ ಉಡುಗೆಯ ಬೆಲೆ ಬರೋಬ್ಬರಿ ಐದು ಲಕ್ಷ ರೂಪಾಯಿಗಳು ಎನ್ನಲಾಗುತ್ತಿದೆ.

      ಬೆಲೆ ಎಷ್ಟು ಲಕ್ಷ?

ಕೃತಿ ಕರಬಂಧ ಮದುವೆ ದಿನ ಧರಿಸಿದ್ದ ರೋಸಿ ಲೆಹಂಗಾವನ್ನು ಸುಂದರಡವಾಗಿ ವಿನ್ಯಾಸ ಗೊಳಿಸಿದ್ದು ಅನಾಮಿಕಾ ಖನ್ನಾ, ಹಲವು ರೀತಿಯ ವರ್ಕ್​ಗಳನ್ನು ಲೆಹಂಗಾಕ್ಕೆ ಮಾಡಲಾಗಿತ್ತು.

    ವಿನ್ಯಾಸ ಯಾರದ್ದು?

ಕೃತಿ ಕರಬಂಧ, 2018ರಿಂದಲೂ ಪುಲ್ಕಿತ್ ಸಮರ್ಥ್ ಜೊತೆ ಪ್ರೀತಿಯಲ್ಲಿದ್ದಾರೆ. ಈ ಜೋಡಿ ಕಳೆದ ಕೆಲ ವರ್ಷಗಳಿಂದ ಲಿವಿನ್ ರಿಲೇಷನ್​ನಲ್ಲಿಯೂ ಇತ್ತು.

   ಪುಲ್ಕಿತ್ ಜೊತೆ ಪ್ರೀತಿ

ಪುಲ್ಕಿತ್ ಸಾಮರ್ಥ್ ಸಹ ನಟರೇ ಆಗಿದ್ದು, ಹಿಂದಿಯ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುಲ್ಕಿತ್​ಗೆ ದೊಡ್ಡ ಯಶಸ್ಸು ಈ ವರೆಗೆ ಧಕ್ಕಿಲ್ಲ.

ದೊಡ್ಡ ಯಶಸ್ಸು ಸಿಕ್ಕಿಲ್ಲ

ಕೃತಿ ಕರಬಂಧ, ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶ್ ನಾಯಕರಾಗಿ ನಟಿಸಿದ್ದ ‘ಗೂಗ್ಲಿ’ ಸಿನಿಮಾ ಕೃತಿಗೆ ಕನ್ನಡದಲ್ಲಿ ದೊಡ್ಡ ಜನಪ್ರಿಯತೆ ಗಳಿಸಿಕೊಟ್ಟಿತು.

‘ಗೂಗ್ಲಿ’ ಸಿನಿಮಾ ಚೆಲುವೆ

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಟಿ. ಬಾಲಿವುಡ್​ನಿಂದ ಪ್ರಿಯಾಂಕಾ ಚೋಪ್ರಾ ದೂರಾಗಿ ಬಹು ಸಮಯವೇ ಆಗಿದೆ. ಈಗ ಹಾಲಿವುಡ್​ನಲ್ಲಿ ನೆಲೆಗೊಂಡಿದ್ದಾರೆ.

ಕೃತಿಯ ಕನ್ನಡ ಸಿನಿಮಾ

ನಟಿ ಪ್ರಿಯಾಂಕಾ ಚೋಪ್ರಾ ಕೊರಳಲ್ಲಿರುವ ಸುಂದರ ನೆಕ್​ಲೆಸ್ ಬೆಲೆ ಎಷ್ಟೆಂದು ನೀವು ಊಹಿಸಲಾರಿರಿ...