ನಟಿ ಪ್ರಿಯಾಂಕಾ ಚೋಪ್ರಾ ಕೊರಳಲ್ಲಿ ಧರಿಸಿರುವ ಸುಂದರ ನೆಕ್​ಲೆಸ್​ನ ಅಸಲಿ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?

16 Mar 2024

Author : Manjunatha

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಟಿ. ಬಾಲಿವುಡ್​ನಿಂದ ಪ್ರಿಯಾಂಕಾ ಚೋಪ್ರಾ ದೂರಾಗಿ ಬಹು ಸಮಯವೇ ಆಗಿದೆ. ಈಗ ಹಾಲಿವುಡ್​ನಲ್ಲಿ ನೆಲೆಗೊಂಡಿದ್ದಾರೆ.

ಹಾಲಿವುಡ್ ನಟಿ ಪ್ರಿಯಾ

ಪ್ರಿಯಾಂಕಾ ಚೋಪ್ರಾ ಹಾಲಿವುಡ್​ನಲ್ಲಿ ಒಂದರ ಹಿಂದೊಂದು ಪ್ರಾಕೆಕ್ಟ್ ಒಪ್ಪಿಕೊಳ್ಳುತ್ತಿದ್ದು ಒಳ್ಳೆಯ ಸಂಭಾವನೆಯನ್ನೂ ಸಹ ಪಡೆದುಕೊಳ್ಳುತ್ತಿದ್ದಾರೆ.

ಹಾಲಿವುಡ್ ಸಿನಿಮಾಗಳು

ಒಳ್ಳೆಯ ಫ್ಯಾಷನ್ ಸೆನ್ಸ್ ಇರುವ, ಆಗಾಗ್ಗೆ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿ ಮಾಡುವ ಪ್ರಿಯಾಂಕಾ ಇತ್ತೀಚೆಗೆ ಭಾರತಕ್ಕೆ ಬಂದಾಗ ಅವರ ಕೊರಳಲ್ಲಿ ಧರಿಸಿದ್ದು ನೆಕ್​ಲೆಸ್ ಗಮನ ಸೆಳೆಯಿತು.

ಒಳ್ಳೆಯ ಫ್ಯಾಷನ್ ಸೆನ್ಸ್

ಸಾಮಾನ್ಯ ನೆಕ್​ಲೆಸ್​ನಂತಲ್ಲದೆ ಸಣ್ಣ ಹೊಳೆಯುವ ಹಾವೊಂದು ಅವರ ಕೊರಳಿಗೆ ಸುತ್ತಿಕೊಂಡಂತಿದ್ದು ಆ ನೆಕ್​ಲೆಸ್​. ಪ್ರಿಯಾಂಕಾ ಧರಿಸಿದ್ದ ನೆಕ್​ಲೆಸ್​ ಬಗ್ಗೆ ಫ್ಯಾಷನ್ ಮ್ಯಾಗಜೀನ್​ಗಳು ಚರ್ಚೆ ಮಾಡಿದ್ದವು.

ಸುಂದರ ನೆಕ್​ಲೆಸ್

ಅಂದಹಾಗೆ ಪ್ರಿಯಾಂಕಾ ಚೋಪ್ರಾ ಧರಿಸಿರುವುದು ಜಗದ್ವಿಖ್ಯಾತ ಬಲ್ಗೇರಿ ಬ್ರ್ಯಾಂಡ್​ನ ಸರ್ಪೆಂಟಿ ನೆಕ್​ಲೆಸ್, ಬಲ್ಗೇರಿ ಬ್ರ್ಯಾಂಡ್​ನ ಅತ್ಯಂತ ದುಬಾರಿ ನೆಕ್​ಲೆಸ್​ ಕಲೆಕ್ಷನ್​ಗಳಲ್ಲಿ ಇದು ಸಹ ಒಂದು.

ಬಲ್ಗೇರಿ ಬ್ರ್ಯಾಂಡ್​ ನೆಕ್​ಲೆಸ

ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಚಿನ್ನ ಮತ್ತು ವಜ್ರ ಬಳಸಿ ತಯಾರಿಸಲಾದ ಸೆರ್ಪೆಂಟಿ ನೆಕ್​ಲೆಸ್​ನ ಬೆಲೆ ಬರೋಬ್ಬರಿ 58.65 ಲಕ್ಷ ರೂಪಾಯಿಗಳು.

ನೆಕ್​ಲೆಸ್ ಬೆಲೆ ಎಷ್ಟು?

ಬಲ್ಗೇರಿ ಜಗದ್ವಿಖ್ಯಾತ ಫ್ಯಾಷನ್ ಬ್ರ್ಯಾಂಡ್ ಆಗಿದ್ದು ಆಭರಣಗಳ ಜೊತೆಗೆ ಬಟ್ಟೆ, ಬ್ಯಾಗುಗಳ ನಿರ್ಮಾಣ ಮತ್ತು ಮಾರಾಟ ಮಾಡುತ್ತದೆ. ವಿಶ್ವಿಖ್ಯಾತ ಸೆಲೆಬ್ರಿಟಿಗಳ ಮೆಚ್ಚಿನ ಬ್ರ್ಯಾಂಡ್ ಇದು.

ಮೆಚ್ಚಿನ ಬ್ರ್ಯಾಂಡ್ ಇದು

ಪ್ರಿಯಾಂಕಾ ಚೋಪ್ರಾಗೆ ಆಭರಣಗಳ ಮೇಲೆ ವಿಶೇಷ ಒಲವು. ತಮ್ಮ ಉಡುಪಿಗೆ ಹೊಂದುವಂತೆ ದುಬಾರಿ ಆಭರಣಗಳನ್ನು ಪ್ರಿಯಾಂಕಾ ಚೋಪ್ರಾ ಧರಿಸುತ್ತಿರುತ್ತಾರೆ.

ಆಭರಣಗಳ ಮೇಲೆ ಒಲವು

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಾಲಿವುಡ್​ನ ಕೆಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಬಾಲಿವುಡ್​ನ ಕೆಲವು ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ

ಟಾಲಿವುಡ್ ಸ್ಟಾರ್ ನಟನಿಗೆ ನಾಯಕಿಯಾದ ಊರ್ವಶಿ ರೌಟೆಲ್ಲಾ, ಯಾರು ಆ ಸ್ಟಾರ್ ನಟ?