ಟಾಲಿವುಡ್​ನ ಸ್ಟಾರ್ ನಟನ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರಂತೆ ಊರ್ವಶಿ ರೌಟೆಲ್ಲಾ, ಯಾರು ಆ ನಟ?

15 Mar 2024

Author : Manjunatha

ಊರ್ವಶಿ ರೌಟೆಲ್ಲಾ ಭಾರತದ ಹಾಟ್ ನಟಿಯರಲ್ಲಿ ಒಬ್ಬರು. ಹಾಟ್​ನೆಸ್​ನಿಂದಾಗಿ ಐಟಂ ಹಾಡುಗಳಿಗೆ ಸೀಮಿತವಾಗಿಬಿಟ್ಟಿದ್ದಾರೆ ಈ ನಟಿ.

ಭಾರತದ ಹಾಟ್ ನಟಿ

ಆದರೆ ಇದೀಗ ತಾವು ಟಾಲಿವುಡ್​ನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವುದಾಗಿ ಸ್ವತಃ ಊರ್ವಶಿ ಹೇಳಿಕೊಂಡಿದ್ದಾರೆ.

ಸ್ಟಾರ್ ನಟನಿಗೆ ನಾಯಕಿ

ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆ ಸಿನಿಮಾದಲ್ಲಿ ಊರ್ವಶಿ ನಾಯಕಿಯಂತೆ.

ನಂದಮೂರಿ ಬಾಲಕೃಷ್ಣ

ಆದರೆ ಸತ್ಯ ಬೇರೆಯೇ ಇದೆ ಎಂಬ ಸುದ್ದಿಯಿದೆ. ಬಾಲಕೃಷ್ಣರ ಮುಂದಿನ ಸಿನಿಮಾದಲ್ಲಿ ಊರ್ವಶಿಗೆ ಸಣ್ಣ ಪಾತ್ರವಿದೆಯಂತೆ, ಜೊತೆಗೆ ಒಂದು ಐಟಂ ಸಾಂಗ್ ಸಹ.

ಊರ್ವಶಿಗೆ ಸಣ್ಣ ಪಾತ್ರ

ಬಾಲಕೃಷ್ಣರ ಸಿನಿಮಾನಲ್ಲಿ ಊರ್ವಶಿ ರೌಟೆಲ್ಲಾರದ್ದು ನಾಯಕಿಯ ಪಾತ್ರವಲ್ಲ, ಬದಲಿಗೆ ಗ್ಲಾಮರ್ ಉದ್ದೇಶಕ್ಕೆ ಇರುವ ಎರಡನೇ ನಾಯಕಿಯ ಪಾತ್ರ ಎನ್ನಲಾಗುತ್ತಿದೆ.

ನಾಯಕಿಯ ಪಾತ್ರವಲ್ಲ

ಊರ್ವಶಿ ರೌಟೆಲ್ಲಾ ಈಗಾಗಲೇ ಕೆಲವು ತೆಲುಗು ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಸೊಂಟ ಕುಣಿಸಿದ್ದಾರೆ. 

       ತೆಲುಗು ಸಿನಿಮಾ 

ಚಿರಂಜೀವಿ ನಟನೆಯ ‘ವಾಲ್ತೇರು ವೀರಯ್ಯ’, ಪವನ್ ನಟನೆಯ ‘ಬ್ರೋ’, ‘ಸ್ಕಂದ’, ‘ಏಜೆಂಟ್’ ಸಿನಿಮಾಗಳಲ್ಲಿ ಊರ್ವಶಿ ಹೆಜ್ಜೆ ಹಾಕಿದ್ದಾರೆ.

ತೆಲುಗು ಸಿನಿಮಾಗಳು

ಇತ್ತೀಚೆಗೆ ಬಿಡುಗಡೆ ಆದ ಹನಿಸಿಂಗ್​ರ ಹೊಸ ಹಾಡಿನಲ್ಲಿ ಊರ್ವಶಿ ರೌಟೆಲ್ಲಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಹಾಡು ಸಖತ್ ಹಿಟ್ ಆಗಿದೆ.

ಹನಿಸಿಂಗ್ ಹಾಡು

ಅಂದಹಾಗೆ ಊರ್ವಶಿ ರೌಟೆಲ್ಲಾ ಕನ್ನಡದ ‘ಮಿಸ್ಟರ್ ಐರಾವತ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾಕ್ಕೆ ದರ್ಶನ್ ನಾಯಕ.

ಮಿಸ್ಟರ್ ಐರಾವತ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಧರಿಸಿರುವ ಈ ಗ್ಲಾಮರಸ್ ಉಡುಪಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು?